ಮಸ್ಕಿಯಲ್ಲಿ ಐದು ದಿನಕ್ಕೊಮ್ಮೆ ನೀರು
ಕಾಲುವೆ ಹರಿವು ಸ್ಥಗಿತ ಬೆನ್ನಲ್ಲೇ ನೀರಿನ ಬವಣೆ
Team Udayavani, Apr 27, 2021, 4:57 PM IST
ಮಸ್ಕಿ: ಬಿರು ಬೇಸಿಗೆ ಏರಿಕೆ ಬೆನ್ನಲ್ಲೇ ಈಗ ಮಸ್ಕಿಯಲ್ಲಿ ನೀರಿನ ಬವಣೆ ಶುರುವಾಗಿದೆ. ನೀರಿನ ಮೂಲಗಳಕೊರತೆ, ಕೆರೆಯಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದಕುಸಿತ, ಮಸ್ಕಿ ಜನ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಿಸಿದೆ!.
ಪ್ರತಿ ಬೇಸಿಗೆ ಅವ ಧಿಯಲ್ಲೂ ಈ ಸಮಸ್ಯೆ ಪುನರಾವರ್ತನೆ ಸಾಮಾನ್ಯ.ಆದರೆ ಬೆಳೆಯುತ್ತಿರುವ ಮಸ್ಕಿಪಟ್ಟಣಕ್ಕೆ ಅಗತ್ಯವಿರುವಷ್ಟು ನೀರಿನ ಸಂಗ್ರಹ ಸಾಮರ್ಥ್ಯ ವೃದ್ಧಿಸಿಕೊಳ್ಳುವಲ್ಲಿ ಪುರಸಭೆ ಆಡಳಿತ ಪ್ರತಿ ಬಾರಿಯೂ ವಿಫಲವಾಗುತ್ತಿದೆ. ಈ ಬಾರಿಯೂ ದೂರದೃಷ್ಟಿ ಕೊರತೆ ಕಾರಣ ಇನ್ನು ಎರಡ್ಮೂರುತಿಂಗಳು ಮಸ್ಕಿ ಪಟ್ಟಣದ ಜನರು ನೀರಿಗಾಗಿ ಅಲೆದಾಡುವ ಸ್ಥಿತಿ ಬಂದಿದೆ.
ಕಾಲುವೆಯೇ ಆಧಾರ: ಮಸ್ಕಿ ಪಟ್ಟಣಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯೇ ಕುಡಿವನೀರಿನ ಮೂಲ. ಕಾಲುವೆಗೆ ಹರಿಯುವ ನೀರನ್ನು ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ಕೆರೆಯಲ್ಲಿಸಂಗ್ರಹಿಸಿ ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ನೀರುಸರಬರಾಜು ಮಾಡಲಾಗುತ್ತದೆ. ಎಡದಂಡೆ ಕಾಲುವೆಗೆ ನೀರಿನ ಹರಿವು ಇದ್ದಷ್ಟು ದಿನ ಮಸ್ಕಿಜನತೆಗೆ ಕುಡಿವ ನೀರಿನದು ನಿಶ್ಚಿಂತೆ. ಆದರೆ ಬೇಸಿಗೆ ಅವಧಿಗೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತದ ಬೆನ್ನಲ್ಲೇ ಕುಡಿವ ನೀರಿನ ಬವಣೆ ಆರಂಭವಾಗುತ್ತದೆ.ಈ ಬಾರಿಯೂ ಈ ಸಮಸ್ಯೆ ಸಹಜವಾಗಿಯೇ ಉದ್ಭವಿಸಿದೆ. ಏ.20ರಿಂದ ಕಾಲುವೆಯಲ್ಲಿ ನೀರಿನಹರಿವು ಸ್ಥಗಿತ ಮಾಡಲಾಗಿದೆ. ಇದರಿಂದ ಮಸ್ಕಿ ಪಟ್ಟಣಕ್ಕೆ ನೀರಿನ ಸಮಸ್ಯೆ ಬಿಗಡಾಯಿಸಿದೆ.
ಐದು ದಿನಕ್ಕೊಮ್ಮೆ ನೀರು: ಮಸ್ಕಿ ಪಟ್ಟಣಕ್ಕೆ ಕುಡಿವ ನೀರಿನ ಉದ್ದೇಶಕ್ಕೆ ನೀರು ಸಂಗ್ರಹಿಸುವ ಕೆರೆಯಸಾಮರ್ಥ್ಯ ಕಡಿಮೆ ಇದೆ. ಸದ್ಯ 110ಎಂಎಲ್‌ಡಿ ನೀರಿನ ಸಂಗ್ರಹವಿದ್ದು, ಪಟ್ಟಣದ ಎಲ್ಲ ವಾರ್ಡ್‌ಜನರಿಗೆ ನೀರು ತಲುಪಿಸಲು ನಿತ್ಯ 2.9 ಎಂಎಲ್‌ಡಿಯಷ್ಟು ನೀರು ಬೇಕು. ಆದರೆ ಹೀಗೆ ನೀರು ಹರಿಸಿದರೆ, ಲಭ್ಯ ನೀರು ಬೇಸಿಗೆ ಅವ ಧಿವರೆಗೂಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಮಸ್ಕಿ ಪುರಸಭೆಆಡಳಿತ ಏ.20ರಿಂದಲೇ ಪಟ್ಟಣದಲ್ಲಿ ನಾಲ್ಕುದಿನ ಬಿಟ್ಟು ಐದನೇ ದಿನಕ್ಕೆ ನೀರು ಪೂರೈಸುತ್ತಿದೆ.ಇನ್ನು ಎರಡೂವರೆ ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ.
ಒಂದು ವಾರದಿಂದ ಐದು ದಿನಕ್ಕೊಮ್ಮೆ ನೀರುಬಿಡುತ್ತಿರುವುದರಿಂದ ವಾರ್ಡ್‌ಗಳಲ್ಲಿ ತೀವ್ರಸಮಸ್ಯೆ ಎದುರಾಗಿದ್ದು, ಬೇಸಿಗೆಮುಕ್ತಾಯದವರೆಗೂ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಹೀಗಿದೆ ಅಂಕಿ-ಸಂಖ್ಯೆ :
2011ರ ಜನಗಣತಿ ಪ್ರಕಾರ ಮಸ್ಕಿ ಪಟ್ಟಣದಲ್ಲಿ 23 ಸಾವಿರ ಜನಸಂಖ್ಯೆ ಇದೆ. ಸದ್ಯ 2021ರ ಪ್ರಕಾರ ಈ ಸಂಖ್ಯೆ 28ಸಾವಿರಕ್ಕೇರಿದೆ ಎನ್ನುವ ಅಂದಾಜಿದೆ. ಈ ಜನಸಂಖ್ಯೆಗೆಅನುಗುಣವಾಗಿ ಲಭ್ಯ ಇರುವ ನೀರನ್ನು ಅಳೆದು-ತೂಗಿಬಳಕೆ ಮಾಡಬೇಕಿರುವುದು ಪುರಸಭೆ ಲೆಕ್ಕಾಚಾರ. ಇದೇಮಾನದಂಡದ ಆಧಾರದ ಮೇಲೆ ಸದ್ಯ ಕೆರೆಯಲ್ಲಿ ಲಭ್ಯಇರುವ ನೀರು ಬಳಸಲು 5 ದಿನಕ್ಕೊಮ್ಮೆ ನೀರು ಸರಬರಾಜುಮಾಡಲು ಪುರಸಭೆ ಮುಂದಾಗಿದೆ. 28 ಸಾವಿರ ಜನಸಂಖ್ಯೆ ಲೆಕ್ಕದಲ್ಲಿ ಮಸ್ಕಿ ಪಟ್ಟಣಕ್ಕೆ ದಿನಕ್ಕೆ 2.9 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಆದರೆ ಪುರಸಭೆ ಅ ಧೀನದ ಕೆರೆ ನೀರಿನಸಂಗ್ರಹ ಸಾಮರ್ಥ್ಯವೇ 110 ಎಂಎಲ್‌ಡಿ. ಇದರಲ್ಲಿಬೇಸಿಗೆ ಆವಿ ಪ್ರಮಾಣ 20 ಎಂಎಲ್‌ಡಿ ತೆಗೆದರೆ ಕುಡಿವ ಉದ್ದೇಶಕ್ಕೆ ಲಭ್ಯ ನೀರು ಕೇವಲ 90 ಎಂಎಲ್‌ಡಿ. ಲಭ್ಯನೀರನ್ನು ನಿತ್ಯ ಸರಬರಾಜು ಮಾಡಿದರೆ ಒಂದೇ ತಿಂಗಳಲ್ಲಿಕೆರೆ ಖಾಲಿಯಾಗಲಿದೆ. ಇದಕ್ಕಾಗಿ ಲಭ್ಯ ನೀರು ಬಳಕೆ ಹಿನ್ನೆಲೆಯಲ್ಲಿ ಐದು ದಿನಕ್ಕೊಮ್ಮೆ ನೀರು ಹರಿಸಿದರೆ ಮೇ ತಿಂಗಳ ಅಂತ್ಯದವರೆಗೆ ಸಾಕಾಗಲಿದೆ. ಇದೇ ಕಾರಣಕ್ಕೆ ಪುರಸಭೆ ಅಧಿಕಾರಿಗಳು ಈ ನಿರ್ಣಯ ಕೈಗೊಂಡಿದ್ದಾರೆ.
43 ಬೋರ್‌ವೆಲ್ :
ಮಸ್ಕಿ ಪಟ್ಟಣದ ಎಲ್ಲ ವಾರ್ಡ್‌ಗಳುಸೇರಿ ಪುರಸಭೆ ಅ ಧೀನದಲ್ಲಿ 43 ಬೋರ್‌ವೆಲ್‌ಗಳಿದ್ದು, ಈ ಬೋರ್‌ವೆಲ್‌ಗಳಿಂದಲೇ ಪ್ರತ್ಯೇಕ ನೀರು ಸರಬರಾಜು ಮಾಡಬೇಕೆನ್ನುವುದು ಜನರ ಒತ್ತಡ. ಕುಡಿಯುವುದಕ್ಕಾಗಿ ಪ್ರತ್ಯೇಕವಾಗಿಕೆರೆ ನೀರು ಸರಬರಾಜು ಮಾಡಿದರೆ,ದಿನ ಬಳಕೆಗೆ ಬೋರ್‌ವೆಲ್ ನೀರು ಹರಿಸಬೇಕು ಎನ್ನುವುದು ಜನರ ಒತ್ತಾಸೆ.
ಬೇಸಿಗೆ ಅವಧಿಗೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಮಸ್ಕಿಪಟ್ಟಣದಲ್ಲಿ ಐದು ದಿನಕ್ಕೊಮ್ಮೆ ನೀರುಸರಬರಾಜು ಮಾಡಲಾಗುತ್ತಿದೆ. ಬೇಸಿಗೆಮುಕ್ತಾಯದವರೆಗೂ ನೀರು ಮಿತವಾಗಿಬಳಸಿ ಜನರು ಸಹಕರಿಸಬೇಕು.– ಹನುಮಂತಮ್ಮ, ಮುಖ್ಯಾಧಿಕಾರಿ, ಪುರಸಭೆ ಮಸ್ಕಿ
–ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.