ಶಾಖೋತ್ಪನ್ನ ಕೇಂದ್ರಗಳಿಗೆ ಎಫ್‌ಜಿಡಿ ಯಂತ್ರ ಅಳವಡಿಕೆಗೆ ತಾಕೀತು
Team Udayavani, Sep 23, 2018, 6:15 AM IST
ರಾಯಚೂರು: ಶಾಖೋತ್ಪನ್ನ ಕೇಂದ್ರಗಳಿಂದಾಗುತ್ತಿರುವ ಪರಿಸರ ಹಾನಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, 2021ರ ವೇಳೆಗೆ ಬಹುಕೋಟಿ ವೆಚ್ಚದ ಫೂÉé ಗ್ಯಾಸ್ ಡಿಸಲ ರೈಜೇಶನ್ (ಎಫ್‌ಜಿಡಿ) ಯಂತ್ರ ಅಳವಡಿಕೆಗೆ ಸೂಚನೆ ನೀಡಿದೆ.
ಶಾಖೋತ್ಪನ್ನ ಕೇಂದ್ರಗಳಿಗೆ ಮುಂಚಿನಿಂದಲೂ ಮಾಲಿನ್ಯ ನಿಯಂತ್ರಣ ಮಂಡಳಿ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುತ್ತ ಬಂದಿದೆ. ಆದರೆ, ನಿಯಮ ಪಾಲನೆಯಲ್ಲಿ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಈಚೆಗೆ ನೋಟಿಸ್ ಜಾರಿಗೊಳಿಸಿತ್ತು. ಆರ್‌ಟಿಪಿಎಸ್‌ಗೂ ಕಳೆದ ಮೇನಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಪರಿಸರ ಮಾಲಿನ್ಯ ನಿಯಂತ್ರಣಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಆರ್‌ಟಿಪಿಎಸ್ ಅಧಿಕಾರಿಗಳು ವಿವರಣೆ ನೀಡಿದ್ದರಿಂದ ನೋಟಿಸ್ ಹಿಂಪಡೆದಿದೆ. ಆದರೆ, 2021ರೊಳಗೆ ಎಫ್‌ಜಿಡಿ ಯಂತ್ರಗಳನ್ನು ಅಳವಡಿಸುವಂತೆ ಕಾಲಮಿತಿ ನಿಗದಿಗೊಳಿಸಿ ಸೂಚನೆ ನೀಡಿದೆ.
ಏನಿದು ಎಫ್‌ಜಿಡಿ?:
ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಕೇಂದ್ರಗಳಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ. ಈ ಹಾನಿ ತಡೆಗಟ್ಟಲು ಕೆಲವೊಂದು ಅಗತ್ಯ ಕ್ರಮ ಕೈಗೊಳ್ಳಬೇಕಿರುವುದು ಆಯಾ ಕೇಂದ್ರಗಳ ಕರ್ತವ್ಯ. ಕಲ್ಲಿದ್ದಲು ಸುಡುವುದರಿಂದ ಬರುವ ಸಲ#ರ್ ಡೈಆಕ್ಸೆçಡ್‌ನಿಂದ ಪರಿಸರ ಕಲುಷಿತವಾಗಲಿದೆ. ಈ ಇಂಗಾಲದ ಪ್ರಮಾಣ ಹೆಚ್ಚಾದಲ್ಲಿ ಮೋಡಗಳು ಚದುರಿ ಹೋಗಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಇಂಗಾಲವನ್ನು ಪರಿಸರಕ್ಕೆ ಸೇರದಂತೆ ನಿಯಂತ್ರಿಸಲು ಎಫ್‌ಜಿಡಿ ಅಳವಡಿಕೆ ಕಡ್ಡಾಯ ಎಂದು ಸೂಚಿಸಲಾಗಿದೆ.
ದುಬಾರಿ ಯಂತ್ರ:
ಅಧಿಕಾರಿಗಳ ಮಾಹಿತಿ ಪ್ರಕಾರ ಯಂತ್ರಗಳ ಅಳವಡಿಕೆಗೆ ಒಂದು ಮೆಗಾವ್ಯಾಟ್ ವಿದ್ಯುತ್‌ಗೆ 50 ಲಕ್ಷ ರೂ. ಖರ್ಚಾಗಲಿದೆ. 1720 ಮೆಗಾವ್ಯಾಟ್ ಸಾಮರ್ಥ್ಯದ ಆರ್‌ಟಿಪಿಎಸ್ ಕೇಂದ್ರಕ್ಕೆ ಅಂದಾಜು 800 ಕೋಟಿ ರೂ. ಬೇಕಾಗಬಹುದು ಎನ್ನುವುದು ಅ ಧಿಕಾರಿಗಳ ಮಾಹಿತಿ. ಅದರ ಜತೆಗೆ ಬಿಟಿಪಿಎಸ್, ಎನ್‌ಟಿಪಿಎಸ್, ವೈಟಿಪಿಎಸ್‌ಗೂ ಬೇಡಿಕೆಯನುಸಾರ ಯಂತ್ರಗಳ ಅಳವಡಿಕೆ ಮಾಡಲೇಬೇಕಿದೆ.
ವೈಟಿಪಿಎಸ್‌ನಲ್ಲೂ ಇಲ್ಲ!:
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶುರುವಾದ ಯರಮರಸ್ ಥರ್ಮಲ್ ಪವರ್ ಸ್ಟೇಶನ್‌ನಲ್ಲೂ ಎಫ್‌ಜಿಡಿ ಅಳವಡಿಕೆಯಾಗಿಲ್ಲ. ಇಲ್ಲಿ ಸ್ಥಳ ನಿಗದಿ ಮಾಡಲಾಗಿದೆಯಾದರೂ ಇನ್ನೂ ಅಳವಡಿಸಿಲ್ಲ. ಅದು ಕೂಡ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಯಂತ್ರವಾಗಿದ್ದು, ಬಹುಕೋಟಿ ವ್ಯಯಿಸಬೇಕಿದೆ.
ಗೊಂದಲ:
ಆರ್‌ಟಿಪಿಎಸ್‌ನ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಎರಡು ದಶಕಕ್ಕೂ ಹಿಂದೆ ಸ್ಥಾಪಿತಗೊಂಡಿವೆ. ಹೀಗಾಗಿ ಅವುಗಳ ಕಾರ್ಯಕ್ಷಮತೆ ಅವಲೋಕಿಸುತ್ತಿರುವ ಅಧಿ ಕಾರಿಗಳು, ಈ ಘಟಕಗಳಿಗೆ ಬಹುಕೋಟಿ ವೆಚ್ಚ ಮಾಡಿ ಎಫ್‌ಜಿಡಿ ಯಂತ್ರ ಅಳವಡಿಸಬೇಕೆ ಬೇಡವೇ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಈಗಾಗಲೇ ಕೆಲ ಘಟಕಗಳನ್ನು ಆಧುನೀಕರಣ ಮಾಡಲಾಗಿದೆ. ಆದರೆ, ಎಫ್‌ಜಿಡಿಗೆ ಸಾಕಷ್ಟು ಹಣ ಖರ್ಚಾಗುವ ಕಾರಣ ಅ ಧಿಕಾರಿಗಳು ಮರು ಸರ್ವೇ ನಡೆಸಲು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
2021ರೊಳಗೆ ಎಫ್‌ಜಿಡಿ ಅಳವಡಿಕೆ
ನಾವು ಮಾಲಿನ್ಯ ನಿಯಂತ್ರಣಕ್ಕೆ ಪಾಲಿಸುವ ಕ್ರಮಗಳ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆನ್‌ಲೈನ್ ಮಾನಿಟರ್ ಸಿಸ್ಟಮ್‌ನಲ್ಲಿ ಪ್ರದರ್ಶನ ಆಗುತ್ತಿರಲಿಲ್ಲ. ಈಗ ಸಿಸ್ಟಮ್‌ಗೆ ಸಂಪರ್ಕ ಕಲ್ಪಿಸಿದ್ದು, ಅ ಧಿಕಾರಿಗಳು ಅಲ್ಲಿಂದಲೇ ಎಲ್ಲವನ್ನೂ ಗಮನಿಸಬಹುದು. ಹೀಗಾಗಿ ನಮಗೆ ನೀಡಿದ್ದ ನೋಟಿಸ್ ಹಿಂಪಡೆಯಲಾಗಿದೆ. ಅದರ ಜತೆಗೆ ಸಲ #ರ್ ಡೈ ಆಕ್ಸೆçಡ್ ನಿಯಂತ್ರಣಕ್ಕೆ 2021ರೊಳಗೆ ಎಫ್‌ಜಿಡಿ ಅಳವಡಿಕೆಗೆ ಸೂಚನೆ ಬಂದಿದೆ. ದೇಶದ ಎಲ್ಲ ಕೇಂದ್ರಗಳಿಗೂ ಇದು ಅನ್ವಯವಾಗಲಿದ್ದು, ಈ ಬಗ್ಗೆ ಮೇಲ ಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ ಬಿ. ಯಲ್ಲಟ್ಟಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.