ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ
Team Udayavani, Dec 1, 2020, 3:29 PM IST
ಸಿಂಧನೂರು: ದಢೇಸುಗೂರಿನ ತುಂಗಭದ್ರಾ ನದಿ ದಂಡೆಯ ಶಿವನ ದೇಗುಲದ ಬಳಿ ಆಯೋಜಿಸಿರುವ 12 ದಿನಗಳ ತುಂಗಭದ್ರಾ ಪುಷ್ಕರೋತ್ಸವದಲ್ಲಿ ಸೋಮವಾರ ತುಂಗಭದ್ರಾ ಆರತಿಯುಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಪ್ರತಿ ದಿನವೂ ನಡೆಯುವ ಆರತಿ ಹಾಗೂ ಪಿಂಡ ಪ್ರಧಾನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಕಾರ್ತಿಕ ಸೋಮವಾರದಂದು ಕೂಡ ವಿಶೇಷವಾಗಿ ತಂಗಭದ್ರಾ ಆರತಿಯನ್ನು ವೀಕ್ಷಿಸಲು ಹೆಚ್ಚಿನ ಭಕ್ತರು ಸೇರಿದ್ದರು. ನದಿ ತಟದಲ್ಲಿ ನಕ್ಷತ್ರ ಆರತಿ, ಪಂಚ ಆರತಿ,ಜಲ ಆರತಿ, ದ್ವಿಹಾರತಿ, ತ್ರಿಹಾರತಿಗಳನ್ನು ಬೆಳಗಲಾಯಿತು. ಅರ್ಚಕರು ವೇದಘೋಷ ಮೊಳಗಿಸಿದರು.
ವಿಶೇಷ ಸನ್ಮಾನ: ತುಂಗಭದ್ರಾ ಪುಷ್ಕರದ 11ನೇ ದಿನದ ನಿಮಿತ್ತ ಪುಷ್ಕರ ಉತ್ಸವ ಸಮಿತಿ ವತಿಯಿಂದ ಹಲವರನ್ನು ಸನ್ಮಾನಿಸಲಾಯಿತು. ಎಂ.ಸಿ.ಅಂಕಯ್ಯ, ವೈ.ನರೇಂದ್ರನಾಥ, ನಲ್ಲಾ ವೆಂಕಟೇಶ್ವರರಾವ್, ಬಳ್ಳಾರಿಯ ಪಶುವೈದ್ಯಾಧಿ ಕಾರಿ ರಾಜಶೇಖರ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಹ ಪ್ರಾಧ್ಯಾಪಕಿ ಕೃಷ್ಣವೇಣಿ, ಕೋಟಿ ಬೂದಿಹಾಳ ಕ್ಯಾಂಪ್, ಮಲ್ಲಿನವೆಂಕಟೇಶ್ವರರಾವ್, ಜಿ.ಗುನ್ನೇಶ್ವರರಾವ್, ನೆಕ್ಕಂಟಿ ನಾಗೇಶ್ವರರಾವ್, ಕಮ್ಮಾವಾರಿ ಸಂಘದ ಅಧ್ಯಕ್ಷ ಮುರುಳಿಕೃಷ್ಣ, ನಿರ್ದೇಶಕತಾಳೂರಿ ರಾಮಕೃಷ್ಣ, ಖಜಾಂಚಿ ಕರಟೂರಿ ವೆಂಕಟೇಶ್ವರರಾವ್, ಪಿ.ಸತ್ಯಬಾಬು, ಕೆ.ಗಣಪತಿ, ಜಯರಾಂ, ಕಾನುಮೆಲ್ಲಿಕೃಷ್ಣಮೂರ್ತಿ, ವಾಸು ಪಿಡಬ್ಲ್ಯಡಿ ಕ್ಯಾಂಪ್, ಹನುಮರೆಡ್ಡಿ ಗೋಪಾಲಕೃಷ್ಣ, ಸಾಯಿರಾಮಕೃಷ್ಣ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕಮ್ಮಾವಾರಿ ಸಂಘದ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.