ಸಮಾನತೆ ಬಯಸುವುದೇ ಬಂಡಾಯ ಸಾಹಿತ್ಯದ ಧ್ಯೇಯ
ಜಂಬಣ್ಣ ಅಮರಚಿಂತ ಅವರ ಸಾಹಿತ್ಯದ ಕಲ್ಪನೆ ಚಿಂತನೆ ಒಳಗೊಂಡಿದೆ.
Team Udayavani, Feb 15, 2021, 5:17 PM IST
ರಾಯಚೂರು: ಸಮಾಜದಲ್ಲಿ ಸಮಾನತೆ ಬಯಸುವುದೇ ಬಂಡಾಯ ಸಾಹಿತ್ಯದ ಮೂಲ ಉದ್ದೇಶ. ಇಂಥ ಸಾಹಿತ್ಯದ ಮೂಲಕ ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ಅಜರಾಮರವಾಗಿ ಉಳಿದಿದ್ದಾರೆ ಎಂದು ನಗರ ಶಾಸಕ ಡಾ|ಶಿವರಾಜ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡ ಅಮರಚಿಂತ ಫೌಂಡೇಶನ್ ಗೆ ಚಾಲನೆ ಹಾಗೂ ಅಕ್ಕನ ಹೃದಯ ಗೀತಾಂಜಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಾಹಿತ್ಯದಲ್ಲಿ ಸಮಸ್ಯೆಗಳನ್ನು ಹೇಳುವ ಶಕ್ತಿ ಇರುತ್ತದೆ. ಆ ರೀತಿ ಸಮಸಮಾಜಕ್ಕಾಗಿ ಬಾಳಿದ ಅಮರಚಿಂತರ ಹೆಸರನ್ನು ನಗರದ ರಸ್ತೆಗೆ ಇಡಲು ಒತ್ತು ನೀಡಲಾಗುವುದು ಎಂದರು. ಹಿರಿಯ ಚಿಂತಕ ರಂಜಾನ್ ದರ್ಗಾ ಮಾತನಾಡಿ, ಜಂಬಣ್ಣ
ಅಮರಚಿಂತ ಅವರ ಸಾಹಿತ್ಯದ ಕಲ್ಪನೆ ಚಿಂತನೆ ಒಳಗೊಂಡಿದೆ.
ಸಾಹಿತಿಗಳು ಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಒಂದು ಕೃತಿ ರಚಿಸಲು ತುಂಬಾ ಅಧ್ಯಯನ ಮಾಡಬೇಕು. ಅಂಥ ಅಧ್ಯಯನಶೀಲ ವ್ಯಕ್ತಿತ್ವವನ್ನು ಸಾಹಿತಿ ಜಂಬಣ್ಣ ಅಮರಚಿಂತ ಹೊಂದಿದ್ದರು. ಅವರ ಸಾಹಿತ್ಯ ತುಂಬಾ ಮೊನಚಾಗಿತ್ತು ಎಂದರು.
ಅಕ್ಕನ ಹೃದಯ ಗೀತಾಂಜಲಿ ಕೃತಿ ಗಹನವಾದ ವಿಷಯಗಳನ್ನು ಒಳಗೊಂಡಿದೆ. ಚನ್ನಾಗಿ ಓದಿಕೊಂಡವರಿಗೆ ಅರ್ಥವಾಗುವಂಥ ಅಂಶಗಳು ಕೃತಿಯಲ್ಲಿವೆ. ಶರಣರ ಅನುಭಾವ ಸಿದ್ಧಾಂತ, ಸೂμಗಳ ಚಿಂತನೆಗೆ ಚ್ಯುತಿ ಬಾರದಂತೆ ಪದಬಳಸಿ ಕೃತಿ ರಚಿಸಲಾಗಿದೆ. ಅಂಬೇಡ್ಕರ್, ಸೂಫಿ, ಶರಣರ ಬಗ್ಗೆ ತಿಳಿಯದವರಿಗೆ ಈ ಕೃತಿ ಸುಲಭಕ್ಕೆ ಅರ್ಥವಾಗದು.
ಆತ್ಮ ಪರಮಾತ್ಮನೊಂದಿಗೆ ಕೂಡುವುದೇ ಧರ್ಮ. ಧರ್ಮಕ್ಕೂ ಅನುಭಾವಕ್ಕೂ ಸಂಬಂಧವಿಲ್ಲ. ಈ ಹಿನ್ನೆಲೆಯಲ್ಲಿ ಶರಣರು ಅನುಭಾವವೆಂದು ಪದ ಬಳಸುತ್ತಾರೆ. ಅವರು ಎಂದೂ ದೇವರೆಂದು ಹೇಳುವುದಿಲ್ಲ ಎಂದು ವಿವರಿಸಿದರು. ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ಸಾಹಿತಿ ಜಂಬಣ್ಣ ಅಮರಚಿಂತರ ಸಾಹಿತ್ಯ ಜನಾನುರಾಗಿಯಾಗಿತ್ತು.
ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಬರಹ ಅವರದ್ದಾಗಿತ್ತು. ಕಾರ್ಯಕ್ರಮ ಆಯೋಜಿಸಿ ವ್ಯಕ್ತಿಯ ವ್ಯಕ್ತಿತ್ವ ಬದಲಿಸಲಾಗದು. ಬದಲಾವಣೆ ಎನ್ನುವುದು ಆತ್ಮಾವಲೋಕನ ಮಾಡಿಕೊಂಡಾಗ ಬರುವಂಥದ್ದು ಎಂದರು. ನಗರಸಭೆ ಸದಸ್ಯ ಜಯಣ್ಣ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಡಾ| ಜೆ.ಎಲ್ ಈರಣ್ಣ ಮಾತನಾಡಿದರು.
ಜಂಬಣ್ಣ ಅಮರಚಿಂತ ರಚಿಸಿದ ಕವಿತೆಗಳನ್ನು ಸಂಗೀತ ಕಲಾವಿದ ಕೆ.ಕರಿಯಪ್ಪ ಮಾಸ್ಟರ್ ಪ್ರಸ್ತುತಪಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾ ಟೀಲ್ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಕಸಾಪ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಅಮರಚಿಂತ ಫೌಂಡೇಶನ್ ಸಂಸ್ಥಾಪಕಿ ರಾಮಲಿಂಗಮ್ಮ ಅಮರಚಿಂತ, ಸಾಹಿತಿ ಭಗತರಾಜ ನಿಜಾಮಕಾರಿ, ರಾಜಶೇಖರ ಅಮರಚಿಂತ, ಮಹಾದೇವಪ್ಪ, ವೀರಹನುಮಾನ, ಡಾ| ದಸ್ತಗಿರಿಸಾಬ್ ದಿನ್ನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್!
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.