ಯುಜಿಡಿ-24×7 ನೀರು ಕಾಮಗಾರಿ ವಿಳಂಬಕ್ಕೆ ಸಚಿವ ನಾಡಗೌಡ ಆಕ್ರೋಶ
Team Udayavani, Feb 3, 2019, 9:40 AM IST
ಸಿಂಧನೂರು: ನಗರದಲ್ಲಿ ಯುಜಿಡಿ, ನಗರೋತ್ಥಾನ ಹಾಗೂ 24/7 ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದ್ದಕ್ಕೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ನಗರಸಭೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜರುಗಿತು.
ನಗರಸಭೆ ಕಾರ್ಯಾಲಯದಲ್ಲಿ ಶನಿವಾರ ಯುಜಿಡಿ ನಗರೋತ್ಥಾನ ಹಾಗೂ 24/7 ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಬಗ್ಗೆ ಹಲವು ಸಲ ಸಭೆ ನಡೆಸಿದರೂ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಿರಿ. ನಿಮಗೇನಾದರೂ ಮಾನ, ಮರ್ಯಾದೆ ಇದೆಯೇ, ಇಲ್ಲವೋ ಎಂದು ತರಾಟೆಗೆ ತೆಗೆದುಕೊಂಡರು.
ವಿವಿಧ ವಾರ್ಡ್‌ಗಳಲ್ಲಿ ಅರೆಬರೆ ಕೆಲಸಗಳು ಮಾಡಿದ್ದಿರಿ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ತ್ವರಿತಕ್ಕೆ ಹಲವು ಬಾರಿ ಸಭೆಯಲ್ಲಿ ಸೂಚಿಸಿದ್ದರೂ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದು ಸರಿಯಲ್ಲ. ಬೇಜವಾಬ್ದಾರಿ ತೋರುವ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯುಜಿಡಿ ಹಾಗೂ 24/7 ನೀರು ಕಾಮಗಾರಿಯನ್ನು ಜನ ವಾಸಿಸದ ಪ್ರದೇಶಗಳಲ್ಲಿ ಕೂಡ ಮಾಡಲಾಗಿದೆ. ಅಲ್ಲಿ ಮಾಡಲು ನಿಮಗೆ ಯಾರು ತಿಳಿಸಿದವರು, ಜನದಟ್ಟಣೆ ಇರುವ ವಾರ್ಡ್‌ಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ನಗರದ ಕೆರೆಯ ಹತ್ತಿರ ಕೆಲಸ ಮಾಡಿರುವುದು ಎಷ್ಟು ಸರಿ. ಇಂತಹ ಬೇಜವಾಬ್ದಾರಿ ಕೆಲಸಗಳು ಪುನಃ ಮುಂದುವರಿದರೆ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಕೆಲ ವಾರ್ಡ್‌ಗಳಲ್ಲಿ ಯುಜಿಡಿ ಚೇಂಬರ್ ಕೆಲಸ ಇನ್ನೂ ಆಗಿಲ್ಲ. ಅಧಿಕಾರಿಗಳು ತೋರಿಸುವ ಮಾಹಿತಿ ಪ್ರಕಾರ ಶೇ.80ರಷ್ಟು ಕೆಲಸ ಮುಗಿದಿರುತ್ತದೆ ಎಂದು ಹೇಳುತ್ತಿರಿ. ಇಂತಹ ಉಡಾಫೆ ಉತ್ತರ ಬಿಟ್ಟು ಕೆಲಸದ ಕಡೆಗೆ ಗಮನ ಹರಿಸಿ. ಯಾರ ಮಾತಿಗೂ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನ ಹರಿಸಿದರೆ ಒಳ್ಳೆಯದು. ಇಲ್ಲವಾದರೆ ನಿಮ್ಮನ್ನು ಮನೆಗೆ ಕಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಗಪ್‌ಚುಪ್: ಅಧಿಕಾರಿಗಳ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಕೆಲ ನಗರಸಭೆ ಸದಸ್ಯರು ಅಧಿಕಾರಿಗಳಿಗೆ ಪದೇಪದೆ ಪ್ರಶ್ನೆ ಕೇಳಲು ಮುಂದಾಗ ಗರಂ ಆದ ಸಚಿವ ನಾಡಗೌಡ, ನಾನು ಮಾತನಾಡುತ್ತಿರುವಾಗ ಬೇರೆಯವರು ಮಾತನಾಡಬಾರದು. ಸ್ವಲ್ಪ ಬಾಯಿ ಮುಚ್ಚಿಕೊಂಡಿದ್ದರೆ, ಒಳ್ಳೆಯದು ಎಂದು ಗದರಿದರು.
ಜಾಗದ ಕೊರತೆ: ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು. ಆದರೆ ಕಾರ್ಯಾಲಯದಲ್ಲಿ ಜಾಗದ ಕೊರತೆ ಹಾಗೂ ಆಸನಗಳು ಇಲ್ಲದ್ದರಿಂದ ಯುಜಿಡಿ, 24/7 ಹಾಗೂ ನಗರೋತ್ಥಾನ ಇಲಾಖೆ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಸಚಿವರು ಸಾರಿಗೆ ಇಲಾಖೆ ಸಭೆ ನಡೆಸಿದರು. ಕೆಲ ಇಲಾಖೆ ಅಧಿಕಾರಿಗಳು ಕೂಡ ಸಚಿವರ ಸೂಚನೆ ಮೇರೆಗೆ ಹೊರಹೋದರು. ವಿವಿಧ ಇಲಾಖೆ ಅಧಿಕಾರಿಗಳಾದ ಗಿರೀಶ ನಾಯಕ, ಅರುಣ, ದಿವಾಕರ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ದಾಸರ ಸತ್ಯನಾರಾಯಣ, ವೀರೇಶ ಹಟ್ಟಿ, ಆಲಂಬಾಷಾ, ಹನುಮೇಶ ಕುರಕುಂದ, ಮುಖಂಡರಾದ ಸಾಯಿರಾಮ್ ಕೃಷ್ಣ, ವೆಂಕಟೇಶ ನಂಜಲದಿನ್ನಿ, ಅಶೋಕಗೌಡ ಗದ್ರಟಗಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.