ಬೇಸಿಗೆಯಲ್ಲಿ ನೀಗದ ಜನರ ಜಲದಾಹ!

Team Udayavani, Apr 24, 2021, 3:05 PM IST

You have the summer water!

ದೇವದುರ್ಗ: ತಾಲೂಕು ಕೃಷ್ಣಾ ನದಿ ದಂಡೆಗೆಹೊಂದಿಕೊಂಡಿದ್ದರೂ ಬೇಸಿಗೆಯಲ್ಲಿ ಜನ-ಜಾನುವಾರು ಜಲದಾಹಕ್ಕೆ ಮುಕ್ತಿ ಸಿಕ್ಕಿಲ್ಲ. ಇನ್ನೊಂದೆಡೆನಾರಾಯಣಪುರ ಬಲದಂಡೆ ನಾಲೆ ವರ್ಷದ8 ತಿಂಗಳು ಹರಿದರೂ ಕುಡಿಯುವ ನೀರಿಗೆ ತತ್ವಾರತಪ್ಪಿಲ್ಲ.

ಬೇಸಿಗೆ ಬಂದರೆ ಸಾಕು ತಾಲೂಕಿನ 40ಕ್ಕೂಹೆಚ್ಚು ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಎದುರಾಗುತ್ತಿದೆ. ಎನ್‌ಆರ್‌ಬಿ ನಾಲೆ ಕೊನೆ ಭಾಗ, ಗುಡ್ಡಗಾಡು ಪ್ರದೇಶ,ರಸ್ತೆ ಸಂಚಾರವಿಲ್ಲದ ತಾಂಡಾ, ದೊಡ್ಡಿಗಳಲ್ಲಿನೀರಿನ ಅಭಾವ ದಿನೇ ದಿನೇ ಹೆಚ್ಚಾಗುತ್ತಿದೆ.

ಜನರ ದಾಹ ನೀಗಿಸಲು ತಾಪಂ ಹಾಗೂ ಜಿಪಂಹತ್ತಾರು ಯೋಜನೆಗಳನ್ನು ಜಾರಿಗೆ ತಂದರೂಜನರ ದಾಹ ನೀಗುತ್ತಿಲ್ಲ. ನೀರಿನಂತೆ ಅನುದಾನಖರ್ಚಾದರೂ ಶಾಶ್ವತ ಪರಿಹಾರ ಎನ್ನುವುದುಮರೀಚಿಕೆಯಾಗಿದೆ.ಬಹುಗ್ರಾಮ ಯೋಜನೆ, ಜಲ ನಿರ್ಮಾಲಯೋಜನೆ, ಶುದ್ಧೀಕರಣ ಯೋಜನೆ, ರಾಷ್ಟ್ರೀಯಗ್ರಾಮೀಣ ಕುಡಿವ ನೀರಿನ ಯೋಜನೆ ಸೇರಿವಿವಿಧ ಯೋಜನೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿಜಾರಿಗೊಳಿಸಲಾಗಿದೆ.

ಯೋಜನೆಗೆ ಕೋಟ್ಯಂತರಅನುದಾನ ಖರ್ಚಾದರೂ ನಿರ್ವಹಣೆ ಕೊರತೆಯಿಂದಹಳ್ಳಹಿಡಿದಿವೆ. ತಾಲೂಕಿನ ಸೋಮನಮರಡಿ,ಹೇಮನಾಳ, ಕೋಳ್ಳೂರು, ಊಟಿ, ಸಲಿಕ್ಯಾಪುರ,ಚಿಕ್ಕಬೂದೂರು, ಜೇರಬಂಡಿ, ಹೊಸೂರು ಸಿದ್ದಾಪುರ,ವಂದಲಿ ಸೇರಿ ತಾಂಡಾ, ದೊಡ್ಡಿಗಳಲ್ಲಿ ಕುಡಿವನೀರಿನ ಬವಣೆಯಿದೆ. ಬೇಸಿಗೆ ಬಂದರೆ ಖಾಸಗಿಬೋರ್‌ವೆಲ್‌, ಹಳ್ಳಕೊಳ್ಳ ಅಲೆಯುವಂತಸ್ಥಿತಿಯಿದೆ.ಕೃಷ್ಣಾ ನದಿಯಿಂದಪಟ್ಟಣಕ್ಕೆ 24×7 ನೀರುಒದಗಿಸಲು ಯೋಜನೆಜಾರಿಗೊಳಿಸಿದ್ದರೂ, ಅದರ ಉದ್ದೇಶಸಕರಾತ್ಮಕವಾಗಿ ಈಡೇರಿಲ್ಲ.

ಕೆಲ ವಾರ್ಡ್‌ ಗಳಿಗೆದಿನದಲ್ಲಿ 10-20 ನಿಮಿಷನೀರು ಬಿಟ್ಟರೆ, ಕೆಲವುಕಡೆ ಎರಡೂ ಮೂರುದಿನಕ್ಕೊಮ್ಮೆ ನೀರುಪೂರೈಸಲಾಗುತ್ತಿದೆ.ಹೊಸ ಬಡವಣೆಗಳಿಗೆಕುಡಿವ ನೀರಿನಸೌಲಭ್ಯವೇ ಕಲ್ಪಿಸಿಲ್ಲ. ಪ್ರತಿಮನೆಗೆ ನಲ್ಲಿ, ವಾಟರ್‌ಮೀಟರ್‌ ಅಳವಡಿಕೆಕನಸಾಗಿಯೇ ಉಳಿದಿದೆ.ವಿಷಪೂರಿತ ನೀರಿನಿಂದ ಅನಾರೋಗ್ಯ:ಪರಿಸರ ಅಸಮತೋಲನದಿಂದದಿನೇ-ದಿನೇ ಬೋರ್‌ವೆಲ್‌ ನೀರು ವಿಷವಾಗುತ್ತಿದೆ.ವಂದಲಿ, ಊಟಿ, ಸುಣ್ಣದಕಲ್‌, ಬಿ.ಗಣೇಕಲ್‌,ಸೋಮನಮರಡಿ, ಎಚ್‌.ಸಿದ್ದಾಪುರ ಸೇರಿ20ಕ್ಕೂ ಹೆಚ್ಚು ಗ್ರಾಮಗಳ ಬೋರ್‌ವೆಲ್‌ನಲ್ಲಿಆರ್ಶೇನಿಕ್‌ ಹಾಗೂ ಪ್ಲೋರೈಡ್‌ ನೀರಿನ ಅಂಶಹೆಚ್ಚುತ್ತಿದೆ.

ಈ ಬಗ್ಗೆ ಅ ಧಿಕಾರಿಗಳು ಸರ್ಕಾರಕ್ಕೆಮಾಹಿತಿ ನೀಡಿದ್ದು, ಇದರ ನಿರ್ವಹಣೆಗಾಗಿ ಶುದ್ಧಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.ಹಲವು ಕಡೆ ಯೋಜನೆ ನನೆಗುದಿಗೆಬಿದ್ದಿದ್ದರೆ, ಕೆಲಕಡೆ ನಿರ್ವಹಣೆ ಕೊರತೆಯಿಂದಮೂಲೆ ಸೇರಿವೆ.

ಬೆರಳೆಣಿಕೆ ಪ್ಲಾಂಟ್‌ಗಳು ಮಾತ್ರಕಾರ್ಯನಿರ್ವಹಿಸುತ್ತಿವೆ. ಜನರು ಅನಿವಾರ್ಯವಾಗಿಅರ್ಶೇನಿಕ ಹಾಗೂ ಪ್ಲೋರೈಡ್‌ಯುಕ್ತ ನೀರುಕುಡಿಯುತ್ತಿದ್ದಾರೆ. ಮೊಣಕಾಲು ನೋವು, ಕೀಲುಬೇನೆ, ಕಂದು ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಹ‌ಳ್ಳಹಿಡಿದ ಯೋಜನೆಗಳು

ಕುಡಿವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ 30 ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.ಅದರಲ್ಲಿ 17 ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, 13 ಘಟಕಗಳು ನಿರ್ವಹಣೆ ಕೊರತೆಯಿಂದನಿರುಪಯುಕ್ತವಾಗಿವೆ.

ಸುಮಾರು 20ಕ್ಕೂ ಹೆಚ್ಚು ಪ್ಲಾಂಟ್‌ಗಳು ಅರೆಬರೆಯಾಗಿವೆ. ಹೊಸ ಪ್ಲಾಂಟ್‌ಗಳಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ಸಂಬಂ ಧಿಸಿದ ಇಲಾಖೆಯಿಂದ ಅನುಮೋದನೆ ದೊರತಿಲ್ಲ.ಆಲ್ಕೋಡ್‌, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್‌, ನೀಲವಂಜಿ, ಸೂಗರಾಳ, ಗಣಜಲಿಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ ನಿರುಪಯುಕ್ತವಾಗಿವೆ. ಕೊತ್ತದೊಡ್ಡಿ ಗ್ರಾಪಂನ ಹಳ್ಳಿಗಳಿಗೆ ಶಾಶ್ವತಕುಡಿವ ನೀರು ಕಲ್ಪಿಸಲು 4.60 ಕೋಟಿ ರೂ. ವೆಚ್ಚದ ಯೋಜನೆ ಹಳ್ಳ ಹಿಡಿದಿದೆ. ಇದರಿಂದಯಮನೂರು, ಎಲ್‌.ದೊಡ್ಡಿ, ಲಿಂಗನದೊಡ್ಡಿ, ಮಲ್ಲೇನಾಯಕದೊಡ್ಡಿ, ಕರಡೋಣಿಯಲ್ಲಿನೀರಿನ ಸಮಸ್ಯೆಯಿದೆ.

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

BJP doing election campaign on Waqf issue: Sharan Prakash Patil

Raichur: ವಕ್ಫ್‌ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ

10-

Maski ರುದ್ರಭೂಮಿಯಲ್ಲಿ ವಿದ್ಯುತ್ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಒತ್ತಾಯ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.