ಕೃಷಿ ಮೇಳವೋ-ವಾಣಿಜ್ಯ ಮೇಳವೋ?


Team Udayavani, Nov 15, 2017, 4:03 PM IST

maxresdefault.jpg

ರಾಯಚೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಡೆಸುವ ಕೃಷಿ ಮೇಳ ಅಕ್ಷರಶಃ ವ್ಯಾಪಾರ ಮೇಳವಾಗುತ್ತಿದೆಯೇ? ಈ ಬಾರಿ ಮಳಿಗೆಗಳ ದರ ನೋಡಿದರೆ ಅಂಥ ಅನುಮಾನ ಮೂಡದೆ ಇರದು.

ಕೃಷಿ ಚಟುವಟಿಕೆ ಸಂಬಂಧಿಸಿದ ಮಾಹಿತಿ ನೀಡಲು, ಯಂತ್ರೋಪಕರಣಗಳ ಪರಿಚಯಿಸಲು ಹಾಗೂ ನೂತನ ಪದ್ಧತಿಗಳ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಕೃಷಿ ಮೇಳ ಆಯೋಜಿಸಲಾಗುತ್ತದೆ. ಈ ಬಾರಿಯೂ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಡಿ.8 ರಿಂದ 11ರವರೆಗೆ “ನೆಲ ಜಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ’ ಎಂಬ ಶೀರ್ಷಿಕೆಯಡಿ ಕೃಷಿ ಮೇಳ ಆಯೋಜಿಸಲಾಗಿದೆ. ಆದರೆ, ಮಳಿಗೆಗಳ ದರ ಕಂಡು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಮಾತ್ರ ಕಂಗಾಲಾಗಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ 300 ಮಳಿಗೆಗಳನ್ನು ನಿರ್ಮಿಸುತ್ತಿದ್ದು, ದರ ಮಾತ್ರ ದುಪ್ಪಟ್ಟಾಗಿದೆ. 10x10x8 ಅಳತೆಯ ಎಕಾನಮಿ ಸ್ಟಾಲ್‌ಗೆ 9500 ರೂ. ದರ ನಿಗದಿ ಮಾಡಲಾಗಿದೆ. ಫೆಬ್ರಿಕೇಟ್‌ (ಹೈಟೆಕ್‌) 10x10x8 ಮಳಿಗೆಗೆ 18,000 ರೂ. ನಿಗದಿ ಮಾಡಲಾಗಿದೆ. 30×40 ಅಳತೆಯ ಬಯಲು ಸ್ಥಳಕ್ಕೆ 18,000 ರೂ. ಹಾಗೂ 60×40 ಅಳತೆಯ ಬಯಲು ಪ್ರದೇಶಕ್ಕೆ 36,000 ರೂ. ದರ ನಿಗದಿ ಮಾಡಲಾಗಿದೆ. ಇನ್ನು ಪ್ರಚಾರಾರ್ಥ ಅಳವಡಿಸುವ ಫ್ಲೆಕ್ಸ್‌ ಬಂಟಿಂಗ್ಸ್‌ಗಳಿಗೂ 30ರಿಂದ 50 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು ಎಕಾನಮಿ ಸ್ಟಾಲ್‌ ಬಳಸುತ್ತಿದ್ದು, ನಾಲ್ಕು ದಿನಕ್ಕೆ 9500 ಸಾವಿರ ರೂ. ನಿಗದಿ ಮಾಡಿರುವುದು ದುಬಾರಿ ಎನ್ನುತ್ತಿದ್ದಾರೆ. ಮೇಳಕ್ಕೆ ಬರುವವರೆಲ್ಲ ವ್ಯಾಪಾರ ಮಾಡುವುದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಯದಿದ್ದಲ್ಲಿ ಕೈಯಿಂದ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ. ಅಲ್ಲದೇ, ಕಳೆದ ಬಾರಿ ಕೂಡ ಸಾಕಷ್ಟು ಮಳಿಗೆಗಳು ಖಾಲಿ ಉಳಿದಿದ್ದವು.

ಮಳಿಗೆಗಳಿಗೂ ಜಿಎಸ್‌ಟಿ ಬಿಸಿ: ವಿಪರ್ಯಾಸ ಎಂದರೆ ಮಳಿಗೆಗಳಿಗೂ ಜಿಎಸ್‌ಟಿ ಬಿಸಿ ತಟ್ಟಿದೆ. 10 ಸಾವಿರ ರೂ. ಮೇಲ್ಪಟ್ಟ ಮಳಿಗೆಗೆ ಜಿಎಸ್‌ಟಿ ಪಾವತಿಸಬೇಕಿರುವುದರಿಂದ 500 ರೂ. ಕಡಿತಗೊಳಿಸಿ 9500 ನಿಗದಿ ಮಾಡಲಾಗಿದೆ. ಆದರೆ, ಫೆಬ್ರಿಕೇಟ್‌ ಮಳಿಗೆಗಳಿಗೆ 15 ಸಾವಿರ ರೂ. ದರವಿದ್ದರೂ ಜಿಎಸ್‌ಟಿ ಸೇರಿ 18 ಸಾವಿರ ರೂ. ಪಾವತಿಸಬೇಕಿದೆ. ಉಳಿದೆಲ್ಲ ಮಳಿಗೆಗಳಿಗೂ ತೆರಿಗೆ ಸಹಿತ ಶುಲ್ಕ ಪಾವತಿಸಬೇಕಿದೆ. ಹೀಗಾಗಿ ಜಿಎಸ್‌ಟಿ ಹೊರೆ ವರ್ತಕರ ಹೆಗಲೇರಿದೆ.

ಸಾಹಿತ್ಯ ಸಮ್ಮೇಳನದಲ್ಲೇ ಕಡಿಮೆಯಿತ್ತು: ಕಳೆದ ವರ್ಷ ಇದೇ ಸ್ಥಳದಲ್ಲೇ ನಡೆದಿದ್ದ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ 400 ಮಳಿಗೆಗಳನ್ನು ಅಳವಡಿಸಲಾಗಿತ್ತು. ಅಲ್ಲಿ ವಾಣಿಜ್ಯ ಉದ್ದೇಶಕ್ಕೆ ಒಂದು ಮಳಿಗೆಗೆ 4 ಸಾವಿರ ರೂ., ಪುಸ್ತಕ ಮಳಿಗೆಗಳಿಗೆ 2500 ರೂ. ದರ ನಿಗದಿ ಮಾಡಲಾಗಿತ್ತು. ಅಳತೆಯಲ್ಲೂ ಕೂಡ ಯಾವುದೇ ವ್ಯತ್ಯಾಸವಿರಲಿಲ್ಲ. ಕಲಾವಿದರಿಗೆ ಕೇವಲ ಒಂದು ಸಾವಿರ ರೂ. ಪಡೆಯಲಾಗಿತ್ತು. ಆದರೆ, ರೈತಪರ ಕಾರ್ಯಕ್ರಮವಾದ ಕೃಷಿ ಮೇಳದಲ್ಲಿ ಈ ರೀತಿ ಮನಸೋ ಇಚ್ಛೆ ದರ ನಿಗದಿ ಮಾಡುವುದರಿಂದ ಸಣ್ಣ ಮಧ್ಯಮ ವ್ಯಾಪಾರಿಗಳು ಮೇಳದಿಂದ ದೂರವುಳಿಯುವಂತಾಗುತ್ತದೆ.

ಕೃಷಿ ಮೇಳವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಸ್ಥಳೀಯ ರೈತರು ಹಾಗೂ ಕೃಷಿ ಉತ್ಪನ್ನಗಳ ಆಧಾರಿತ ವರ್ತಕರಿಗೆ ನೆರವಾಗುವ ನಿಟ್ಟಿನಲ್ಲಿ ದರ ನಿಗದಿ ಮಾಡಲಿ ಎಂಬ ಒತ್ತಾಯ ಕೇಳಿ ಬರುತ್ತಿವೆ ಕಳೆದ ಬಾರಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೇ ಮಳಿಗೆಗಳ ದರ ನಾಲ್ಕು ಸಾವಿರ ರೂ. ಇತ್ತು. ಆದರೆ, ಇದು ರೈತರ ಮೇಳ. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ನೂ ಕಡಿಮೆ ದರ ನಿಗದಿ ಮಾಡಿದ್ದರೆ ಸೂಕ್ತವಾಗುತ್ತಿತ್ತು. ಮಳಿಗೆ ದರ ಹೆಚ್ಚಾದರೆ ವಸ್ತುಗಳ ದರವೂ ಹೆಚ್ಚಾಗಿ ಬಡ, ಮಧ್ಯಮ ಜನರು ಏನೂ ಖರೀದಿಸಲು ಮುಂದಾಗುವುದಿಲ್ಲ. ಈ ಬಗ್ಗೆ ಕೃಷಿ ವಿವಿ ಚಿಂತನೆ ನಡೆಸಬೇಕು.

ವಿರೂಪಾಕ್ಷಪ್ಪ, ಶಿವಲಿಂಗ ಬುಕ್‌ ಡಿಪೋ

ಕೃಷಿ ಮೇಳಕ್ಕೆ 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 300 ಮಳಿಗೆ ನಿರ್ಮಿಸುತ್ತಿದ್ದು, 70 ಹೈಟೆಕ್‌ ಹಾಗೂ ಉಳಿದವು ಸಾಮಾನ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಕೆಲವೊಂದು ರಿಯಾಯಿತಿ ದರದಲ್ಲಿ ಸಿಗಲಿವೆ. ಸರ್ಕಾರ ನೀಡುವ ಅನುದಾನ ಜತೆಗೆ ಮಳಿಗೆಗಳಿಂದ ಸಂಗ್ರಹವಾದ ಹಣದಿಂದ ಮೇಳ ನಿರ್ವಹಣೆ ಮಾಡಬೇಕಿದೆ. ಕಳೆದ ಬಾರಿ 40 ಲಕ್ಷ ರೂ.
ಗಿಂತ ಹೆಚ್ಚು ಖರ್ಚು ಮಾಡಲಾಗಿತ್ತು.

ಪಿ.ಎಂ.ಸಾಲಿಮಠ ,ಕುಲಪತಿ, ಕೃಷಿ ವಿವಿ, ರಾಯಚೂರು.

ಟಾಪ್ ನ್ಯೂಸ್

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ

Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.