ನೀರಿಗಾಗಿ ತಪ್ಪದ ಅಲೆದಾಟ
•ಕೆರೆಗೆ ನೀರು ತುಂಬಿಸುವಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರ ನಿರ್ಲಕ್ಷ್ಯ: ಗ್ರಾಮಸ್ಥರ ಆರೋಪ
Team Udayavani, Jul 23, 2019, 5:00 PM IST
ಮಸ್ಕಿ: ರಂಗಾಪುರ ಗ್ರಾಮದಲ್ಲಿ ನೀರಿನ ಗುಮ್ಮಿ ಎದುರು ಬಂಡಿಗಳಲ್ಲಿ ಕೊಡಗಳನ್ನು ಇರಿಸಿರುವುದು.
ಮಸ್ಕಿ: ತಾಲೂಕಿನ ಗುಡದೂರು ಗ್ರಾಪಂ ವ್ಯಾಪ್ತಿಯ ಹಸಮಕಲ್ ಗ್ರಾಮದ ಹೊರವಲಯದಲ್ಲಿನ ಕುಡಿಯುವ ನೀರಿನ ಕೆರೆ ಬರಿದಾಗಿದೆ. ಕುಡಿಯುವ ನೀರಿಗೆ ಕೆರೆ ನೀರನ್ನೇ ಅವಲಂಬಿಸಿದ ಗ್ರಾಮಗಳ ಗ್ರಾಮಸ್ಥರು ನೀರಿಗಾಗಿ ಅಲೆದಾಡುವಂತಾಗಿದೆ.
ಹಸಮಕಲ್ ಗ್ರಾಮದ ಬಳಿಯ ಕೆರೆ 15 ದಿನಗಳ ಹಿಂದೆಯೇ ಖಾಲಿ ಆಗಿದೆ. ಗುಡದೂರು, ಹಸಮಕಲ್, ರಂಗಾಪುರ, ಪಾಂಡುರಂಗ ಕ್ಯಾಂಪ್, ಮುದ್ದಾಪುರ ಗ್ರಾಮಸ್ಥರು ಈ ಕೆರೆ ನೀರನ್ನೇ ಅವಲಂಬಿಸಿದ್ದರು. ಈಗ ಕೆರೆ ಖಾಲಿ ಆಗಿದ್ದರಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದೆ.
ಒಂದೇ ಶಾಲಾ ಬೋರ್‌ವೆಲ್ ಆಸರೆ: ರಂಗಾಪುರು ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ನಾಲೆ ಪಕ್ಕದಲ್ಲಿರುವ ಶಾಲಾ ಬೋರ್‌ವೆಲ್ ಒಂದೇ ಗತಿಯಂತಾಗಿದೆ. ಸಂಜೆಯಾದರೆ ಸಾಕು ಗ್ರಾಮಸ್ಥರು ನೂರಾರು ಖಾಲಿಗಳನ್ನು ಶಾಲಾ ಬೋರ್‌ವೆಲ್ ಬಳಿ ಸರದಿಯಲ್ಲಿ ಇರಿಸಿ ನೀರಿಗಾಗಿ ಕಾಯುವಂತಾಗಿದೆ.
ಒಮ್ಮೆಯೂ ಕೆರೆ ಭರ್ತಿ ಮಾಡಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನ ನಾಲೆಗೆ ನೀರು ಸ್ಥಗಿತಗೊಳ್ಳುವ ಸಮಯದಲ್ಲೂ ಕುಡಿಯುವ ನೀರಿನ ಕೆರೆ ಭರ್ತಿ ಮಾಡಿರಲಿಲ್ಲ. ನಂತರ ಬೇಸಿಗೆ ಆರಂಭವಾದ ನಂತರ ಕುಡಿಯುವ ನೀರಿಗಾಗಿ ನಾಲೆಗೆ ನೀರು ಹರಿಸಿದಾಗಲೂ ಈ ಕೆರೆ ಭರ್ತಿ ಮಾಡಿಲ್ಲ. ಹೀಗಾಗಿ ಈಗ ಕೆರೆ ಸಂಪೂರ್ಣ ಬರಿದಾಗಿದೆ. ನಾಲೆ ಪಕ್ಕದಲ್ಲೇ ಕೆರೆ ನಿರ್ಮಿಸಿದರೂ ಕೆರೆಗೆ ನೀರು ತುಂಬಿಸಲು ಪಿಡಿಒ ನಿರ್ಲಕ್ಷಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಬಾವಿ ನೀರು ಖಾಸಗಿಗೆ ಬಳಕೆ: ಕುಡಿಯುವ ನೀರಿನ ಕೆರೆ ಸಂಪೂರ್ಣ ಖಾಲಿ ಆಗಿರುವುದು ಪಿಡಿಒ ಗಮನಕ್ಕಿದೆ. ಕೆರೆಯ ಪಕ್ಕದಲ್ಲಿರುವ ಕೊಳವೆಬಾವಿ ನೀರನ್ನು ವ್ಯಕ್ತಿಯೊಬ್ಬರು ಕೃಷಿ ಚಟುವಟಿಕೆಗೆ ಬಳಸುತ್ತಿದ್ದೂ ಗುಡದೂರು ಗ್ರಾಪಂ ಪಿಡಿಒ ಮೌನ ವಹಿಸಿರುವುದು ಅನುಮಾನಕ್ಕೆಡೆ ಮಾಡಿದೆ.
ಕ್ರಮಕ್ಕೆ ಹಿಂದೇಟು: ಗುಡದೂರು ಗ್ರಾಪಂ ವ್ಯಾಪ್ತಿಯ ನಾಲ್ಕೈದು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆದರೆ ಕೊಳವೆಬಾವಿ ನೀರನ್ನು ಖಾಸಗಿ ವ್ಯಕ್ತಿಯೊಬ್ಬರು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವುದನ್ನು ತಡೆದು ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲು ಗ್ರಾಪಂ ಪಿಡಿಒ ಹಿಂದೇಟು ಹಾಕುತ್ತಿದ್ದಾರೆ ಎಂದು ರಂಗಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.