ಎನ್ನಾರ್ಬಿಸಿ ಕಾಲುವೆಗೆ ಫೆ.10ರವರೆಗೆ ನೀರು ಹರಿಸಿ
Team Udayavani, Dec 7, 2018, 5:11 PM IST
ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಫೆ.10ರವರೆಗೆ ನೀರು ಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಗುರುವಾರ ಸಿರವಾರ ಕ್ರಾಸ್ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಅವರಿಗೆ ಮನವಿ ಸಲ್ಲಿಸಿದರು.
ಎನ್ನಾರಿºಸಿ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 2.50 ಲಕ್ಷ ಎಕರೆ ಜಮೀನಿನಲ್ಲಿ ರೈತರು ಕಾಲುವೆ ನೀರು ನಂಬಿ ಬೆಳೆ ಬೆಳೆದಿದ್ದಾರೆ. ರೈತರು ಪ್ರತಿ ಎಕರೆಗೆ 50ರಿಂದ 80 ಸಾವಿರ ಖರ್ಚು ಮಾಡಿದ್ದಾರೆ. ಜೋಳ, ಹತ್ತಿ, ಮೆಣಸಿನಕಾಯಿ, ಕಡಲೆ, ಶೇಂಗಾ ಬೆಳೆಗಳು ಇದೀಗ ಹೂ ಬಿಡುವ ಹಂತದಲ್ಲಿವೆ.
ತಾಲೂಕಿನಲ್ಲಿ ವಿತರಣಾ ಕಾಲುವೆ 15ರಿಂದ 18ರವರೆಗೆ ಸಮರ್ಪಕ ನೀರು ಹರಿಯುತ್ತಿಲ್ಲ. ಈ ಕುರಿತು ರೈತ ಸಂಘಟನೆ ಅನೇಕ ಬಾರಿ ನಿಗಮದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕಾರಣ ನೀರಾವರಿ ನಿಗಮ ಅ ಧಿಕಾರಿಗಳು ಸ್ಥಿತಿ ಅರಿತು ಫೆ.10ರವರೆಗೆ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು. ಪದಾ ಕಾರಿಗಳದ ಅಮರಣ್ಣ ಗುಡಿಹಾಳ, ಎನ್.ಲಕ್ಷ್ಮಣಗೌಡ,
ಸೂಗುರಯ್ಯ ಸ್ವಾಮಿ ಜಾನೇಕಲ್, ಶಿವನಗೌಡ, ಬೂದೆಯ್ಯ ಸ್ವಾಮಿ ಇತರರು ಮಾತನಾಡಿದರು.
ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಹರೀಶ, ಶ್ರೀನಿವಾಸ, ಶೌಖತ್‌ಅಲಿ, ರಾಮಪ್ರಸಾದ, ಶ್ರೀಧರ ಬಲ್ಲಿದವ ಹಾಗೂ ಇತರರು ರೈತರೊಂದಿಗೆ ಚರ್ಚಿಸಿದರು. ಡಿವೈಎಸ್ಪಿ ಎಸ್.ಬಿ.ಸುಬೇದಾರ, ಸಿಪಿಐ ಸಂಜೀವಕುಮಾರ ತ್ರಿಲೋಕ, ಪಿಎಸ್‌ಐ ಲಕ್ಕಪ್ಪ ಬಿ.ಅಗ್ನಿ ನೇತೃತ್ವದಲ್ಲಿ ಬಂದೋಬಸ್ತ್
ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಯಾಣಿಕರ ಪರದಾಟ: ರೈತರು ಸುಮಾರು ಮೂರು ತಾಸು ರಸ್ತೆ ತಡೆ ನಡೆಸಿದ್ದರಿಂದ ರಾಯಚೂರು ಮತ್ತು ದೇವದುರ್ಗ ರಸ್ತೆ ಮಾರ್ಗದಲ್ಲಿ ನೂರಾರು ವಾಹನಗಳು ನಿಂತಿದ್ದವು. ರಾಯಚೂರು, ಸಿರವಾರ, ಚಿಕ್ಕಬೂದೂರು ಸೇರಿ ಇತರೆ ಗ್ರಾಮಗಳಿಗೆ ಹೋಗುವ ಬಸ್, ಖಾಸಗಿ ವಾಹನಗಳ
ಪ್ರಯಾಣಿಕರು ಪರದಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.