ಪಶು ಆಸ್ಪತ್ರೆಗಳಿಗೆ ಬೇಕಿದೆ ಚಿಕಿತ್ಸೆ
186ರ ಹಳ್ಳಿಗೆ ಐವರು ವೈದ್ಯರು
Team Udayavani, Sep 24, 2019, 4:07 PM IST
ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಾಂತ ಇರುವ ನಾಲ್ಕು ಪಶು ಆಸ್ಪತ್ರೆ ಮತ್ತು 8 ಹಳ್ಳಿಗಳಲ್ಲಿನ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿ 32 ಹುದ್ದೆ ಖಾಲಿ ಇದ್ದರೆ, ಇನ್ನೊಂದೆಡೆ ಹಳ್ಳಿಗಳಲ್ಲಿನ ಪಶು ಚಿಕಿತ್ಸಾಲಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ನಲುಗುತ್ತಿವೆ.
ತಾಲೂಕಿನಲ್ಲಿ ದೇವದುರ್ಗ ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು, ಅರಕೇರಾ ಸೇರಿದಂತೆ ನಾಲ್ಕು ಪಶು ಆಸ್ಪತ್ರೆಗಳಿವೆ. ಇನ್ನು ಹಿರೇಬೂದೂರು, ಆಲ್ಕೋಡ, ಗಾಣದಾಳ, ಮಸರಕಲ್, ಕ್ಯಾದಿಗೇರಾ, ನಾಗಡದಿನ್ನಿ, ಜಾಡಲದಿನ್ನಿ, ಗಲಗ ಸೇರಿ 8 ಪಶು ಚಿಕಿತ್ಸಾಲಯ ಕೇಂದ್ರಗಳಿವೆ. ಒಟ್ಟು 186 ಹಳ್ಳಿಗಳಿವೆ.
ಹುದ್ದೆ ಖಾಲಿ: ತಾಲೂಕಿನಲ್ಲಿ 4 ಪಶು ಆಸ್ಪತ್ರೆ, 8 ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಸೇರಿ ಒಟ್ಟು 55 ಹುದ್ದೆಗಳು ಮಂಜೂರಾಗಿವೆ. ಕೇವಲ 5 ಜನ ವೈದ್ಯರು ಸೇರಿ 23 ಜನ ಮಾತ್ರ ಇದ್ದಾರೆ. 7 ವೈದ್ಯರು, 20 ಡಿ ಗ್ರೂಪ್, 1 ಡ್ರೈವರ್, 4 ಜನ ಪಶು ಪರೀಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಇರುವ ವೈದ್ಯರೇ 186 ಹಳ್ಳಿಗಳಲ್ಲಿನ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. 8 ಪಶು ಚಿಕಿತ್ಸಾಲಯಗಳಲ್ಲಿ ತಲಾ ಎರಡು ಪಶು ಚಿಕಿತ್ಸಾಲಯಗಳಿಗೆ ಒಬ್ಬ ವೈದ್ಯರನ್ನು ನೇಮಿಸಲಾಗಿದೆ.
ಒಂದು ಪಶು ಚಿಕಿತ್ಸಾಲಯ ವ್ಯಾಪ್ತಿಗೆ 20 ಹಳ್ಳಿಗಳು ಬರುತ್ತವೆ. ಜಿಲ್ಲೆಯವರೇ ಆದ ಸಿಂಧನೂರಿನ ಶಾಸಕ ವೆಂಕಟರಾವ್ ನಾಡಗೌಡರೇ ಪಶು ಸಂಗೋಪನಾ ಖಾತೆ ಸಚಿವರಾಗಿದ್ದಾಗ ಹುದ್ದೆ ಭರ್ತಿಗೆ ಕ್ರಮ ವಹಿಸಲಿಲ್ಲ. ಈಗಿನ ಬಿಜೆಪಿ ಸರ್ಕಾರ ಕೂಡ ಹುದ್ದೆ ಭರ್ತಿಗೆ ಮುಂದಾಗದೇ ಇರುವ ಕಾರಣ ಗ್ರಾಮೀಣ ರೈತರು ಜಾನುವಾರುಗಳ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರೂಕಾಳಜಿ ವಹಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಕಟ್ಟಡಗಳು ಶಿಥಿಲ: ಗ್ರಾಮೀಣ ಪ್ರದೇಶದ 8 ಪಶು ಚಿಕಿತ್ಸಾಲಯಗಳಲ್ಲಿ ಗಲಗ, ನಾಗಡದಿನ್ನಿ, ಗಾಣಧಾಳ ಕೇಂದ್ರಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಬಾಡಿಗೆ ಕಟ್ಟಡದಲ್ಲಿ ಚಿಕಿತ್ಸಾಲಯ ನಡೆಸಲಾಗುತ್ತಿದೆ.
ಈ ಕಟ್ಟಡಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಉಳಿದ 5 ಪಶು ಚಿಕಿತ್ಸಾಲಯಗಳು ಅಲ್ಪಸ್ವಲ್ಪ ಉತ್ತಮವಾಗಿದ್ದು, ಅವುಗಳ ನಿರ್ವಹಣೆಗೆ ಅನುದಾನ ಅವಶ್ಯವಿದೆ. ಅನುದಾನ ಮಂಜೂರು: ಸಮೀಪದ ಮಸರಕಲ್, ಹಿರೇಬೂದೂರು ಪಶು ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಿಸಲು ಈಗಾಗಲೇ 38 ಲಕ್ಷ ಅನುದಾನ ಮಂಜೂರಾಗಿ ಆರೇಳು ತಿಂಗಳಾಗಿದೆ. ಕಂದಾಯ ಇಲಾಖೆಯಿಂದ ನಿವೇಶನ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ಬಾಕಿ ಇದೆ. ಜಿಲ್ಲಾ ಮಟ್ಟದಲ್ಲೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
20 ಪಶು ಆಸ್ಪತ್ರೆ ಅಗತ್ಯ: ಪಟ್ಟಣ ಸೇರಿ ತಾಲೂಕಿನ್ಯಾದಂತ 20 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳ ಅವಶ್ಯ ಇದೆ. ಇದೀಗ 12 ಮಾತ್ರ ಇವೆ. ಹೊಸದಾಗಿ 10 ಆಸ್ಪತ್ರೆಗಳ ಬೇಡಿಕೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ನಕಲಿ ವೈದ್ಯರ ಹಾವಳಿ: ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದ ಕುರಿ, ಮೇಕೆಗಳು ಮೃತಪಟ್ಟ ಘಟನೆಗಳು ನಡೆದಿವೆ. ಇಂತಹ ದುರಂತ ತಡೆಗೆ ಸರ್ಕಾರ ಪಶು ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಬೇಕೆಂದು ಕೆಆರ್‌ಎಸ್ ಸಂಘಟನೆ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.