ಮಂತ್ರಾಲಯದಲ್ಲಿ ವಿಶ್ವ ಹೃದಯ ಸಮ್ಮೇಳನ
Team Udayavani, Dec 8, 2017, 6:05 AM IST
ರಾಯಚೂರು: ಸಿದ್ಧಿ ಸಮಾಧಿ ಯೋಗ ಸಂಸ್ಥಾಪಕರಾದ ಗುರೂಜಿ ಶ್ರೀ ಋಷಿ ಪ್ರಭಾಕರಜೀ ಸಂಕಲ್ಪದಂತೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರದಿಂದ ಮೂರು ದಿನ ವಿಶ್ವ ಹೃದಯ ಸಮ್ಮೇಳನ-2017 ನಡೆಯಲಿದೆ.
ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಗೌರವಾಧ್ಯಕ್ಷತೆ ವಹಿಸುವರು. ರಾಷ್ಟ್ರಪತಿ ಪದಕ ಪುರಸ್ಕೃತ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ, ಗುರು ಮಾತಾ ರಮಾದೇವಿ ಅಮ್ಮ, ಅರುಂಧತಿ ಋಷಿ ಪ್ರಭಾಕರ ಹಾಗೂ ಸಿದಾಟಛಿಂತ ಋಷಿ ಪ್ರಭಾಕರ ಭಾಗವಹಿಸುವರು. ಮಹಾಚಾರ್ಯ ಶ್ರೀ ಚೈತನ್ಯ ಕಾಯ್ಕಿಣಿ ಮಾರ್ಗ ದರ್ಶನ ನೀಡು ವರು. ಎಸ್.ಎನ್.ಸುಯಮೀಂ ದ್ರಾಚಾರ್, ಡಾ.ಆರ್.ಪ್ರಭಾಕರರಾವ್ ಸಹಕಾರ ನೀಡುವರು. ಸಮ್ಮೇಳನಕ್ಕೆ ಸುಕ್ರವಾರ ಬೆಳಗ್ಗೆ 9.45ಕ್ಕೆ ಕರ್ನಾಟಕದ ಮಾಜಿ
ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಚಾಲನೆ ನೀಡುವರು. ಆಧ್ಯಾತ್ಮಿಕ ಚಿಂತನವನ್ನು ಶ್ರೀ ಮಠದ ವಿದ್ವಾಂಸರು ನಡೆಸುವರು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭಾಗವಹಿಸುವರು.
ಮೈಸೂರಿನ ಅವಧೂತ ದತ್ತ ಪೀಠದ ಡಾ.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಿ.10ರಂದು ಕೊಪ್ಪ ತಾಲೂಕಿನ ಗೌರಿಗದ್ದೆ ಹರಿಹರಪುರದ ಶ್ರೀ ವಿನಯ ಅವಧೂತರು ಸಮ್ಮೇಳನ ಉದ್ಘಾಟಿಸುವರು.
ಚಳ್ಳಕೆರೆಯ ಶ್ರೀ ಕ್ಷೇತ್ರ ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಅಪ್ಪಾಜೀ ಸಾನ್ನಿಧ್ಯ ವಹಿಸುವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಆಗಮಿಸುವರು ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.