ರಾಯಚೂರು: ಆರೋಗ್ಯ ಇಲಾಖೆಯಲ್ಲೇ ಸಾಮಾಜಿಕ ಅಂತರಕ್ಕಿಲ್ಲ ಆದ್ಯತೆ
Team Udayavani, Jul 24, 2020, 2:10 PM IST
ರಾಯಚೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಕೋವಿಡ್-19 ಪಾಸಿಟಿವ್ ಸಂಖ್ಯೆ ನೂರರ ಗಡಿ ದಾಟುತ್ತಿದೆ. ಆದರೆ, ಸೋಂಕು ಹರಡದಂತೆ ತಡೆಯಬೇಕಿದ್ದ ಆರೋಗ್ಯ ಇಲಾಖೆ ಆವರಣದಲ್ಲೇ ಜನ ಮುಗಿ ಬಿದ್ದರೂ ನಿಯಂತ್ರಣ ಮಾಡುವವರಿರಲಿಲ್ಲ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಲಾಖೆಯಲ್ಲಿ ಖಾಲಿಯಿರುವ ಡಿ ಗ್ರೂಪ್, ಶುಶ್ರೂಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ 6 ತಿಂಗಳ ಮಟ್ಟಿಗೆ ಗುತ್ತಿಗೆ ಆಧಾರ ಮೇಲೆ ನೇರ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅರ್ಜಿದಾರರು ಸಾಮಾಜಿಕ ಅಂತರವನ್ನು ಲೆಕ್ಕಿಸದೆ ನಿಂತಿದ್ದರು. ಆದರೆ ಇಲಾಖೆ ಸಿಬ್ಬಂದಿ ಮಾತ್ರ ಇದನ್ನು ಗಮನಿಸಿಯೂ ಯಾವುದೇ ಕ್ರಮ ಕೈಗೊಂಡಂತೆ ಕಾಣಿಸಲಿಲ್ಲ. ಉದ್ಯೋಗದ ನಿರೀಕ್ಷೆಯಲ್ಲಿ ಯುವಕರು ಜೀವದ ಹಂಗು ತೊರೆದು ಆಗಮಿಸಿದ್ದು ಕಂಡು ಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.