ಪ್ರಭಾವಿಗಳ ಹೆಸರಿಗೆ ವಕ್ಫ್ ಆಸ್ತಿ ಪರಭಾರೆ: ಕೊಡ್ಲಿ
Team Udayavani, Dec 22, 2018, 3:25 PM IST
ರಾಯಚೂರು: ಮಾನವಿ, ಸಿರವಾರ ತಾಲೂಕು ಸೇರಿ ಗ್ರಾಮೀಣ ಭಾಗದಲ್ಲಿ ಕೆಲ ಪ್ರಭಾವಿಗಳು ವಕ್ ಆಸ್ತಿಯನ್ನು ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡಿದ್ದು, ಕೂಡಲೇ ಆಸ್ತಿಯನ್ನು ವಕ್ ಮಂಡಳಿಗೆ ಮರಳಿ ಪಡೆಯಬೇಕು ಎಂದು ಮೇಜರ್ ಶಹನವಾಜ್ ಖಾನ್ ಹೈದರಾಬಾದ್ ಕರ್ನಾಟಕ ಸಂಘದ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಹೆಸರಿಗೆ ವಕ್ ಮಂಡಳಿಗೆ ಸೇರಿದ ಭೂಮಿ ಪರಭಾರೆ ಮಾಡಲಾಗಿದೆ. ವಕ್ ಮಂಡಳಿ ವ್ಯಾಪ್ತಿಗೆ ಯಾವೆಲ್ಲ ಆಸ್ತಿಗಳು ಬರುತ್ತವೆ ಎಂಬ ಮಾಹಿತಿಯನ್ನು 2013ರಲ್ಲಿ ಈ ಕಾಯ್ದೆಯಲ್ಲಿ ಸರ್ಕಾರ ಉಲ್ಲೇಖೀಸಿದೆ. ಆದರೆ, ತಹಶೀಲ್ದಾರರು ಹಾಗೂ ನೋಂದಾಣಾಧಿ ಕಾರಿ ಕಾಯ್ದೆ ಉಲ್ಲಂಘಿಸಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿದರು.
ಮಾನ್ವಿಯಲ್ಲಿ ವೀರಭದ್ರಪ್ಪಗೌಡ ಆಲ್ದಾಳ, ಸಿದ್ದಪ್ಪಗೌಡ ಆಲ್ದಾಳ ಸುಮಾರು 60 ಎಕರೆ ಭೂಮಿ ಜಿಪಿಎ ಪಡೆದಿದ್ದಾರೆ. ಮನಸಾಲಿ ವೆಂಕಯ್ಯ ಶೆಟ್ಟಿ ಕುಟುಂಬಕ್ಕೆ ಸುಮಾರು 24 ಎಕರೆ, ಪಾಷಾ ಸಾಹುಕಾರ ಕುಟುಂಬದ ಹೆಸರಿನಲ್ಲಿ ಸುಮಾರು 13 ಎಕರೆ ಜಮೀನಿದೆ. ವಕ್ ಮಂಡಳಿ ಭೂಮಿಯನ್ನು ಇನಾಂದಾರರಿಂದ ಜಿಪಿಎ ಪಡೆದು ವೀರಭದ್ರಪ್ಪಗೌಡ ಆಲ್ದಾಳ ಹಾಗೂ ಸಿದ್ಧಪ್ಪಗೌಡ ಅವರು
ತಮ್ಮ ಹೆಸರಿಗೆ ಮಾಡಿಕೊಂಡು ನಿವೇಶನ ರಚಿಸಿ ಮಾರಲು ಮುಂದಾಗಿದ್ದಾರೆ. ಆದರೆ, ಇವರನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ಅಮಾಯಕರ ಭೂಮಿ ಹಿಂಪಡೆಯಲಾಗಿದೆ ಎಂದು ದೂರಿದರು.
ವಕ್ ಭೂಮಿ ಖರೀದಿಸಲು ವಕ್ ಮಂಡಳಿ ಪರವಾನಗಿ ಪಡೆಯಬೇಕು. ಆದರೆ, ಯಾವುದೇ ಪರವಾನಗಿ ಪಡೆಯದೆ ಖರೀದಿಸಲಾಗಿದೆ. ಇನ್ನೂ 500 ಎಕರೆ ವಕ್ ಮಂಡಳಿ ಭೂಮಿ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ದೂರಿದರು.
ಬಿನ್ ಶೇತ್ಕಿ ಮಂಜೂರು ಮಾಡಿಕೊಂಡು ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದು 320 ನಿವೇಶನ ಮಾರುತ್ತಿದ್ದಾರೆ. ಇದರಿಂದ ಜನರು ನಿವೇಶನ ಖರೀದಿಸಿದರೆ ತೊಂದರೆಗೆ ಸಿಲುಕಬೇಕಾಗುತ್ತದೆ. ಜಮೀನಿಗೆ ನೀಡಿದ ಎನ್‌ಎ ಅನುಮತಿ ಹಾಗೂ ನಗರ ಪ್ರಾಧಿ ಕಾರದ ನೀಡಿದ ಅನುಮತಿ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ
ಎಂದು ಎಚ್ಚರಿಸಿದರು.
ಸಂಸ್ಥಾಪಕ ಅಧ್ಯಕ್ಷ ಎಸ್.ಎಂ.ಶಾನವಾಜ್ ಮಾತನಾಡಿ, ಬಾಷಾ ಸಾಹುಕಾರ ಮುಸ್ಲಿಂ ಸಮಾಜಕ್ಕೆ ಮೀಸಲಿಟ್ಟ ಸ್ಮಶಾನ ಜಾಗ ಒತ್ತುವರಿ ಮಾಡಿದ್ದಾರೆ. ಅಲ್ಲಿ ಶೆಡ್ ನಿರ್ಮಿಸಿ ಬಿಸಿಎಂ ವಸತಿ ನಿಲಯಕ್ಕೆ ಬಾಡಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಸಂಘದ ಸದಸ್ಯರಾದ ಎಂ.ಡಿ. ಮೈನುದ್ದೀನ್, ಸಾಬೀರಪಾಷಾ. ರಮೇಶ ಕರಿಗುಡ್ಡ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.