ಪಾಲಿಟಿಕ್ಸ್ ಎಂಟ್ರಿಗೆ ರೈತ ಹೋರಾಟ ಇಬ್ಭಾಗ?ಬಹಿರಂಗ ವಾಗ್ವಾದಕ್ಕಿಳಿದ ರೈತ ಮುಖಂಡರು
5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ.
Team Udayavani, Jan 13, 2021, 6:19 PM IST
ಮಸ್ಕಿ: ಸತತ 53 ದಿನಗಳಿಂದ ನಡೆದ ನಾರಾಯಣಪುರ ಬಲದಂಡೆ 5ಎ ಕಾಲುವೆ ಹೋರಾಟದಲ್ಲಿ ಪಾಲಿಟಿಕ್ಸ್ ನುಸುಳಿದ್ದು, ಚಳವಳಿಯ ಗುಂಪು ಚದುರುವ ಸನ್ನಿವೇಶ ನಿರ್ಮಾಣವಾಗಿದೆ!. 5ಎ ಕಾಲುವೆ ಹೋರಾಟ ಸಮಿತಿ ಹೊರತಾಗಿ ಮತ್ತೂಂದು ರೈತರ ಗುಂಪು ನಂದವಾಡಗಿ ಏತ ನೀರಾವರಿ ಬೇಕು ಎನ್ನುವ ವಾದ, ರೈತ ಚಳವಳಿ ಇಬ್ಭಾಗಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಮಂಗಳವಾರ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಎರಡು ರೈತರ ಗುಂಪಿನ ನಡುವೆ ನಡೆದ ವಾಗ್ವಾದ ಚರ್ಚೆ, ಆಕ್ಷೇಪ, ಆಕ್ರೋಶ ಇದನ್ನು ಪುಷ್ಠಿàಕರಿಸಿದ್ದು, 5ಎ ಕಾಲುವೆ ಹೋರಾಟ ಹಾದಿ ತಪ್ಪುತ್ತಿದೆಯಾ? ಎನ್ನುವ ಅನುಮಾನ ನಿಜ ಮಾಡಿದೆ.
ಆಗಿದ್ದೇನು?: 31ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ 5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ. ಆದರೆ
ಕಳೆದ 53 ದಿನಗಳಿಂದ ರೈತರು ಚಳವಳಿ ತೀವ್ರವಾಗಿದ್ದು, 5ಎ ಕಾಲುವೆ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಧರಣಿ ಪಾಮನಕಲ್ಲೂರಿನಲ್ಲಿ ಆರಂಭವಾಗಿದೆ.
ಈ ಯೋಜನೆ ಬಾಧಿತ ಹಳ್ಳಿಗರ ಶಕ್ತಿ ಪ್ರದರ್ಶನ, ಮಠಾ ಧೀಶರ ಬೆಂಬಲ, ಒಗ್ಗಟ್ಟು ಪ್ರದರ್ಶನದ ಮೂಲಕ 30 ಹಳ್ಳಿಗಳ ಗ್ರಾಪಂ ಚುನಾವಣೆ ಬಹಿಷ್ಕಾರ, ಮಸ್ಕಿ ಬಂದ್ ಸೇರಿ ಹಂತ-ಹಂತದ ಹೋರಾಟ ನಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು.
ರೈತರ ಈ ಹೋರಾಟಕ್ಕೆ ಮಣಿದ ಸರ್ಕಾರ ಈ ಹಿಂದೆ ಈ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಮತ್ತೂಮ್ಮೆ ಪರಿಶೀಲನೆಗೆ ತಾಂತ್ರಿಕ ಸಲಹಾ ಸಮಿತಿ ನೇಮಕ ಮಾಡಿತ್ತು. ಆದರೀಗ ಇದರ ಬೆನ್ನಲ್ಲೇ ರೈತರ ನಡುವೆ ಭಿನ್ನಮತ ಬಯಲಾಗಿದೆ.
ಮಾತಿನ ಸಂಘರ್ಷ: 5ಎ ಜಾರಿವರೆಗೂ ನಂದವಾಡಗಿ ಏತ ನೀರಾವರಿ ಮೂಲಕವೇ ನೀರು ಕೊಡಿ ಎಂದು ಕೆಲ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಇಟ್ಟು ಮಂಗಳವಾರ ಮಸ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಆದರೆ ಈ ಸುದ್ದಿ ತಿಳಿದ ಮತ್ತೂಂದು ರೈತರ ಗುಂಪು ಹೋರಾಟ ಸ್ಥಳ ಪಾಮನಕಲ್ಲೂರಿನಿಂದ ಮಸ್ಕಿಗೆ ದೌಡಾಯಿಸಿ, ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವ್ಯತಿರಿಕ್ತ ಹೇಳಿಕೆ ಮೂಲಕ ರೈತರ ಹೋರಾಟ ದಾರಿ ತಪ್ಪಿಸುವುದು ಸರಿಯೇ?, ರೈತರ ಧರಣಿ ವೇದಿಕೆಯಲ್ಲೇ ಇವೆಲ್ಲವನ್ನೂ ಚರ್ಚೆ ಮಾಡಬೇಕು. ಆದರೆ ಎಲ್ಲ ಬಿಟ್ಟು ಹೀಗೆ ಇನ್ನೊಬ್ಬರ ಮಾತು ಕೇಳಿ ಹೋರಾಟ ಹೊಡೆಯಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಎರಡು ರೈತರ ಗುಂಪಿನ ನಡುವೆ ಆರಂಭದಲ್ಲಿ ಮಾತಿನ ಚರ್ಚೆ, ಪರಸ್ಪರ ವಾಗ್ವಾದ ನಡೆಯಿತು. ಬಳಿಕ ಆವೇಶ, ಆಕ್ರೋಶದ ಮೂಲಕ ರೈತರು ಎರಡು ಬಣಗಳಾಗಿ ಚದುರಿದರು.
ತೆರೆಮರೆ ಪಾಲಿಟಿಕ್ಸ್
ರೈತರ ಹೋರಾಟ ಹೀಗೆ ಇಬ್ಭಾಗವಾಗಲು ರಾಜಕೀಯ ಎಂಟ್ರಿಯೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. 5ಎ ಕಾಲುವೆ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸಿದೆ ಎನ್ನುವ ಗುಮಾನಿ ಆರಂಭದಿಂದಲೂ ಇತ್ತು. ಆದರೆ ಮಸ್ಕಿ ಬಂದ್ ವೇಳೆ ಕಾಂಗ್ರೆಸ್‌ನವರೇ ಇದನ್ನು ಬಹಿರಂಗಪಡಿಸಿ ಹೋರಾಟದಲ್ಲೂ ಭಾಗಿಯಾದರು. ಆದರೆ ಇದಕ್ಕೆ ಪ್ರತಿಯಾಗಿಯೇ ಬಿಜೆಪಿ ಗುಂಪು ಪ್ರತಿ ದಾಳ ಉರುಳಿಸಿದೆ ಎನ್ನುವುದು ಸ್ಪಷ್ಟವಾಯಿತು.
ಬಿಜೆಪಿ ಮುಖಂಡರು, ಪದಾಧಿಕಾರಿಗಳು ಇರುವ ರೈತರ ಗುಂಪೇ ನಂದವಾಡಗಿ ಏತ ನೀರಾವರಿ ಬೇಡಿಕೆ ಪುನರುತ್ಛರಿಸಿದೆ. ಅಲ್ಲದೇ ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಜ.11ರಂದು ಕೆಲ ರೈತರಿಗೆ ಖುದ್ದು ಬಿಜೆಪಿ ಕಚೇರಿಯಿಂದಲೇ ದೂರವಾಣಿ ಸಂದೇಶ ಹೋಗಿದ್ದು ಇದೆಲ್ಲವನ್ನೂ ಹೊರಹಾಕಿದೆ.ಒಟ್ಟಿನಲ್ಲಿ ನೀರಾವರಿ ಬೇಡಿಕೆಗಾಗಿ ನಡೆದ ಚಳವಳಿ ರಾಜಕೀಯ ಎಂಟ್ರಿಯಿಂದ ದಿಕ್ಕಾಪಾಲಾಗುವ ಸನ್ನಿವೇಶ ಮಾತ್ರ ಉಂಟಾಗಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.