ಕೊತದೊಡ್ಡಿ ಗ್ರಾಮಕ್ಕೆ ಪಿಡಿಒ ಇಲ್ಲ; ಪ್ರಗತಿ ಕುಂಠಿತ
Team Udayavani, Sep 9, 2022, 6:09 PM IST
ದೇವದುರ್ಗ: ಕಳೆದ ಎರಡು ತಿಂಗಳಿಂದ ಕೊತ್ತದೊಡ್ಡಿ ಗ್ರಾಪಂಗೆ ಅಭಿವೃದ್ಧಿ ಅಧಿಕಾರಿ ಇಲ್ಲದ ಕಾರಣ ಹಲವು ಸಮಸ್ಯೆಗಳು ಉಲ್ಬಣಗೊಂಡಿವೆ. ತಾಪಂ, ಗ್ರಾಪಂ ಅಧಿಕಾರಿಗಳ ಮಧ್ಯೆಯೇ ಸಮನ್ವಯ ಕೊರತೆ ಹಿನ್ನೆಲೆ ಹಳ್ಳಿಗಳ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊತ್ತದೊಡ್ಡಿ ಗ್ರಾಪಂಗೆ ಹನ್ನೇರಡಕ್ಕೂ ಅಧಿಕ ಹಳ್ಳಿಗಳ ಬರುತ್ತಿವೆ. ಒಂದೊಂದು ಹಳ್ಳಿಗಳಲ್ಲಿ ಒಂದೊಂದು ಸಮಸ್ಯೆ ಇವೆ. ಹೆಚ್ಚು ಮಳೆಯಿಂದ ಸೊಳ್ಳೆಗಳ ಕಾಟ ವಿಪರೀತಗೊಂಡಿದೆ. ಫಾಗಿಂಗ್ ವ್ಯವಸ್ಥೆ ಮಾಡಿಲ್ಲ. ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ. ಸಾಂಕ್ರಮಿಕ ರೋಗಗಳ ಭೀತಿಯಿಂದ ಜನರು ತತ್ತರಿಸಿದ್ದಾರೆ.
ಕೊತ್ತದೊಡ್ಡಿ ಸೇರಿ ಇತರೆ ಹಳ್ಳಿಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿರುವ ಹಿನ್ನೆಲೆ ಗ್ರಾಮಸ್ಥರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಕೆಲ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ.
ಹೊನ್ನಕಾಟಮಳ್ಳಿ, ಹೇಮನೂರು, ಮಲ್ಲಿನಾಯಕದೊಡ್ಡಿ, ಕರಡೋಣ ಮಲಕಂದಿನ್ನಿ, ಯಲದೊಡ್ಡಿ, ಲಿಂಗನದೊಡ್ಡಿ, ಖಾಚಪುರ ಸೇರಿ ಇತರೆ ಗ್ರಾಮಗಳು ಕಳೆದ ಎರಡು ತಿಂಗಳಿಂದ ಹಲವು ಸಮಸ್ಯೆಗಳು ಎದುರಿಸುತ್ತಿವೆ. ಗ್ರಾಪಂ 13 ಮತ್ತು 14ನೇ ಹಣಕಾಸು ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಯೋಜನೆಯೂ ಆಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.