ನೀತಿ ಸಂಹಿತೆ ಉಲ್ಲಂಘನೆ: ನಟಿ ಪೂಜಾಗೆ ಜಾಮೀನು
Team Udayavani, Oct 27, 2017, 6:20 AM IST
ರಾಯಚೂರು: ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ನಟಿ ಪೂಜಾ ಗಾಂಧಿ ಗುರುವಾರ ಇಲ್ಲಿನ ಜೆಎಂಎಫ್-2 ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರ ಣೆಗೆ ಹಾಜರಾಗದೆ ನಿರ್ಲಕ್ಷé ತೋರಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾ.ಪೂರ್ಣಿಮಾ ಯಾದವ್ ಅವರು ಸಂಜೆವರೆಗೂ ಪೂಜಾ ಗಾಂಧಿ ಅವರನ್ನು ಜೈಲಿನಲ್ಲಿಡುವಂತೆ ಸೂಚಿಸಿದರು.
ಆದರೆ, ನಟಿ ಪರ ವಕೀಲರ ಮನವಿ ಮೇರೆಗೆ ಸಂಜೆವರೆಗೂ ನ್ಯಾಯಾಲಯದಲ್ಲೇ ಕಾದು ಕುಳಿತುಕೊಳ್ಳುವಂತೆ ತಿಳಿಸಿದರು. ಭೋಜನ ವಿರಾಮದಲ್ಲೂ ನಟಿ ಎಲ್ಲೂ ತೆರಳದೆ ಒಳಗೆ ಕುಳಿತಿದ್ದರು. ಸಂಜೆ 5 ಗಂಟೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು 50 ಸಾವಿರ ರೂ. ನಗದು ಹಾಗೂ ಸ್ಥಳೀಯರಿಬ್ಬರಿಂದ ತಲಾ 25 ಸಾವಿರ ರೂ. ಶ್ಯೂರಿಟಿ ಆಧಾರದ ಮೇಲೆ ಷರತ್ತು ಬದಟಛಿ ಜಾಮೀನು ಮಂಜೂರುಗೊಳಿಸಿದ್ದಾರೆ.ಮುಂದಿನ ವಿಚಾರಣೆಯನ್ನು ನ.3ಕ್ಕೆ ನಿಗದಿಪಡಿಸಿದ್ದು, ಹಾಜರಾಗುವಂತೆ ನಿರ್ದೇಶಿಸಿದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು