ಲಸಿಕಾ ಕರಣ: ಹಳ್ಳಿ ಗಳತ್ತ ಆರೋಗ್ಯ ಇಲಾಖೆ
1.80 ಲಕ್ಷಕ್ಕೂಅಧಿಕ ಗುರಿ; ನ್ಯಾಯಬೆಲೆಅಂಗಡಿ,ಬಸ್ ನಿಲ್ದಾಣ, ಸರ್ಕಾರಿ ಕಚೇರಿಯಲ್ಲಿ ಬೀಡುಬಿಟ್ಟ ಸಿಬ್ಬಂದಿ
Team Udayavani, Aug 29, 2021, 8:40 PM IST
ದೇವದುರ್ಗ: ಕೋವಿಡ್ ಮೂರನೇ ಅಲೆ ಎಚ್ಚರಿಕೆ ನಡುವೆಯೇ ಆರೋಗ್ಯ ಇಲಾಖೆ ಲಸಿಕೆ ಮೇಳ ಕಾರ್ಯಕ್ರಮ ಮೂಲಕ ಕೋವಿಡ್ ಲಸಿಕೆ ಗುರಿ ಮುಟ್ಟಲು ಹಳ್ಳಿಗಳತ್ತ ದೌಡಾಯಿಸಿದೆ.
1.80 ಲಕ್ಷಕ್ಕೂ ಅಧಿಕ ಗುರಿ ಹೊಂದಿದೆ. ಈಗಾಗಲೇ 90 ಸಾವಿರ ಗಡಿದಾಟಿದೆ. ನ್ಯಾಯಬೆಲೆ ಅಂಗಡಿ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.
ಲಸಿಕೆ ಗುರಿ: ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿ ಅನೇಕರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡರು.ಮೂರನೇಅಲೆಯ ಎಚ್ಚರಿಕೆ ಮಧ್ಯೆಯೂ ಆರೋಗ್ಯ ಇಲಾಖೆ 18 ವರ್ಷ ಮೇಲ್ಪಟ್ಟಿರುವ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಸಕಲ ಸಿದ್ಧತೆ ನಡೆಸಿದೆ. ಇನ್ನು ಒಂದೂವರೆ ತಿಂಗಳಲ್ಲಿ ಅಂದುಕೊಂಡಂತೆ ಗುರಿ ಮುಟ್ಟಲು ಲಸಿಕೆ ಸಿದ್ಧತೆ ಜೋರಾಗಿದೆ. ಖಾಸಗಿ ಸಂಘ-ಸಂಸ್ಥೆಗಳು ಕೋವಿಡ್ ಲಸಿಕೆ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿವೆ.
ಮೊದಲನೇ ಎರಡನೇ ಡೋಸ್: ಕೋವಿಡ್ ಲಸಿಕೆ ಗುರಿ ಬೆನ್ನತ್ತಿದ್ದ ಆರೋಗ್ಯ ಇಲಾಖೆ ಕಂದಾಯ, ತಾಪಂ, ಗ್ರಾಮ ಪಂಚಾಯಿತಿ,
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ಇತರೆ ಇಲಾಖೆ ಸಹಕಾರದೊಂದಿಗೆ ಮೊದಲನೇ ಡೋಸ್ ಲಸಿಕೆ 80 ಸಾವಿರಕ್ಕೂ ಅಧಿಕ ಜನರಿಗೆ ಹಾಕಲಾಗಿದೆ. ಎರಡನೇ ಡೋಸ್ 18 ಸಾವಿರ ಅಸುಪಾಸಿನಲ್ಲಿ ಹಾಕಲಾಗಿದೆ. ಶುಕ್ರವಾರ ಲಸಿಕೆ ಮೇಳ ಕಾರ್ಯಕ್ರಮ ಮೂಲಕ ಒಂದೇ ದಿನದಲ್ಲಿ 5 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.ಕೋವಿಡ್ ಲಸಿಕೆ ಹಾಕಲು ಪ್ರತಿ ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.
ನ್ಯಾಯಬೆಲೆ ಅಂಗಡಿ: ಪಟ್ಟಣ ಸೇರಿ ತಾಲೂಕಿನಾದ್ಯಂತನ್ಯಾಯಬೆಲೆಅಂಗಡಿಗಳಲ್ಲಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಪ್ರತಿ ತಿಂಗಳ ಪಡಿತರ ಚೀಟಿ ಫಲಾನುಭವಿಗಳು ಆಹಾರ ಧ್ಯಾನ ತೆಗೆದುಕೊಂಡು ಹೋಗಲು ಬರುವಂತಹವರಿಗೆ ಲಸಿಕೆ ಹಾಕಿಸಿಕೊಳ್ಳದಂತಹ ಫಲಾನುಭವಿಗಳಿಗೆ
ಕಡ್ಡಾಯ ಲಸಿಕೆ ಪಡೆದ ನಂತರವೇ ಆಹಾರ ಪೂರೈಸಲಾಗುತ್ತದೆ. ಬಹುತೇಕರು ಲಸಿಕೆ ಸೌಲಭ್ಯ ಪಡೆಯಲು ಹಿಂದೇಟು ಹಾಕಿದ ಮಾಹಿತಿ ಕಲೆ ಹಾಕಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.
ಇದನ್ನೂ ಓದಿ:ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ
ಬಸ್ ನಿಲ್ದಾಣ-ಸರ್ಕಾರಿ ಕಚೇರಿ: ಕೋವಿಡ್ ಜಾಗೃತಿ ನಡುವೆಯೇ ಆರೋಗ್ಯ ಇಲಾಖೆ ಬಸ್ ನಿಲ್ದಾಣ,ಮಿನಿ ವಿಧಾನಸೌಧ ಸರ್ಕಾರಿ ಕಚೇರಿ ಯಲ್ಲಿ ಜನರಿಗೆ ಕೋವಿಡ್ ಲಸಿಕೆ ಹಾಕಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಳ್ಳಿಗಳಿಗೆ ಮತ್ತು ನಗರ ಪ್ರದೇಶಗಳಿಗೆ ಹೋಗುವಂತಹ ಪ್ರಯಾಣಿಕರಿಗೆ ಬಸ್ ಏರುವ ಮುನ್ನ ಲಸಿಕೆ ಹಾಕಲಾಗುತ್ತಿದೆ. ಮಿನಿವಿಧಾನಸೌಧ ಒಳಗಿರುವ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವ ಜನರಿಗೆ ಲಸಿಕೆ ಹಾಕಿದ ನಂತರವೇ ಕಚೇರಿ ಒಳಗೆ ಪ್ರವೇಶವಿದೆ.
ಮನೆ-ಮನೆಗೆ ಆರೋಗ್ಯ ಸಿಬ್ಬಂದಿ: ನಿಗದಿತ ಗುರಿ ಮುಟ್ಟಲು ಜನರ ಆರೋಗ್ಯ ಸಂರಕ್ಷಣೆ ಉದ್ದೇಶ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡಿದ್ದೇವೆಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಜನರ ಮಾಹಿತಿ ಕಲೆ ಹಾಕಿ ಅಂತಹವರಿಗೂ ಲಸಿಕೆ ಹಾಕಲಾಗುತ್ತಿದೆ. ಹೋಟೆಲ್ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಮಾಲೀಕರಿಗೆ ಲಸಿಕೆ ಹಾಕಲಾಗುತ್ತಿದೆ. ಹೊಲಗದ್ದೆ ಕೆಲಸ ಹೋಗಿ ತಡವಾಗಿ ಬರುವ ಕೂಲಿ ಕಾರರಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ.
ಪ್ರತಿ ಮನೆ, ನ್ಯಾಯಬೆಲೆ ಬಸ್ ನಿಲ್ದಾಣ, ಸರ್ಕಾರಿ ಕಚೇರಿಯಲ್ಲಿ ಲಸಿಕೆ ಹಾಕಲಾಗುತ್ತಿದೆ. ಒಂದೂವರೆ ತಿಂಗಳಲ್ಲಿ ನಿಗದಿತ ಗುರಿ ಮುಟ್ಟಲು ಸಿದ್ಧತೆ ನಡೆದಿದೆ. ಲಸಿಕೆ ಮೇಳಕಾರ್ಯಕ್ರಮ ಮೂಲಕ ಶುಕ್ರವಾರ ಒಂದೇ ದಿನ 5 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.ಕೆಲ ಇಲಾಖೆಗಳು ಸಹಕರಿಸುತ್ತಿವೆ.
-ಡಾ|ಬನದೇಶ್ವರ, ತಾಲೂಕು ಆರೋಗ್ಯಾಧಿಕಾರಿ
ಎಲ್ಲಾ ಹಂತದ ಕಾರ್ಯಕ್ರಮಗಳ ಮೂಲಕ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಲಾಗಿದೆ. 90 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆಹಾಕಲಾಗಿದೆ.ನ್ಯಾಯಬೆಲೆ ಪಡಿತರ ಫಲಾನುಭವಿಗಳಿಗೆ ಕಡ್ಡಾಯವಾಗಿ ಲಸಿಕೆಹಾಕುವಂತೆ ಸೂಚನೆ ನೀಡಲಾಗಿದೆ.
-ಶ್ರೀನಿವಾಸಚಾಪಲ್, ಪ್ರಭಾರ ತಹಶೀಲ್ದಾರ್
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.