ಆಹಾರದಲ್ಲೂ ಅಡಗಿದೆ ಔಷಧ ಗುಣ
Team Udayavani, Apr 2, 2018, 3:21 PM IST
ರಾಯಚೂರು: ಕ್ರಮಬದ್ಧ ಆಹಾರ ಸೇವನೆ ಕೇವಲ ಹಸಿವು ನೀಗಿಸಲು ಮಾತ್ರವಲ್ಲದೇ ದೇಹಕ್ಕೆ ಸಿಗುವ ಪೌಷ್ಟಿಕಾಂಶಗಳಾಗಿದೆ. ಪ್ರತಿ ಆಹಾರದಲ್ಲೂ ಔಷಧಿ ಮೌಲ್ಯಗಳಿದ್ದು, ಪ್ರತಿ ಸಸ್ಯಕ್ಕೂ ತನ್ನದೇಯಾದ ವಿಶೇಷ ಔಷಧೀಯ ಗುಣವಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ|ಎ.ಎಚ್.ರಾಜಾಸಾಬ್ ಹೇಳಿದರು.
ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಔಷಧಿಧೀಯ ಸಸ್ಯಗಳ ಸಾಂಪ್ರದಾಯಿಕ ಉಪಯೋಗಗಳ ಇತ್ತೀಚಿನ ಬೆಳವಣಿಗಗಳ ಕುರಿತು ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು, ಋಷಿಮುನಿಗಳು ಸಾಂಪ್ರದಾಯಿಕ ಔಷಧೀಯ ಪದ್ಧತಿ ಬಳಸುತ್ತಿದ್ದರು. ದೊಡ್ಡ ದೊಡ್ಡ ಕಾಯಿಲೆಗಳಿಗೂ ಆಯುರ್ವೇದದಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ಹೇಳಿದರು.
ದೇಶದ ಪಶ್ಚಿಮ ಘಟ್ಟ. ಹಿಮಾಲಯ ಪರ್ವತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಔಷಧೀಯ ಸಸ್ಯಗಳಿವೆ ಎಂಬ ಊಹೆ ತಪ್ಪು. ಆಯಾ ಪ್ರದೇಶಕ್ಕನುಗುಣವಾಗಿ ಔಷಧೀಯ ಸಸ್ಯಗಳು ಸಿಗುತ್ತವೆ. ಅವುಗಳನ್ನು ಗುರುತಿಸಬೇಕಿದೆ ಅಷ್ಟೇ ಎಂದು ಹೇಳಿದರು.
ಕಾಲೇಜಿನ ವ್ಯವಸ್ಥಾಪಕ ಮಂಡಳಿ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ ಮಾತನಾಡಿ, ಈಗ ಇಂಗ್ಲಿಷ್ ಮೆಡಿಸಿನ್‌ಗೆ ಒಗ್ಗಿಕೊಂಡಿರುವ ಕಾರಣ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಆಧುನಿಕ ಔಷಧ ಪದ್ಧತಿ ದುಬಾರಿಯಾಗಿದ್ದು, ಅಡ್ಡ ಪರಿಣಾಮವೂ ಹೆಚ್ಚು ಎಂದು ಹೇಳಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಆರ್.ತಿಮ್ಮಯ್ಯ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ಪ್ರಸ್ತುತ ಪಡಿಸುವ ವಿಷಯಗಳು ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿವೆ ಎಂದು ಹೇಳಿದರು.
ಕರ್ನಾಟಕ ಕೇಂದ್ರಿಯ ವಿವಿ ಸಹ ಕುಲಪತಿ ಡಾ| ಜಿ.ಆರ್. ನಾಯಕರು ವಿಚಾರ ಸಂಕಿರಣದಲ್ಲಿ ತಜ್ಞರು ಮಂಡಿಸಲಿರುವ
ಪ್ರಬಂಧಗಳ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಡಾ| ವೈ. ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ರಮೇಶ ಎಚ್. ಮೇರವಡೆ, ಪ್ರೊ| ಟಿ. ಮೆಹ್ಮದ್ ಪರಿಚಯಿಸಿದರು. ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ವೇದವ್ಯಾಸ, ಡಾ| ವಿಜಯಲಕ್ಷ್ಮಿ ಸಿ. ಇದ್ದರು. ಡಾ| ಎಸ್.ಎಂ. ಖೇಣೇದ, ಡಾ| ಪ್ರಶಾಂತಕುಮಾರ, ಪ್ರೊ| ಚಂದ್ರಕಾಂತ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.