ಕೊಳೆ ಕಳೆಯಲು ಕಲೆ ಅನಾವರಣ
ರಾಯಚೂರು ಬಸ್ ನಿಲ್ದಾಣ ಕಾಂಪೌಂಡ್ ಮೇಲೆ ಅರಳಿದ ಚಿತ್ರಕಲೆ ಯುವ ಬ್ರಿಗೇಡ್ ಕಾರ್ಯಕ್ಕೆ ಹಲವರ ಸಾಥ್
Team Udayavani, Dec 23, 2019, 12:37 PM IST
ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಕಳೆದೆರಡು ವರ್ಷಗಳ ಹಿಂದೆ ನಡೆದ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೋಡೆಗಳಿಗೆಲ್ಲ ಜನಪದ ಶೈಲಿಯ ಚಿತ್ರ ಬಿಡಿಸುವ ಮೂಲಕ ನಗರ ಸೌಂದರ್ಯ ಹೆಚ್ಚಿಸಿದ್ದು ಇನ್ನೂ ಹಸಿರಾಗಿದೆ. ಈಗ ಯುವ ಬ್ರಿಗೇಡ್ ಸದಸ್ಯರು ಅಂಥದ್ದೇ ಪ್ರಯೋಗ ಮಾಡುವ ಮೂಲಕ ನಗರ ಕೇಂದ್ರ ಬಸ್ ನಿಲ್ದಾಣದ ಅಂದ ಹೆಚ್ಚಿಸುತ್ತಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಜನ ಬರುತ್ತಿದ್ದರೂ ನಿರ್ವಹಣೆ ಮಾತ್ರ ಶೂನ್ಯವಾಗಿತ್ತು. ಸುತ್ತಲಿನ ಗೋಡೆಗಳಿಗೆಲ್ಲ ಮೂತ್ರ ವಿಸರ್ಜನೆ ಮಾಡಿದ್ದರಿಂದ ಜನ ಅತ್ತ ತಲೆ ಹಾಕುವುದು ಕಷ್ಟ ಎನ್ನುವಂಥ ವಾತಾವರಣವಿತ್ತು. ಇಲ್ಲಿನ ಅವ್ಯವಸ್ಥೆ ಬಗ್ಗೆ ಅನೇಕ ಸಂಘಟನೆಗಳು ಸಂಬಂಧಿ ಸಿದವರ ಗಮನ ಸೆಳೆದರೂ ಸ್ವಚ್ಛತೆಗೆ ಮಾತ್ರ ಒತ್ತು ನೀಡಿರಲಿಲ್ಲ. ಇದನ್ನು ಗಮನಿಸಿದ ಯುವ ಬ್ರಿಗೇಡ್ ಸದಸ್ಯರು ಆ ಗೋಡೆಗಳಿಗೆಲ್ಲ ಸುಂದರ ಕಲಾಕೃತಿಗಳನ್ನು ಬಿಡಿಸಿ ಅದರ ಅಂದ ಹೆಚ್ಚಿಸಿದ್ದಾರೆ.
ಸ್ವಚ್ಛತೆ-ಸುಣ್ಣ ಬಣ್ಣ: ಇದು ಕಳೆದ ಐದು ವಾರಗಳಿಂದ ನಡೆದುಕೊಂಡು ಬಂದಿದೆ. ಪ್ರತಿ ರವಿವಾರ ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಯುವ ಬ್ರಿಗೆಡ್ ಸದಸ್ಯರು ಸೇವಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಮೊದಲೆರಡು ವಾರ ಕೇವಲ ಸ್ವಚ್ಛತೆಗೆ ಆದ್ಯತೆ ನೀಡಲಾಯಿತು. ನಂತರ ಒಂದು ವಾರ ಬಣ್ಣ ಬಳಿಯಲಾಯಿತು. ಕಳೆದೆರಡು ವಾರಗಳಿಂದ ಸುಂದರ ಕಲಾಕೃತಿಗಳು ಅನಾವರಣಗೊಳ್ಳುತ್ತಿವೆ.
ಪರಿಸರ ಜಾಗೃತಿ: ಗೋಡೆಗಳ ಮೇಲೆ ಸರಳ ಕಲಾಕೃತಿಗಳನ್ನು ಬಿಡಿಸುತ್ತಿದ್ದು, ದಾರಿಹೋಕರ ದೃಷ್ಟಿಯನ್ನು ತಮ್ಮತ್ತ ಸೆಳೆಯುತ್ತಿವೆ. ಅದರಲ್ಲಿ ಮುಖ್ಯವಾಗಿ ಪರಿಸರ ಜಾಗೃತಿ ಮೂಡಿಸುವಂತ ಕಲಾಕೃತಿಗಳೇ ಹೆಚಾÌಗಿರುವುದು ವಿಶೇಷ. ಪರಿಸರ, ಗಿಡಗಳು, ಹಳ್ಳಿಗಾಡಿನ ಸೊಗಡು ಚಿತ್ರಣ ಮಾಡಲಾಗಿದೆ. ಅದರ ಜತೆಗೆ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ಆರ್‌ಟಿಪಿಎಸ್, ಹಟ್ಟಿ ಚಿನ್ನದ ಗಣಿ, ಕಲ್ಲಾನೆ, ಕೋಟೆ, ಕನ್ನಡ ನಾಡು, ನುಡಿ, ಸಾಲುಮರದ ತಿಮ್ಮಕ್ಕ ಜತೆ ದೇಶಭಕ್ತಿ ಸಾರುವ ಕಲಾಕೃತಿಗಳನ್ನು ಬಿಡಿಸಲಾಗುತ್ತಿದೆ.
ಕಲರಫುಲ್ ಕಾಂಪೌಂಡ್: ರಾಯಚೂರು ಬಸ್ ನಿಲ್ದಾಣ ಬೆಟ್ಟದ ಕೆಳಗಿರುವ ಕಾರಣ ಒಂದು ಬದಿ ಕಲ್ಲು ಬಂಡೆಗಳು, ಕೋಟೆಯಿಂದ ಆವೃತಗೊಂಡಿದೆ. ಎರಡು ಬದಿ ಮಾತ್ರ ಕಾಂಪೌಂಡ್ ಗೋಡೆ ಇದೆ. ಇದಕ್ಕೆ ಹೊಂದಿಕೊಂಡು ಶೌಚಾಲಯ ನಿರ್ಮಿಸಿದ್ದು ಅದು ನಿರ್ವಹಣೆ ಕಾಣದೆ ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಜನ ಅಲ್ಲಿಗೆ ಹೋಗದೇ ಗೋಡೆಗಳ ಮೇಲೆಲ್ಲ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದರಿಂದ ವಾತಾವರಣವೆಲ್ಲ ಗಬೆದ್ದು ನಾರುವಂತಾಗಿತ್ತು. ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಸಲು ಈ ಕ್ರಮ ಕೈಗೊಂಡಿದ್ದಾಗಿ ಹೇಳುತ್ತಾರೆ ಯುವ ಬ್ರಿಗೇಡ್ ಸದಸ್ಯರು.
ಸ್ವಯಂ ಸೇವೆ: ಯುವ ಬ್ರಿಗೆಡ್ ಈ ಕಾರ್ಯಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ. ಕೆಲವರು ಸ್ವ ಇಚ್ಛೆಯಿಂದ ನೆರವು ನೀಡುತ್ತಾರೆ. ಮೆಡಿಕಲ್ ನರಸಿಂಹ ಎನ್ನುವವರು ಸ್ವತ್ಛತಾ ಕಾರ್ಯ ಕೈಗೊಳ್ಳುವ ಕಾರ್ಯಕರ್ತರಿಗೆ ಕೈ ಗ್ಲೌಸ್ ನೀಡಿದ್ದಾರೆ. ಇನ್ನು ಬಣ್ಣ ಬಿಡಿಸುವ ಕುರಿತು ತಿಳಿದ ಕೂಡಲೇ ಕಲಾವಿದರಾದ ನರಸಪ್ಪ, ಸೋಮಶೇಖರ ಭಂಡಾರಿ ಎನ್ನುವವರು ತಾವೇ ಮುಂದೆ ಬಂದು ಸುಂದರ ಕಲಾಕೃತಿ ಬಿಡಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವ ಬ್ರಿಗೇಡ್ ಸೈಟ್‌ನಲ್ಲಿ ಮಾಹಿತಿ ಹಾಕಿದ ಕೂಡಲೇ ನೆರವು ನೀಡಲು ಮುಂದೆ ಬಂದಿದ್ದಾರೆ.
ರೈಲು ನಿಲ್ದಾಣ ಸ್ಪೂರ್ತಿ
ಮಹಾತ್ಮ ಗಾಂಧಿಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಆಯ್ದ ರೈಲು ನಿಲ್ದಾಣಗಳನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಅದರಲ್ಲಿ ರಾಯಚೂರು ರೈಲು ನಿಲ್ದಾಣ ಕೂಡ ಸೇರಿದ್ದು, ಇಂದು ಆಕರ್ಷಣೀಯ ಕೇಂದ್ರವಾಗಿದೆ. ಇಂಥದ್ದೇ ವಾತಾವರಣ ಬಸ್ ನಿಲ್ದಾಣದಲ್ಲಿ ಯಾಕೆ ನಿರ್ಮಾಣಗೊಳ್ಳಬಾರದು ಎಂಬುದು ಯುವ ಬ್ರಿಗೇಡ್ ಕಾರ್ಯಕರ್ತರ ಮನ ಸೆಳಯಿತು. ಅದರ ಪ್ರತಿಫಲವೇ ಈ ಕಲರಫುಲ್ ವಾಲ್.
ಯುವ ಬ್ರಿಗೇಡ್ ವತಿಯಿಂದ ಈ ಹಿಂದೆ ಕೂಡ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ಈಚೆಗೆ ನಗರದಲ್ಲಿ ಎರಡು ಕಲ್ಯಾಣಿಗಳ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದೆವು. ಸ್ವಚ್ಛತಾ ಕಾರ್ಯದ ಮುಂದುವರಿದ ಭಾಗವಾಗಿ ಈ ಚಿತ್ರಕಲೆ ಬಿಡಿಸಲಾಗುತ್ತಿದೆ. ನಮ್ಮ ತಂಡದಲ್ಲಿ 10 ಜನರಿದ್ದು, ಪ್ರತಿ ವಾರ ಒಂದೊಂದು ಕಡೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕಳೆದ ಐದು ವಾರದಿಂದ ಇಲ್ಲಿಯೇ ಕೆಲಸ ನಡೆದಿದೆ. ಇದಕ್ಕೆ ಸಾಕಷ್ಟು ಜನ ಸ್ವಯಂ ಪ್ರೇರಣೆಯಿಂದ ನೆರವು ನೀಡುತ್ತಿದ್ದಾರೆ. ನಮ್ಮ ನಗರ ಸುಂದರವಾಗಿ ಕಾಣಬೇಕು ಎನ್ನುವುದಷ್ಟೇ ನಮ್ಮ ಅಭಿಲಾಷೆ.
ಲಕ್ಷ್ಮಣ ರೆಡ್ಡಿ,
ಯುವ ಬ್ರಿಗೇಡ್ ಸಂಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.