ಈ ಶಾಲೆಗೆ ಬೇಕಿದೆ ಕಾಯಂ ಶಿಕ್ಷಕರು
Team Udayavani, Nov 8, 2021, 6:01 PM IST
ದೇವದುರ್ಗ: ಕೆ.ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಕೋತಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ.
1ರಿಂದ 7ನೇ ತರಗತಿ 185 ಮಕ್ಕಳು ದಾಖಲಾತಿ ಹೊಂದಿದ್ದು, ಮುಖ್ಯಶಿಕ್ಷಕಿ ಅನಾರೋಗ್ಯ ನಿಮಿತ್ತ ನ.13ರವರೆಗೆ ರಜೆ ತೆರಳಿದ್ದಾರೆ. ಕಾಯಂ ಶಿಕ್ಷಕರ ಕೊರತೆಯಿಂದ ಧರ್ಮನಾಯ್ಕ ತಾಂಡಾ ಶಾಲೆಯಿಂದ ಕೋತಿಗುಡ್ಡ ಶಾಲೆಗೆ ಮಂಜುಳಾ ಎಂಬ ಶಿಕ್ಷಕಿಯನ್ನು ಎರವಲು ಸೇವೆ ನೀಡಲಾಗಿದೆ. ಒಬ್ಬ ಶಿಕ್ಷಕಿ 1ರಿಂದ 7ನೇ ತರಗತಿ 185 ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಿದೆ.
ಕೊಠಡಿಗಳ ಸಮಸ್ಯೆಯಿಂದ ಶಾಲಾ ಆವರಣದಲ್ಲಿ ಒಂದೊಂದು ತರಗತಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಈಗಾಗಲೇ ಒಂದು ಕೋಣೆ ಶಿಥಿಲಗೊಂಡ ಕಾರಣ ಬೀಗ ಜಡಿಯಲಾಗಿದೆ. ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾದರೂ ಶಿಕ್ಷಕರ ಕೊರತೆಯಿಂದ ಕಲಿಕೆಯಲ್ಲಿ ಮಕ್ಕಳಿಗೆ ಹಿನ್ನಡೆಯಾಗುತ್ತಿದೆ.
ಕೋತಿಗುಡ್ಡ ಸರ್ಕಾರಿ ಶಾಲೆಗೆ ಐದಾರು ಜನ ಶಿಕ್ಷಕರು ಬೇಕಿದೆ. ಒಬ್ಬ ಮುಖ್ಯ ಶಿಕ್ಷಕಿ ಇದ್ದು, ಇನ್ನುಳಿದ ಶಿಕ್ಷಕರ ಕೊರತೆ ಕಾಡುತ್ತಿದೆ. ಕೋವಿಡ್ ಹಿನ್ನೆಲೆ ಆನ್ ಲೈನ್, ವಠಾರ ಸೇರಿದಂತೆ ಮಕ್ಕಳಿಗೆ ಬೋಧಿಸಲಾಗುತ್ತಿತ್ತು. ಆದರೀಗ ಶಾಲೆಗಳು ಆರಂಭವಾಗಿದ್ದು, ಕೊಠಡಿಯಲ್ಲಿ ಕುಳಿತ ಮಕ್ಕಳಿಗೆ ಬೋಧಿಸಲು ಶಿಕ್ಷಕರು ಇಲ್ಲದಂತಾಗಿದೆ.
ಇದನ್ನೂ ಓದಿ: “ಮಹಾತ್ಮರ ಚರಿತಾಮೃತ’ ಗ್ರಂಥ ಲೋಕಾರ್ಪಣೆ
ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ಕುಡಿವ ನೀರು, ಶೌಚಾಲಯ ಸೇರಿದಂತೆ ಕೊಠಡಿಗಳ ಸಮಸ್ಯೆಯೂ ಎದುರಾಗಿದೆ. ಕೆಲ ಕೋಣೆಗಳು ಶಿಥಿಲಗೊಂಡಿದ್ದು, ಅಂತಹ ಕೋಣೆಯಲ್ಲಿ ಶಿಕ್ಷಕರು ಪಾಠ ಮಾಡಬೇಕಿದೆ. ಅಗತ್ಯ ಮೂಲಸೌಕರ್ಯ ಜತೆ ಶಿಕ್ಷಕರ ಕೊರತೆ ಉಂಟಾಗಿದೆ. ಮಕ್ಕಳಿಗೆ ಬೋಧಿಸಲು ತೊಂದರೆ ಆಗದಂತೆ ಶಿಕ್ಷಕರನ್ನು ಶಾಲೆಗೆ ನಿಯೋಜಿಸಬೇಕೆಂದು ಪಾಲಕರಾದ ದುರುಗಪ್ಪ, ಬಸಲಿಂಗಪ್ಪ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು, ಅಗತ್ಯ ಬೇಕಿರುವಂತ ಶಾಲೆಗಳಿಗೆ ಎರವಲು ನೀಡಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಆದೇಶ ಬಂದ ನಂತರ ನಿಯೋಜಿಸಲಾಗುತ್ತದೆ. -ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
ಕೋವಿಡ್ ಹಿನ್ನೆಲೆ ಒಂದೂವರೆ ವರ್ಷಗಳ ನಂತರ ಶಾಲೆಗಳು ಆರಂಭವಾಗಿದ್ದು, ಬಹುತೇಕ ಸರ್ಕಾರಿ ಶಾಲೆ ಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಬೇಕು. -ಮಹಾಲಿಂಗ ದೊಡ್ಡಮನೆ, ಎಸ್‌ಎಫ್‌ಐ ಕಾರ್ಯದರ್ಶಿ
-ನಾಗರಾಜ ತೇಲ್ಕೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.