ಕಲ್ಯಾಣ ನಾಡಿನಲ್ಲೂ ಸಂಗೀತ ಹರಡುವುದು ವಿವಿ ಆಶಯ
Team Udayavani, Apr 2, 2018, 3:28 PM IST
ಬಸವಕಲ್ಯಾಣ: ಸಂಗೀತದ ಕಂಪು ಕೇವಲ ಮೈಸೂರು ಭಾಗಕ್ಕೆ ಸೀಮಿತವಾಗದೆ ಕಲ್ಯಾಣ ನಾಡಿನಲ್ಲಿಯೂ ಹರಡಲಿ
ಎನ್ನುವುದು ಸಂಗೀತ ವಿವಿ ಆಶಯವಾಗಿದೆ ಎಂದು ಮೈಸೂರಿನ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿವಿ ಕುಲಪತಿ ಡಾ| ಸರ್ವಮಂಗಲಾ ಶಂಕರ ಹೇಳಿದರು.
ನೂತನ ಹುಲಸೂರು ತಾಲೂಕಿನ ಗೋರಟಾ ಗ್ರಾಮದ ಸಂಗೀತ ರುದ್ರೇಶ್ವರ ದೇವಾಲಯದ ಆವರಣದಲ್ಲಿ ಪ್ರಾದೇಶಿಕ ಸಂಗಿತ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಮತ್ತೆ ಸಂಗೀತ ಅಧ್ಯಯನ ಕೇಂದ್ರ ಪ್ರಾರಂಭ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ವಚನ ಚಳವಳಿ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ 12ನೇ ಶತಮಾನದ ಬಸವಾದಿ ಶರಣರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಸಂಗೀತ ಹಾಗೂ ವಚನಗಳಿಗೆ ನಿಕಟವಾದ ಸಂಬಂಧವಿದೆ. ಮಾನಸಿಕ ಒತ್ತಡ ಕಳೆದು ಜೀವನದಲ್ಲಿ ಉಲ್ಲಾಸ ತುಂಬುವ ಶಕ್ತಿ ಸಂಗೀತಕ್ಕೆ ಇದ್ದು, ಸಂಗೀತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು ಎಂದರು. ಇಲ್ಲಿ ಆರಂಭಿಸಲಾದ ಸಂಗೀತ ಅಧ್ಯಯನ ಕೇಂದ್ರ ಆದಷ್ಟು ಬೇಗನೆ ಕಾರ್ಯಾರಂಭ ಮಾಡಲಿದೆ ಎಂದರು.
ಗೋರಟಾದ ಡಾ| ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಐತಿಹಾಸಿಕ ಹಾಗೂ ಪ್ರಾಚಿನ ಇತಿಹಾಸ ಹೊಂದಿರುವ ಗೋರಟಾ ಗ್ರಾಮಕ್ಕೂ ಹಾಗೂ ಸಂಗಿತಕ್ಕೂ ಅವಿನಾಭಾವ ಸಂಬಂಧವಿದೆ. ಈ ಗ್ರಾಮದಲ್ಲಿ ಸುಮಾರು ದಶಕಗಳ ಹಿಂದೆ ಸಂಗೀತ ಘಟಿಕಾ ಸ್ಥಾನವಿತ್ತು. ವಿವಿ ಕುಲಪತಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಗ್ರಾಮದಲ್ಲಿ ಸಂಗೀತ ಅಧ್ಯಯನ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹುಲಸೂರು ತಾಲೂಕು ಘಟಕದ ಅಧ್ಯಕ್ಷೆ ಶಿವಲಿಲಾ ಮಠಪತಿ ಮಾತನಾಡಿ, ಗೋರಟಾ ಗ್ರಾಮದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದರು.
ವಿವಿ ಕುಲ ಸಚಿವ ಪ್ರೊ| ನಾಗೇಶ ಬೆಟ್ಟಕೋಟೆ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಡಾ| ಸಿದ್ರಾಮಯ್ನಾ ಸ್ವಾಮಿ ಮಾತನಾಡಿದರು. ವಿವಿ ಹಣಕಾಸು ಅಧಿಕಾರಿ ಎಚ್.ಎನ್.ಗಾಯತ್ರಿ, ಪ್ರಮುಖರಾದ ಶರಣಬಸಪ್ಪ ದೇಶಮುಖ, ಬಸವರಾಜ ಪೊಲೀಸ್ ಪಾಟೀಲ, ರೇವಪ್ಪ ಮುದ್ದಾ, ಕರಬಸಪ್ಪ ಅಕಣ್ಣಾ, ರವಿಶಂಕರ್ ಬಿರಾದಾರ ಉಪಸ್ಥಿತರಿದ್ದರು. ಶಾಂತಲಿಂಗ ಮಠಪತಿ ನಿರೂಪಿಸಿದರು. ಜಗನ್ನಾಥ ಅಕ್ಕಣ್ಣಾ ವಂದಿಸಿದರು. ರಾಜಕುಮಾರ ಹುಗಾರ ವಚನಗಾಯನ ಹಾಡಿದರು. ಜನಾರ್ಧನ ವಾಘಮಾರೆ ತಬಲಾ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.