ಬೆಳೆ ಖರೀದಿ ಕೇಂದ್ರ ಆರಂಭ ಎಂದು?
Team Udayavani, Nov 10, 2020, 5:58 PM IST
ದೇವದುರ್ಗ: ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭ ಎಂದು ಎಂಬ ಪ್ರಶ್ನೆ ರೈತರಲ್ಲಿ ಶುರುವಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಹಾಗೂ ನಾಟಿ ಮಾಡಿದ ಭತ್ತ ರಾಶಿಗೆ ಬಂದಿವೆ. ಬಹುತೇಕ ಗ್ರಾಮಗಳಲ್ಲಿ ಹತ್ತಿ ಬಿಡಿಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಬಲವಾದ ಕೂಗು ರೈತರಿಂದ ಕೇಳಿಬರುತ್ತಿದೆ.
ಹತ್ತಿ, ತೊಗರಿ, ಭತ್ತ ಸೇರಿ ಇತರೆ ಬೆಳೆಗಳು ರಾಶಿ ಹಂತಕ್ಕೆ ಬಂದಿವೆ. ಆರಂಭದಲ್ಲೇ ಖರೀದಿ ಕೇಂದ್ರ ಆರಂಭವಾದಲ್ಲಿ ರೈತರಿಗೆ ಅನುಕೂಲವಾಗಲಿದೆ. ಖರೀದಿ ಕೇಂದ್ರ ಆರಂಭಿಸಿ ಬೆಲೆ ನಿಗದಿಪಡಿಸುವಂತೆ ರೈತರು ಒತ್ತಾಯಿಸಿದರೂಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಯಾವುದೇ ನಿರ್ಧಾರ ಮಾಡುತ್ತಿಲ್ಲ. ವಾರದ ಮುಂಚೆಯೇ ಖರೀದಿ ಕೇಂದ್ರಕ್ಕೆ ರೈತರು ಅಗತ್ಯ ದಾಖಲಾತಿಗಳುನೀಡಲಾಗುತ್ತದೆ. ರಾಜ್ಯ ಸರಕಾರ ಖರೀದಿ ಕೇಂದ್ರಆರಂಭಿಸುವಂತೆ ಸೂಚನೆ ನೀಡದೇ ಹಿನ್ನೆಲೆನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧಬೆಳೆಗಳು ಮಾರಾಟದ ಚಿಂತೆ ಶುರುವಾಗಿದೆ. ಕಳೆದ ವರ್ಷ ಎಪಿಎಂಸಿ ಮೂಲಕ ಹಿಂದೂಸ್ತಾನಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿದರು.
ಕೃಷಿ ಮಾರುಕಟ್ಟೆ ಆವರಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಹಾಕರ ಮಾರಾಟಸಂಘದಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ರೈತರು ರಾಶಿ ಮಾಡಿ ಮಾರಾಟದ ಹೊತ್ತಿಗೆ ಖರೀದಿ ಕೇಂದ್ರ ಆರಂಭಕ್ಕೆ ಚಿಂತನೆ ಮಾಡುವ ಜಿಲ್ಲಾಡಳಿತ ನಡೆ ರೈತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯ ಸಾವಿರಾರೂ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಹಾಗೂ ಹತ್ತಿ ಬಿತ್ತನೆಯಾಗಿದೆ. ದೇವದುರ್ಗ 5097 ಹೆಕ್ಟೇರ್, ಗಬ್ಬೂರು 7140, ಜಾಲಹಳ್ಳಿ 9657, ಅರಕೇರಾ 7217, ನಾಲ್ಕು ಹೋಬಳಿ ಸೇರಿ 29,021 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. 50,293 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ರಾಶಿ ಹಂತದಲ್ಲಿವೆ.
ಮಾರುಕಟ್ಟೆ ಸ್ತಬ್ದ: ತಾಲೂಕು ಶೇ.80ರಷ್ಟು ನೀರಾವರಿ ಸೌಲಭ್ಯ ಹೊಂದಿದೆ. ಇಲ್ಲಿ ಬೆಳೆಯುವ ವಿವಿಧ ಬೆಳೆಗಳು ಬೇರೆ ಬೇರೆ ಜಿಲ್ಲೆಯಲ್ಲಿ ಹೆಸರುವಾಸಿ. ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಸೌಲಭ್ಯವಿದೆ. ಆದರೆ ಯಾವುದೇ ಕೃಷಿ ಚಟುವಟಿಕೆ ನಡೆಯದೇ ಇರುವುದರಿಂದ ಸ್ತಬ್ದವಾಗಿದೆ. ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈತರಿಗೆ ಅನುಕೂಲವಾಗಬೇಕಾದ ಕೃಷಿ ಮಾರುಕಟ್ಟೆ ಶಾಪಗ್ರಸ್ತವಾಗಿದೆ. ರಾಜಕೀಯತೋಳಾಟಕ್ಕೆ ಪ್ರತಿವರ್ಷ ರಾಯಚೂರು ಕೃಷಿ ಮಾರುಕಟ್ಟೆಗೆ ವಿಲೀನವಾಗುತ್ತಿದೆ. ಬೆಳೆದ ಬೆಳೆಗಳು ಮಾರಾಟಕ್ಕೆ ಇನ್ನೊಂದು ಜಿಲ್ಲೆಗೆ ಹೋಗುವಂತಹ ಸ್ಥಿತಿ ರೈತರಿಗೆ ಬಂದಾಗಿದೆ ಎಂದು ರೈತ ಮುಖಂಡ ಉಮಾಪತಿಗೌಡ ನಗರಗುಂಡ ಆಗ್ರಹಿಸಿದರು.
ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಸರಕಾರದಿಂದ ಆದೇಶ ಬಂದಿಲ್ಲ. ಖರೀದಿ ಕೇಂದ್ರ ತೆರೆಯಬೇಕು ಎನ್ನುವ ರೈತರ ಬೇಡಿಕೆಯಿದೆ. ಜಿಲ್ಲಾಡಳಿತದಿಂದ ಸೂಚನೆ ಬಂದ ನಂತರ ಆರಂಭಿಸಲಾಗುತ್ತದೆ. –ಮಧುರಾಜ್ ಯಾಳಗಿ, ತಹಶೀಲ್ದಾರ್.
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.