ರಾಜ್ಯದಲ್ಲಿರುವುದು “ಲಂಗಾ’ ಸರ್ಕಾರ
Team Udayavani, Dec 1, 2017, 4:03 PM IST
ರಾಯಚೂರು: ನಾಚಿಕೆ, ಮಾನ, ಮರ್ಯಾದೆ ಇಲ್ಲದವರನ್ನು ಗ್ರಾಮೀಣ ಭಾಷೆಯಲ್ಲಿ “ಲಂಗಾ’ ಎಂದು ಬೈಯ್ಯುತ್ತಾರೆ. ನನಗೆ ಸಂಸ್ಕೃತ ಭಾಷೆ ಗೊತ್ತಿಲ್ಲ. ಹಾಗಾಗಿ ಆಡು ಭಾಷೆಯಲ್ಲೇ ಕಾಂಗ್ರೆಸ್ ಸರ್ಕಾರವನ್ನು “ಲಂಗಾ’ ಸರ್ಕಾರ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಟೀಕಿಸಿದರು.
ಸಮೀಪದ ವೈಟಿಪಿಎಸ್ ಎದುರು ಶಾಸಕರ ಪಾದಯಾತ್ರೆಯ ನಾಲ್ಕನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರ ಪಾದಯಾತ್ರೆ ಕಂಡು ಕಾಂಗ್ರೆಸ್ ನಾಯಕರಿಗೆ ಭಯ ಶುರುವಾಗಿದೆ. ಕೆಲವರಿಗೆ ಜ್ವರ ಬಂದರೆ, ಕೆಲವರಿಗೆ ನಡುಕ ಶುರುವಾಗಿದೆ. ರೈತರಿಗೆ ವಿದ್ಯುತ್ ಕೊಡುವುದು ಸರ್ಕಾರದ ಕರ್ತವ್ಯ. ಅದಕ್ಕೂ ವಿಜಯೋತ್ಸವ ಆಚರಿಸಿಕೊಳ್ಳುತ್ತಾರೆ ಎಂದರೆ ಅವರು ಭಂಡರೇ ಸರಿ. ಸರ್ಕಾರ ನಾಲ್ಕೂವರೆ ವರ್ಷ ರಾಜ್ಯವನ್ನು ಲೂಟಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರತಿ ಪ್ರಜೆ ಮೇಲೆ 25 ಸಾವಿರ ರೂ. ಸಾಲದ ಹೊರೆ ಹೊರೆಸಿದ್ದಾರೆ ಎಂದರು.
ರಾಯಚೂರಲ್ಲಿರುವುದು ಅಯೋಗ್ಯ ಡಿಸಿ. ಅವರು ಬಗಾದಿ ಗೌತಮ್ ಅಲ್ಲ, ಕಾಂಗ್ರೆಸ್‌ಗೆ ಬಾಗಿದ ಗೌತಮ್. ಡಿಸಿಗೆ ಐದು ಪೈಸೆ ಜ್ಞಾನವಿಲ್ಲ. ಜನರ ಕಷ್ಟವೇ ಗೊತ್ತಿಲ್ಲ. ಸಂಸದ ಹೇಳಿದಂತೆ ಕೇಳುವುದೇ ಅವರ ಕೆಲಸ. ಸಂಸದರಿಗೆ ಹೆಂಡಂದಿರು ಜಾಸ್ತಿ; ಡಿಸಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಸದರ ಮನೆಯವರ ಬಟ್ಟೆ ಒಗೆಯಲಿ.
ಜಿಲ್ಲಾ ಉಸ್ತುವಾರಿ ಸಚಿವರು ರಾಯಚೂರಿಗೆ ಬರುವುದು ಕಬಾಬ್ ತಿನ್ನಲು. ಅವರು ತನ್ವೀರ್ ಸೇಠ್ಠ ಅಲ್ಲ ಕಬಾಬ್ ಸೇಠ್ಠ… ಎಂದು ಶಾಸಕ ಶಿವನಗೌಡ ಲೇವಡಿ ಮಾಡಿದರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಚಿವರಿಗೆ ಗೊತ್ತಿಲ್ಲ. ಮೈಸೂರಿನಿಂದ ಅವರು ಇಲ್ಲಿಗೆ ಬರುವುದೇ ಕಬಾಬ್‌ಗಾಗಿ ಎಂದು ಟೀಕಿಸಿದರು.
ಇದೊಂದು ಪಕ್ಷಾತೀತ ಹೋರಾಟ. ಕಾಂಗ್ರೆಸ್‌ಗೆ ನಿಜಕ್ಕೂ ಮಾನವೀಯತೆ ಇದ್ದರೆ ಅವರು ಕೂಡ ಹೋರಾಟದಲ್ಲಿ
ಭಾಗಿಯಾಗಬೇಕಿತ್ತು. ಎಲ್ಲರೂ ಒಗ್ಗೂಡಿ ರೈತರಿಗೆ ನ್ಯಾಯ ಕಲ್ಪಿಸೋಣ ಎನ್ನಬೇಕಿತ್ತು. ಆದರೆ, ಅವರಿಗೆ ವಿಜಯೋತ್ಸವ ಯಾಕೆ ಆಚರಿಸಬೇಕು ಎಂಬುದೇ ಗೊತ್ತಿಲ್ಲ.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 150 ಸ್ಥಾನ ಬರುವುದು ಖಚಿತ. ಕಾಂಗ್ರೆಸ್ 30 ಸ್ಥಾನಕ್ಕೆ ಕುಸಿಯಲಿದ್ದು, ಪ್ರತಿ ಪಕ್ಷ ಸ್ಥಾನ ಪಡೆಯಲು ಕೂಡ ಅರ್ಹವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಏಕ ವಚನದಲ್ಲೇ ನಿಂದನೆ: ವೇದಿಕೆಯಲ್ಲಿ ಮಾತನಾಡಿದವರೆಲ್ಲ ಸಿಎಂ, ಇಂಧನ ಸಚಿವ ಸೇರಿ ಕಾಂಗ್ರೆಸ್ ಮುಖಂಡರು ಹಾಗೂ ಅಧಿಕಾರಿಗಳನ್ನು ಏಕ ವಚನದಲ್ಲೇ ನಿಂದಿಸಿದರು. ಶಾಸಕರಾದ ತಿಪ್ಪರಾಜು, ಡಾ|
ಶಿವರಾಜ್ ಪಾಟೀಲ್, ಶಿವನಗೌಡ ನಾಯಕ, ಮುಖಂಡ ಎನ್.ಶಂಕ್ರಪ್ಪ, ಕರವೇ ಮುಖಂಡ ಅಶೋಕ್ ಜೈನ್ ಸೇರಿದಂತೆ ಬಹುತೇಕರು ಏಕವಚನದಲ್ಲೇ ಸಂಬೋಧಿಸಿದರು. ಆವೇಷದಲ್ಲಿ ಅವನು ಇವನು ಎಂಬ ಪದಗಳ ಬಳಕೆ ಹೆಚ್ಚಾಗಿ ಕಂಡು ಬಂತು.
ಕಬಾಬ್ ಸೇಠ್ಠ್ ‘
ಜಿಲ್ಲಾ ಉಸ್ತುವಾರಿ ಸಚಿವರು ರಾಯಚೂರಿಗೆ ಬರುವುದು ಕಬಾಬ್ ತಿನ್ನಲು. ಅವರು ತನ್ವೀರ್ ಸೇಠ್ಠ್..
ಅಲ್ಲ ಕಬಾಬ್ ಸೇಠ್ಠ್. ಎಂದು ಶಾಸಕ ಶಿವನಗೌಡ ಲೇವಡಿ ಮಾಡಿದರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಚಿವರಿಗೆ
ಗೊತ್ತಿಲ್ಲ. ಮೈಸೂರಿನಿಂದ ಅವರು ಇಲ್ಲಿಗೆ ಬರುವುದೇ ಕಬಾಬ್‌ಗಾಗಿ ಎಂದು ಟೀಕಿಸಿದರು.
ಫ್ಯೂಸ್ ಪಾಲಿಟಿಕ್ಸ್: ಬಿಜೆಪಿ ಮುಖಂಡ ಎನ್.ಶಂಕ್ರಪ್ಪ ಮಾತನಾಡಿ, ಈಗ 12 ಗಂಟೆ ವಿದ್ಯುತ್ ಕೊಟ್ಟು ನಮ್ಮ ಹೋರಾಟ ಮುಗಿದ ಮೇಲೆ ಫ್ಯೂಸ್ ತೆಗೆಯುತ್ತಾರೆ. ಮುಂದಿನ ಚುನಾವಣೆಯಲ್ಲಿ ರೈತರೆಲ್ಲ ಸೇರಿ ಸಿಎಂ ಸಿದ್ದರಾಮಯ್ಯರ ಫ್ಯೂಸ್ ತೆಗೆಯಬೇಕು ಎಂದರು. ಇದಕ್ಕೆ ದನಿಗೂಡಿದ ಶಾಸಕ ಶಿವನಗೌಡ, ಬರೀ ಸಿದ್ದರಾಮಯ್ಯರದ್ದಲ್ಲ ಇಡೀ ಕಾಂಗ್ರೆಸ್ ಪಕ್ಷದ ಫ್ಯೂಸ್ ತೆಗೆದು ಬುದ್ದಿ ಕಲಿಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.