ಶೈಕ್ಷಣಿಕ ದಾಸೋಹಕ್ಕೆ ಮಠಗಳ ಕೊಡುಗೆ ದೊಡ್ಡದು
Team Udayavani, Feb 11, 2022, 3:11 PM IST
ದೇವದುರ್ಗ: ಶೈಕ್ಷಣಿಕ, ದಾಸೋಹಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಸಾಮೂಹಿಕ ವಿವಾಹಗಳು ಮಾಡುತ್ತಿರುವುದು ಗಬ್ಬೂರಿನ ಶ್ರೀಮಠ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಸಮೀಪದ ಗಬ್ಬೂರು ಗ್ರಾಮದಲ್ಲಿ ಜಾತ್ರೆ ನಿಮಿತ್ತ ಬೂದಿಬಸವೇಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ 201 ಸಾಮೂಹಿಕ ವಿವಾಹ ಕಾರ್ಯಕ್ರಮ, ಶ್ರೀಗಳ ತುಲಾಭಾರ, 259ನೇ ಶಿವಾನುಭವಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮದುವೆ ಮಾಡುವುದು, ಮನೆ ಕಟ್ಟುವುದು ಬಡವರ ಪಾಲಿಗೆ ಕಷ್ಟವೇ ಸರಿ. ಇಂಥ ಸ್ಥಿತಿ ನೋಡಿದ ಮಠ-ಮಾನ್ಯಗಳು ಸಾಮೂಹಿಕ ವಿವಾಹದಂಥ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗುತ್ತಿವೆ. ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ. ಪವಿತ್ರ ಕ್ಷೇತ್ರಗಳಲ್ಲಿ ಅಗೋಚರ ಶಕ್ತಿ ಇರುತ್ತದೆ. ಅಂತಹ ಶಕ್ತಿ ಗಬ್ಬೂರು ಮಠದಲ್ಲಿ ಇದೆ. ಪೂಜ್ಯರು ಬಾ ಬಸವ ಎಂದರೆ ರಥ ಸಾಗುತ್ತದೆ. ಇಂತಹ ಮಠದ ದರ್ಶನ ಪಡೆದಿದ್ದು ನನ್ನ ಪುಣ್ಯ ಎಂದು ಹೇಳಿದರು.
ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ನವ ವಧು-ವರರು ಸುಖರಕವಾಗಿ ಬಾಳಿ. ಅನೋನ್ಯವಾಗಿ ಬಾಳುವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಜೀವನ ಸಾಗಿಸಿ. ಬೂದಿ ಬಸವೇಶ್ವರ ಮಠವು ಪ್ರತಿವರ್ಷ ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜಿಸುತ್ತ ಬರುತ್ತಿದೆ. ಇಂತಹ ಪುಣ್ಯದ ಕೆಲಸ ಮಾಡುವುದರಿಂದ ಬಡವರಿಗೆ ಅನುಕೂಲವಾಗಿದೆ. ಪ್ರತಿಯೊಬ್ಬರು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹೇಳಿದರು.
ಪಶ್ಚಕಂತಿ ಸಂಸ್ಥಾನ ಮಠದ ಶ್ರೀ ಚನ್ನಬಸವ ಸ್ವಾಮಿಗಳು ಮಾತನಾಡಿ, ಮಠ-ಮಾನ್ಯಗಳು ಒಳ್ಳೆ ಸಂಸ್ಕಾರ ಪದ್ಧತಿಗಳನ್ನು ಕಳಿಸುತ್ತವೆ. ಭತ್ತದ ನಾಡಿಗಿಂತ ಭಕ್ತರ ನಾಡಿನಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಶ್ರೇಷ್ಠತೆ ಪಡೆದು ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಶ್ರೀಗಳು, ಪರಮ ಪವಿತ್ರವಾದ ಮಹಾ ತಪಸ್ವಿಗಳ ಕ್ಷೇತ್ರವಿದ್ದು, ಹಿಂದಿನ ಕಾಲದಲ್ಲಿ ಬೂದಿ ಬಸವನ ಅಪ್ರತೀಮವಾದದ್ದು. ಖಾವಿ, ಖಾದಿ, ಖಾಕಿಗಳ ಮೇಲೆ ದೇಶ ನಿಂತಿದೆ. ಆಡಳಿತ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸಲು ಈ ಮೂರು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೂದಿ ಬಸವೇಶ್ವಗಳ ಶ್ರೀಗಳು, ಡಾ| ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು, ಚನ್ನವೀರ ಶಿವಾಚಾರ್ಯ, ಸೋಮನಾಥ ಶಿವಾಚಾರ್ಯ, ಶಂಭು ಸೋಮನಾಥ ಶಿವಾಚಾರ್ಯ, ಜಯಸಿದ್ದೇಶ್ವರ ಶಿವಾಚಾರ್ಯ, ಕೆಪಿಎಸ್ ಅಧ್ಯಕ್ಷ ಶಿವಶಂಕರಪ್ಪ ಸಾಹು, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ನಾಪುರ, ಎನ್. ಎಸ್. ಬೋಸರಾಜ್, ಮಾಜಿ ಸಂಸದ ಬಿ.ವಿ. ನಾಯಕ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಂಬಣ್ಣ ನೀಲಗಲ್, ಪ್ರಕಾಶ ಪಾಟೀಲ್, ರಾಮಣ್ಣ ಇರಬಗೇರಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.