ಕೊಚ್ಚೆ ನೀರಿಗೆ ತಾತ್ಕಾಲಿಕ ದಾರಿ
Team Udayavani, Jan 12, 2022, 9:37 PM IST
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೆದ್ದಾರಿಯಲ್ಲಿ ಸಂಗ್ರಹಗೊಂಡಿದ್ದ ಚರಂಡಿ ನೀರಿಗೆ ಅ ಧಿಕಾರಿಗಳು ತಾತ್ಕಾಲಿಕ ದಾರಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳು, ಗ್ರಾಪಂ ಅ ಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಒಂದು ಬದಿಯ ಚರಂಡಿ ನೀರನ್ನು ಕಾಲುವೆಗೆ ಹರಿಸಿದ್ದಾರೆ.
ಈ ಕುರಿತು ಉದಯವಾಣಿಯಲ್ಲಿ ಮಂಗಳವಾರ ದಾರಿ ಕಾಣದೆ ಹೆದ್ದಾರಿಯಲ್ಲೇ ನಿಂತ ಚರಂಡಿ ನೀರು ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿ ಕಾರಿಗಳು ಜನರಿಗಾಗುತ್ತಿರುವ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಚರಂಡಿಯನ್ನು ಸಂಪೂರ್ಣ ಸ್ವತ್ಛಗೊಳಿಸುವ ಕಾರ್ಯ ಆರಂಭಿಸಲಾಯಿತು. ಅದರ ಜತೆಗೆ ಒಂದು ಬದಿಯ ಕೊಚ್ಚೆ ನೀರನ್ನು ಸದ್ಯಕ್ಕೆ ಕಾಲುವೆಗೆ ಹರಿಸಲಾಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಅ ಧಿಕಾರಿಗಳ ಜತೆಗೆ ಕೆಲಕಾಲ ಸ್ಥಳೀಯರ ವಾಗ್ವಾದವೂ ನಡೆಯಿತು. ಈಗ ಕೇವಲ ಒಂದು ಬದಿಯ ನೀರನ್ನು ಮಾತ್ರ ತೆರವು ಮಾಡಿದ್ದು, ಇನ್ನೊಂದು ಕೊಚ್ಚೆ ನೀರು ಹರಿಯಲು ದಾರಿ ಇಲ್ಲದಾಗಿದೆ. ಶೀಘ್ರದಲ್ಲೇ ಎಲ್ಲ ನೀರು ತೆರವು ಮಾಡಿ ಶಾಶ್ವತ ಪರಿಹಾರ ಕಲ್ಪಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.