ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅಮೂಲ್ಯ


Team Udayavani, Feb 4, 2019, 10:43 AM IST

ray-1.jpg

ಸಿಂಧನೂರು: ನಾಡಿನ ಅನೇಕ ಮಠ, ಮಂದಿರಗಳಲ್ಲಿ ಇಂದಿಗೂ ಶಿಲ್ಪ ಕಲೆಗಳು ಉಳಿದಿರುವುದಕ್ಕೆ ಹಾಗೂ ನಾಡಿನ ಸಂಸ್ಕೃತಿ ಬೆಳೆಯುವುದಕ್ಕೆ ಅಮರಶಿಲ್ಪಿ ಜಕಣಾಚಾರಿ ಮೂಲ ಕಾರಣಕರ್ತರಾಗಿದ್ದಾರೆ. ಕಲೆ-ಸಂಸ್ಕೃತಿಗೆ ಅವರ ಕೊಡುಗೆ ಅಪಾರವಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು

ಜಿಲ್ಲಾ ವಿಶ್ವಕರ್ಮ ಸಮಾಜದಿಂದ ನಗರದ ಕನಕ ಸಮುದಾಯ ಮಂಗಲ ಭವನದಲ್ಲಿ ರವಿವಾರ ನಡೆದ ಜಿಲ್ಲಾಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಶಿಲ್ಪಿಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾದಾಮಿ, ಐಹೊಳೆ ಇನ್ನಿತರ ಪ್ರಸಿದ್ಧ ಸ್ಥಳಗಳಲ್ಲಿನ ಶಿಲ್ಪಕಲೆಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಬಹುತೇಕ ಐತಿಹಾಸಿಕ ದೇವಾಲಯಗಳಲ್ಲಿನ ಕಲಾಕೃತಿಗಳ ಕರ್ತೃ ಅಮರಶಿಲ್ಪಿ ಜಕಣಾಚಾರಿ ಎಂಬುದು ವಿಶೇಷ ಎಂದರು.

ವಿಶ್ವಕರ್ಮ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವೃತ್ತಿಯ ಜತೆಗೆ ಇತರೆ ಕಲೆಗಳಲ್ಲೂ ಸಮಾಜ ಮುಂದೆ ಬರಬೇಕು. ಯುವಜನತೆ ಉನ್ನತ ಶಿಕ್ಷಣ ಪಡೆದು ವಿವಿಧ ಇಲಾಖೆಗಳ ಅಧಿಕಾರಿಗಳಾಗಿ ಸಮಾಜದ ಕೀರ್ತಿ ಹೆಚ್ಚಿಸಬೇಕು ಎಂದ ಅವರು, ನಗರದಲ್ಲಿ ಸಮಾಜದ ಜಾಗೆ ಇದ್ದರೆ ವಿಶ್ವಕರ್ಮ ಭವನ ನಿರ್ಮಿಸಿಕೊಡಲು ಸಿದ್ಧ. ಮನವಿ ಸಲ್ಲಿಸಿದರೆ ಅನುದಾನ ಬಿಡುಗಡೆ ಮಾಡುವೆ ಎಂದು ಭರವಸೆ ನೀಡಿದರು.

ವಿಶ್ವಕರ್ಮ ಸಮಾಜ ರಾಜ್ಯಾಧ್ಯಕ್ಷ‌ ಈಶ್ವರ ಹೊಸಕೋಟಿ ಮಾತನಾಡಿ, ವಿಶ್ವಕರ್ಮರು ಪಂಚ ವೃತ್ತಿ ಕುಲ ಕಸುಬುಗಳಿಂದ ಪ್ರಪಂಚದ ಪಂಚಭೂತಗಳ ಕಾರಣಿಕರ್ತರು ಆಗಿದ್ದಾರೆ. ವೇದ ಉಪನಿಷತ್ತುಗಳಲ್ಲಿ ದೇವಾನುದೇವತೆಗಳ ಸೃಷ್ಟಿಕರ್ತ, ನಿರ್ಮಾಪನಾಗಿ ವಿರಾಟ ಪುರುಷನೆಂದು ಖ್ಯಾತಿಯಾದ ಭಗವಂತನೇ ವಿಶ್ವಕರ್ಮರು ಎಂದರು.

ಶಿಲ್ಪ ಕಲಾಕೃತಿಗಳಿಂದ ಸಿರಿತನ ಪಡೆದ ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಐಹೊಳಿ, ಹಂಪಿಯಲ್ಲಿ ಶಿಲ್ಪಕಲೆಗಳ ಚಿತ್ರಣವನ್ನು ಸವಿಯಲು ದೇಶ, ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಇದು ನಮ್ಮ ಸಮಾಜದ ಹಿರಿಯರ ಕಲಾವೈಭವಕ್ಕೆ ಸಾಕ್ಷಿಯಾಗಿದೆ ಎಂದರು.

ಮಾಜಿ ಸಂಸದ ಕೆ. ವಿರೂಪಾಕ್ಷ‌ಪ್ಪ ಮಾತನಾಡಿ, ಹಿಂದುಳಿದ ಸಮುದಾಯಗಳಿಗೆ ಸರಕಾರದ ಸಹಾಯ ಹಸ್ತ ಅವಶ್ಯಕವಾಗಿದೆ. ಸಮುದಾಯ ಮುಂದಿನ ಗುರಿ ಇರಿಸಿಕೊಂಡು ಸಾಗಿದಾಗ ಮಾತ್ರ ಎತ್ತರವಾಗಿ ಬೆಳೆಯಲು ಸಾಧ್ಯ ಎಂದರು.

ವಿಶ್ವಕರ್ಮ ಸಮುದಾಯದ ಸ್ವಾಮೀಜಿ ದೇವದುರ್ಗ ಸಂಸ್ಕೃತಿ ಸಂಸ್ಥಾನ ಪೀಠದ ಮೌನೇಶ್ವರ ಸ್ವಾಮೀಜಿ, ಅಜೇಂದ್ರ ಸ್ವಾಮೀಜಿ, ಯಾದಗಿರಿಯ ಶ್ರೀನಿವಾಸ ಸ್ವಾಮೀಜಿ, ತುಮಕೂರಿನ ನೀಲಕಂಠಾಚಾರ್ಯ ಸ್ವಾಮೀಜಿ, ಗುಲ್ಬರ್ಗದ ದುಡ್ಡಂದ್ರೆ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಮಾಜದ ಹಿರಿಯ ಮುಖಂಡ ಶ್ರೀಶೈಲ ಪತ್ತಾರ, ನಿರುಪಾದೆಪ್ಪ ಗುಡಿಹಾಳ ಮಾತನಾಡಿದರು

ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ‌ ಬಸನಗೌಡ ಬಾದರ್ಲಿ, ರಾಯಚೂರು ವಿಶ್ವಕರ್ಮ ಸಮಾಜ ಜಿÇ್ಲಾಧ್ಯಕ್ಷ‌ ಗುರು ವಿಶ್ವಕರ್ಮ, ವಿಶ್ವಕರ್ಮ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ‌ ಕಾಳಾಚಾರ ವಿಶ್ವಕರ್ಮ, ಸಿ. ಪಂಚಾಳ ವಿಶ್ವಕರ್ಮ, ಸಮಾಜದ ತಾಲೂಕು ಅಧ್ಯಕ್ಷ‌ ವೀರಭದ್ರಪ್ಪ ವಿಶ್ವಕರ್ಮ ಹಂಚಿನಾಳ, ಗೌರವಾಧ್ಯಕ್ಷ‌ ವೀರೇಶ ದೇವರಗುಡಿ, ಜಿÇ್ಲಾ ಸದಸ್ಯ ಸೋಮಣ್ಣ ಸುಕಾಲಪೇಟೆ, ಯುವ ಘಟಕ ಅಧ್ಯಕ್ಷ‌ ನಾಗರಾಜ, ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ‌ ಗಣೇಶ ಸೇರಿ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಕರ್ಮ ಸಮುದಾಯದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಟಾಪ್ ನ್ಯೂಸ್

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.