ಸುಕ್ಷೇತ್ರ ಉಟಕನೂರು ಅಜ್ಜನ ಜಾತ್ರೆ ಇಂದು


Team Udayavani, Jan 28, 2019, 10:39 AM IST

ray-2.jpg

ಕವಿತಾಳ: ಸಮಿಪದ ಸುಕ್ಷೇತ್ರ ಉಟಕನೂರ ಶ್ರೀ ಮರಿಬಸವಲಿಂಗ ಶಿವಯೋಗಿಗಳ ಜಾತ್ರೆ ಬಂದರೆ ಸಾಕು ಸುತ್ತಲಿನ ಗ್ರಾಮದ ಭಕ್ತರಿಗೆ ಸಂಭ್ರಮವೋ, ಸಂಭ್ರಮ. ಎತ್ತಿನ ಗಾಡಿ, ಟಂಟಂ, ಜೀಪು, ಕಾರ್‌, ಬೈಕ್‌ ಸೇರಿ ಸಾರಿಗೆ ಬಸ್‌ಗಳಲ್ಲಿ ಭಕ್ತಸಾಗರವೇ ಹರಿದು ಬರಲಿದೆ.

ಜ.28ರಂದು ನಡೆಯುವ ಶ್ರೀ ಮರಿಬಸವಲಿಂಗ ಶಿವಯೋಗಿಗಳ 28ನೇ ಜಾತ್ರಾ ಮಹೋತ್ಸವವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಣೆಗೆ ಈಗಾಗಲೇ ಸಿದ್ಧತೆ ಮಾಡಲಾಗಿದೆ. ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ವಿವಧ ಧಾರ್ಮಿಕ ಕಾರ್ಯಕ್ರಮಕ್ಕೆ ಜ.11ರಂದು ಚಾಲನೆ ನೀಡಲಾಗಿದೆ.

ಜಾತ್ರೆ ಪ್ರಯುಕ್ತ ಜ.28ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ, ಪೂಜಾ ಕಾರ್ಯಕ್ರಮ ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಭಜನೆ, ಡೊಳ್ಳು, ನಂದಿಕೋಲು, ಬ್ಯಾಂಡ್‌ ಸೆಟ್, ವೀರಗಾಸೆ ನೃತ್ಯ, ಕಳಸ ಕನ್ನಡಿ ಕುಂಭೋತ್ಸವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮರಿ ಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ನಡೆಯುವುದು. ಸಂಜೆ 6ಕ್ಕೆ ಹೂವಿನ ರಥೋತ್ಸವ ನಡೆಯಲಿದೆ.

ಇತಿಹಾಸ: ಉಟಕನೂರಲ್ಲಿ ಈರಮ್ಮ ತಾಯಿ ಗರ್ಭದಿಂದ ಶಾಲಿವಾಹನ ಶಕೆ 1841 ಸಿದ್ಧಾರ್ಥಿ ನಾಮ ಸಂವತ್ಸರ ಪುಷ್ಯ ಶುದ್ಧ ಪಂಚಮಿ ಸೋಮವಾರದಂದು ಬಸವಲಿಂಗ ಶಿವಯೋಗಿ ಜನಿಸಿದರು. ಶ್ರೀಗಳು 1991ರ ಜ.7 ರಂದು ಲಿಂಗೈಕ್ಯರಾದರು. ಶ್ರೀಗಳು ಜೀವನ ಪೂರ್ತಿ ಹಲವು ಪವಾಡಗಳನ್ನು ಮಾಡಿ ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದರು. ಇಂದಿಗೂ ಭಕ್ತರು ಅವರನ್ನು ಮನೆ-ಮನಗಳಲ್ಲಿ ಆರಾಧಿಸುತ್ತಾರೆ.

ಉಟಕನೂರು ಮಠವು ಬೆಳಗಾವಿ ಜಿಲ್ಲೆಯ ಅಂಕಲಗಿ ಮಠ ಶಾಖಾ ಮಠವಾಗಿದೆ. ಶ್ರೀ ಅಡವಿ ಸಿದ್ದೇಶ್ವರರು ಸುಮಾರು 770 ವರ್ಷಗಳವರೆಗೆ ಬದುಕಿದ್ದಾರೆ ಎಂಬ ಪ್ರತೀತಿ ಇದೆ. ಇವರ ಮಾರ್ಗದರ್ಶನದಲ್ಲಿ ಸಿಂಧನೂರು ತಾಲೂಕಿನ ಅಲಬನೂರು ಶ್ರೀ ಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳು, ಶ್ರೀ ಅಂಕಲಗಿ ಶ್ರೀ ಅಡವಿಸಿದ್ಧೇಶ್ವರರು ಮೂಲಮಠ ಅಲಬನೂರು ಹಾಗೂ ಉಟಕನೂರು ಶ್ರೀಮಠವನ್ನು ಸ್ಥಾಪಿಸಿದ್ದಾರೆ.

ಭರದ ಸಿದ್ಧತೆ: ಜಾತ್ರಾ ಮಹೋತ್ಸವದಂಗವಾಗಿ ಶ್ರೀಮಠಕ್ಕೆ ಸುಣ್ಣ ಬಣ್ಣ ಹಚ್ಚಲಾಗಿದೆ. ಜಗಮಗಿಸುವ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ರಸ್ತೆ ಸಂಪರ್ಕ, ವಿದ್ಯುತ್‌ ದೀಪದ ವ್ಯವಸ್ಥೆ, ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರೀಮಠ ವ್ಯವಸ್ಥೆ ಕಲ್ಪಿಸಿದೆ.

ಗೌರವ ಸನ್ಮಾನ: ಜ.27ರಂದು ವೀರಯೋಧರಿಗೆ, ಕೃಷಿ ಸಾಧಕರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಂದ ಉಪನ್ಯಾಸ ಕಾರ್ಯಕ್ರಮ, ವಿವಿಧ ಕಲಾ ತಂಡದಿಂದ ನೃತ್ಯ, ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು.

ಒತ್ತಾಯ: ಶ್ರೀಮಠಕ್ಕೆ 300 ವರ್ಷಗಳ ಇತಿಹಾಸ ಇದೆ. ಶ್ರೀಮಠದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ಹಳ್ಳಕ್ಕೆ ಸೇತುವೆ ನಿರ್ಮಿಸುವ ಮೂಲಕ ಬಳಗಾನೂರು, ಮಸ್ಕಿ, ಬೆಳ್ಳಿಗನೂರು ಭಕ್ತರಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ‌ ಭಕ್ತ ಬಸನಗೌಡ ಹರ್ವಾಪುರ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.