ಸಚಿವ ವೆಂಕಟರಾವ್ ನಾಡಗೌಡರಿಗೆ ಅದ್ಧೂರಿ ಸ್ವಾಗತ
Team Udayavani, Jun 13, 2018, 2:09 PM IST
ಸಿಂಧನೂರು: ಸಚಿವರಾದ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಕ್ಷೇತ್ರದ ಜನತೆ ತಾಲೂಕಿನ ದಡೇಸುಗೂರು ಹತ್ತಿರದ ತುಂಗಭದ್ರಾ ನದಿ ಬಳಿ ಅದ್ಧೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಸಿಂಧನೂರುವರೆಗೆ ಮೆರವಣಿಗೆ ನಡೆಸಿದರು.
ಸಚಿವ ವೆಂಕಟರಾವ ನಾಡಗೌಡ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ದಡೇಸುಗೂರು ಗ್ರಾಮದ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಸಿಂಧನೂರುವರೆಗೆ ಬರುವ ಎಲ್ಲ ಗ್ರಾಮ ಹಾಗೂ ಕ್ಯಾಂಪ್ ಗಳಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಸಚಿವ ನಾಡಗೌಡ ತೆರೆದ ವಾಹನದಲ್ಲಿ ಬರುತ್ತಿದ್ದರೆ ಹಿಂದೆ ಹಿಂಬಾಲಕರ, ಕಾರ್ಯಕರ್ತರ ಸಾವಿರಾರು ವಾಹನ ಮೆರವಣಿಗೆಗೆ ಮೆರಗು ನೀಡಿದವು. ದಡೇಸುಗೂರು ಗ್ರಾಮಕ್ಕೆ 2 ಗಂಟೆ ಸುಮಾರಿಗೆ ಬಂದರೆ ಸಿಂಧನೂರು ತಲುಪುವ ವೇಳೆಗೆ ಸಂಜೆ 5:30 ಗಂಟೆ ಅಗಿತ್ತು. ಈ ಮಧ್ಯೆ ಶ್ರೀಪುರಂ ಜಂಕ್ಷನ್‌ನಲ್ಲಿರುವ ಮುಖಂಡ ಗುರ್ರಂ ಗುನ್ನೇಶ್ವರರಾವ್ ಅವರ ನಿವಾಸದಲ್ಲಿ ಸಚಿವರು ಮಧ್ಯಾಹ್ನ ಊಟ ಮಾಡಿದರು.
ಮೆರವಣಿಗೆ ಸಿಂಧನೂರು ನಗರ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರು ಜೆಡಿಎಸ್ ಧ್ವಜಗಳನ್ನಿಡಿದುಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಜೊತೆಗೆ ಡೊಳ್ಳು ಕುಣಿತ, ಭಾಜಾ-ಭಜಂತ್ರಿಗಳು ಮೆರವಣಿಗೆಗೆ ಮೆರಗು ನೀಡಿದವು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಗರದ ಸತ್ಯಗಾರ್ಡನ್‌ಕ್ಕೆ ಆಗಮಿಸಿ ಸಮಾವೇಶ ನಡೆಸಲಾಯಿತು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಿಂಗಪ್ಪ, ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ, ಜೆಡಿಎಸ್ ಮುಖ್ಯ ಸಂಚಾಲಕ ಬಿ.ಹರ್ಷ, ವಕ್ತಾರ ಬಸವರಾಜ ನಾಡಗೌಡ, ಕಾರ್ಯಾಧ್ಯಕ್ಷ ಮಲ್ಲೇಶಗೌಡ, ನಾಗೇಶ ಹಂಚಿನಾಳ ಕ್ಯಾಂಪ್, ಡಿ.ಸತ್ಯನಾರಾಯಣ, ಜಿ.ಸತ್ಯನಾರಾಯಣ, ಎಸ್. ಕೃಷ್ಣಮೂರ್ತಿ, ಧರ್ಮನಗೌಡ ಮಲ್ಕಾಪುರ, ಅಶೋಕಗೌಡ ಗದ್ರಟಗಿ, ರಾಮನಗೌಡ ಮಲ್ಕಾಪುರ, ರಂಗಾರೆಡ್ಡಿ, ಚಂದ್ರಶೇಖರ ಮೈಲಾರ, ಕೆ.ಮರಿಯಪ್ಪ, ಸಾಯಿರಾಮಕೃಷ್ಣ, ನದೀಮುಲ್ಲಾ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟ್ರಾಫಿಕ್ ಜಾಮ್: ತಾಲೂಕಿನ ದಡೇಸುಗೂರು ಗ್ರಾಮದಿಂದಲೇ ಸಚಿವರನ್ನು ಮೆರವಣಿಗೆ ಮೂಲಕ ಸಿಂಧನೂರಿಗೆ ಬರಮಾಡಿಕೊಳ್ಳುವಾಗ ರಸ್ತೆಯುದ್ದಕ್ಕೂ ನೂರಾರು ವಾಹನಗಳು ನಿಂತು ಸಂಚಾರಕ್ಕೆ ಸಮಸ್ಯೆ ಆಯಿತು. ಟ್ರಾಕ್ ನಿಯಂತ್ರಣಕ್ಕೆ ಡಿವೈಎಸ್‌ಪಿ ಪ್ರದೀಪ ಕುಲ್ಕರ್ಣಿ, ಸಿಪಿಐ ನಾಗರಾಜ ಕಮ್ಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.