ನಿರೀಕ್ಷಿತ ಯಶಸ್ಸು ಕಾಣಬೇಕಿದೆ ನೇತ್ರದಾನ
Team Udayavani, Nov 8, 2021, 12:06 PM IST
ರಾಯಚೂರು: ನಟ ಪುನೀತ್ ರಾಜ್‌ಕುಮಾರ್ ಸಾವಿನ ನಂತರ ರಾಜ್ಯದ ವಿವಿಧೆಡೆ ನೇತ್ರದಾನ ಅಭಿಯಾನ ಜೋರಾಗಿದೆ. ಆದರೆ ಈ ಅಭಿಯಾನಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಬೇಕಿದೆ.
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮಾತ್ರ ನೇತ್ರದಾನ ಪಡೆಯಲು ಅವಕಾಶ ಇದೆ. ಆದರೆ ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೆಚ್ಚು ಆಸಕ್ತಿ ತೋರಬೇಕಿದೆ. ಕೆಲ ದಾನಿಗಳು ರಿಮ್ಸ್‌ಗೆ ನೇತ್ರದಾನ ಮಾಡುತ್ತಾರೆ. ವ್ಯಕ್ತಿ ಮೃತಪಟ್ಟ 3-4 ಗಂಟೆಯೊಳಗೆ ಕಣ್ಣುಗಳನ್ನು ಪಡೆಯಬೇಕಿದೆ. ಹೀಗಾಗಿ ಮೃತರು ವಾಸಿಸುವ ಸ್ಥಳ ಸಮೀಪವಿದ್ದರೆ ಮಾತ್ರ ರಿಮ್ಸ್ ನೇತ್ರ ವಿಭಾಗದ ಸಿಬ್ಬಂದಿ ಹೋಗಿ ಸಂಗ್ರಹಿಸುತ್ತಾರೆ. ಇಲ್ಲವಾದರೆ ರಿಮ್ಸ್‌ನಲ್ಲಿ ದಾಖಲಾಗಿ ಮೃತಪಟ್ಟಾಗ ಕುಟುಂಬ ಸದಸ್ಯರು ಒಪ್ಪಿದರೆ ಅಲ್ಲಿಯೇ ಸಂಗ್ರಹಿಸಲಾಗುತ್ತದೆ.
ರಿಮ್ಸ್‌ನಲ್ಲಿ ಪ್ರತ್ಯೇಕ ನೇತ್ರ ಚಿಕಿತ್ಸಾ ವಿಭಾಗವಿದ್ದು, ದಾನಿಗಳು ಒಪ್ಪಿದರೆ ನಿಯಮಾನುಸಾರ ಕಣ್ಣುಗಳನ್ನು ಸಂಗ್ರಹಿಸಲಾಗುವುದು. ಆದರೆ ನಮ್ಮಲ್ಲಿ ನೇತ್ರ ಕಸಿ ವಿಭಾಗ ಇಲ್ಲ. ಅದಕ್ಕೆ ವಿಶೇಷ ಅನುಮತಿ ಪಡೆಯಬೇಕಿದೆ. ನಮ್ಮಲ್ಲಿ ಕೇವಲ ಏಳು ಜನ ವೈದ್ಯರಿರುವ ಕಾರಣ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿಲ್ಲ. ನೇತ್ರ ಸಂಗ್ರಹಿಸಿದರೆ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗುವುದು. ಕಣ್ಣುಗಳನ್ನು ಪಡೆಯಲು ಸಾಕಷ್ಟು ಪ್ರಕ್ರಿಯೆಗಳಿವೆ. -ಡಾ| ಸಿದ್ಧೇಶ ಕುಮಾರ್, ಎಚ್‌ಒಡಿ, ನೇತ್ರವಿಭಾಗ, ರಿಮ್ಸ್
ಪ್ರತಿಯೊಬ್ಬ ಮನುಷ್ಯನಿಗೆ ದಾನ ಮಾಡುವುದು ದೊಡ್ಡ ಗುಣ. ನಾವು ಇರುವಾಗ ಬೇರೆ ಬೇರೆ ಸ್ವರೂಪದ ದಾನಗಳು ಮಾಡುತ್ತೇವೆ. ಆದರೆ ಸತ್ತ ಮೇಲೆಯೂ ಇನ್ನೊಬ್ಬರ ಬಾಳಿಗೆ ಬೆಳಕಾಗುವುದೇ ಶ್ರೇಷ್ಠ ದಾನ. ಆದರೆ ಯಾರಿಗೂ ಈ ವಿಚಾರದಲ್ಲಿ ಒತ್ತಾಯ ಮಾಡಲು ಬರಲ್ಲ. ಬೇರೆಯವರಿಗೆ ಅನುಕೂಲ ಆಗುವುದಾದರೆ ಖಂಡಿತಾ ಇಂಥ ದಾನಗಳನ್ನು ಮಾಡಬೇಕು. -ಪಂ| ನರಸಿಂಹಲು ವಡವಾಟಿ, ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ
ಇದನ್ನೂ ಓದಿ: ಥ್ರಿಲ್ ನೀಡಲು ರಮೇಶ್ ‘100’ ರೆಡಿ: ನ.19ಕ್ಕೆ ಚಿತ್ರ ರಿಲೀಸ್
ಅನ್ನದಾನ, ರಕ್ತದಾನದಂತೆ ನೇತ್ರದಾನವು ಶ್ರೇಷ್ಠ. ನಮ್ಮ ನಂತರ ಬೇರೆಯವರ ಬಾಳಿಗೆ ಬೆಳಕು ನೀಡುವ ಕೆಲಸ ಆಗಬೇಕು. ಜಗತ್ತಿನಲ್ಲಿ ಎಷ್ಟೋ ಜನರಿಗೆ ದೃಷ್ಟಿ ಇಲ್ಲದೇ ಅಂಧಕಾರದಲ್ಲಿ ಬದುಕುತ್ತಿದ್ದಾರೆ. ಅಂಥವರಿಗೆ ಈ ಸುಂದರ ಜಗತ್ತನ್ನು ನೋಡುವ ಅವಕಾಶ ಕಲ್ಪಿಸಿಕೊಟ್ಟಂತೆ ಆಗಲಿದೆ. ಈಗ ದಾನ ಮಾಡಿದರೂ ನಾವು ಸತ್ತ ನಂತರವೇ ಕಣ್ಣುಗಳನ್ನು ಪಡೆಯುವುದರಿಂದ ಯಾವುದೇ ತೊಂದರೆ ಇಲ್ಲ. ಯುವ ಸಮೂಹ ಯಾವುದೇ ಭಯವಿಲ್ಲದೇ ನೇತ್ರದಾನಕ್ಕೆ ಮುಂದಾಗಬೇಕು. -ಡಿಂಗ್ರಿ ನರೇಶ, ಸಿನಿಮಾ ನಟ, ರಾಯಚೂರು
-ಸಿದ್ದಯ್ಯಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.