ಇಬ್ಬರು ಅಂತಾರಾಜ್ಯಕಳ್ಳರ ಬಂಧನ:ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ
Team Udayavani, Oct 1, 2018, 2:49 PM IST
ಸಿಂಧನೂರು: ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿ ಸುವಲ್ಲಿ ಸಿಂಧನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಎಸ್ಪಿ ಡಿ.ಕಿಶೋರಬಾಬು ಮಾಹಿತಿ ನೀಡಿದರು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಪ್ಪರಾಳ ಗ್ರಾಮದ ಆನಂದ ಗೊಡಟ್ಟಿ (46) ಹಾಗೂ ರಾಜು ಗೋಗಲ್ (46) ಬಂಧಿತ ಆರೋಪಿಗಳು. ಬಂಧಿತರಿಂದ 105.570 ಗ್ರಾಮ್ ಚಿನ್ನ, 90 ಸಾವಿರ ರೂ. ನಗದು, ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಹೋಂಡಾಶೈನ್ ಬೈಕ್ ಸೇರಿ 4.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸಿಂಧನೂರು ನಗರದಲ್ಲಿ ಕಳ್ಳತನ ಹೆಚ್ಚಿದ ಹಿನ್ನಲೆಯಲ್ಲಿ ಪತ್ತೆಗಾಗಿ ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಮಂಜುನಾಥ ಎಸ್., ಸಿಬ್ಬಂದಿ ಮೆಹಬೂಬ್ ಅಲಿ, ಅನಿಲಕುಮಾರ, ರಾಘವೇಂದ್ರ, ಆದಯ್ಯ ನೇತೃತ್ವದಲ್ಲಿ ತಂಡ
ರಚಿಸಲಾಗಿತ್ತು. ಸೆ.28ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಬಸ್ ನಿಲ್ದಾಣದ ಹತ್ತಿರ ಸುಬ್ಬರಾವ್ ಎನ್ನುವವರ ಸ್ಕೂಟಿಯಲ್ಲಿಟ್ಟಿದ್ದ 1 ಲಕ್ಷ ರೂ. ನಗದು ಕಳ್ಳತನವಾಗಿತ್ತು. ಇದೇ ವೇಳೆ ಗಸ್ತಿನಲ್ಲಿದ್ದ ಪಿಎಸ್‌ಐ ಹಾಗೂ ಸಿಬ್ಬಂದಿ ಆದರ್ಶ ಕಾಲೋನಿಯಲ್ಲಿನ ಅಂಬಾಭವಾನಿ ಹತ್ತಿರ ಅನುಮಾನಾಸ್ಪದವಾಗಿ ಇಬ್ಬರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸಂಕೇತ ಕಾಲೇಜು ಹತ್ತಿರದ ಶಂಕ್ರಯ್ಯ ಎನ್ನುವವರ ನಿವಾಸದಲ್ಲಿ ಜೂನ್ ತಿಂಗಳಲ್ಲಿ ನಡೆದ ಕಳ್ಳತನದಲ್ಲಿ ಪಾಲ್ಗೊಂಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಕಿಶೋರಬಾಬು ವಿವರಿಸಿದರು. ಹೆಚ್ಚುವರಿ ಪೊಲೀಸ್
ವರಿಷ್ಠಾ ಧಿಕಾರಿ ಎಸ್.ಬಿ.ಪಾಟೀಲ, ಡಿವೈಎಸ್ಪಿ ಎಸ್.ಎಚ್.ಸುಬೇದಾರ, ಸಿಪಿಐ ನಾಗರಾಜ ಕಮ್ಮಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.