ಓದುಗರನ್ನು ಯೋಚನೆಗೆ ಹಚ್ಚುವ ಸಾಹಿತ್ಯ ರಚನೆ ಆಗಲಿ
ಕೆ. ಗಿರಿಜಾ ಅವರ 'ತತ್ರಾಣಿ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಅಭಿಮತ
Team Udayavani, Aug 26, 2019, 4:08 PM IST
ರಾಯಚೂರು: ನಗರದ ಕನ್ನಡ ಭವನದಲ್ಲಿ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಲಾಯಿತು.
ರಾಯಚೂರು: ಬರಹದಲ್ಲಿನ ಸೂಕ್ಷ್ಮತೆ ಓದುಗರನ್ನು ಸೆಳೆಯಬೇಕು. ಯೋಚನೆಗೆ ಹಚ್ಚುವ ಸಾಹಿತ್ಯ ರಚಿಸುವತ್ತ ಯುವ ಬರಹರಾರರು ಮುಂದಾಗಬೇಕು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ನಡೆದ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬರಹ ಓದಿದಾಗ ಅದು ಅಧಿಕೃತ, ಪ್ರಾಮಾಣಿಕತೆಯಿಂದ ಕೂಡಿದೆ ಎನಿಸಬೇಕು. ಅಂಥ ಕೃತಿಗಳಿಗೆ ಮಾತ್ರ ಮಹತ್ವ ಜಾಸ್ತಿ. ಜಾತಿ, ಧರ್ಮ, ಗುಂಪು, ಪ್ರದೇಶ ಮೀರಿ ಯೋಚಿಸುವ ಬರಹಗಾರನಿಂದ ಮಾತ್ರ ಉತ್ತಮ ಕೃತಿಗಳ ನಿರೀಕ್ಷೆ ಸಾಧ್ಯ ಎಂದರು.
ಯುವ ಬರಹಗಾರರು ತಮಗರಿವಿಲ್ಲದೆಯೇ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದರಿಂದ ಮುಕ್ತಗೊಳ್ಳುವ ದಾರಿ ಕಂಡುಕೊಳ್ಳದ ವಿನಃ ಬರವಣಿಗೆ ಅಸಾಧ್ಯ. ಒಳನೋಟಗಳನ್ನು ನೀಡುವ ಸಾಹಿತಿ ಪರಿಪೂರ್ಣ ಬರಹಗಾರನಾಗಬಲ್ಲ. ಸಾಮಾಜಿಕ, ರಾಜಕೀಯ ಧಾರ್ಮಿಕದಂಥ ಸೂಕ್ಷ ್ಮ ತೆಗಳು ಬರಹದಲ್ಲಿ ದಾಖಲಾಗುತ್ತವೆ. ಲೇಖಕರಿಗೆ ಒಳ್ಳೆಯ ಕಾಲದ ಕಲ್ಪನೆ ಇರಬೇಕು. ಕೃತಿಗಳಲ್ಲಿ ಅದು ಕಂಡು ಬರಬೇಕು. ಭಯದಿಂದ ಕೂಡಿದ ಬರವಣಿಗೆಯಿಂದ ಸಮಾಜಕ್ಕೆ ಸಂದೇಶ ನೀಡಲು ಸಾಧ್ಯವಿಲ್ಲ. ದಿಟ್ಟತನ ತೋರಿ ಬರೆದಿದ್ದಕ್ಕೆ ಇಂದಿಗೂ ನಾವು ವಚನಗಳನ್ನು ಅಧ್ಯಯನ ಮಾಡುತ್ತೇವೆ ಎಂದರು.
ನೆಲದ ವಾಸ್ತವಗಳಿಗೆ, ಬಿಕ್ಕಟ್ಟುಗಳಿಗೆ ಸ್ಪಂದಿಸಿ ಬರೆಯುವ ಕೃತಿಗಳು ಸಾಹಿತ್ಯ ವಲಯದಲ್ಲಿ ದಾಖಲಾಗಲೇಬೇಕು. ಗ್ರಾಮೀಣ ಬದುಕಿನ ಮುಖಗಳ ಅನಾವರಣ, ಜಾಗತೀಕರಣ ಹೇಗೆ ವಿರೋಧಿಸಬೇಕು ಎಂಬುದನ್ನು ಬರಹಗಾರ ದಾಖಲಿಸಬೇಕು. ಎಡಪಂಥೀಯ ಹೋರಾಟಕ್ಕೆ ನೆಲೆ ನೀಡಿದ ಜಿಲ್ಲೆ ರಾಯಚೂರು. ಶೋಷಿತರ ಪರ ಧ್ವನಿಯಾಗಿ ಅನೇಕ ಕೃತಿಗಳು ಹೊರಬಂದಿದ್ದು, ತತ್ರಾಣಿ ಕೃತಿಯೂ ಜಾತಿ, ಧರ್ಮ, ಮೌಡ್ಯತೆಯ ವಿರುದ್ಧ ಮಾನವೀಯ ಗುಣಗಳನ್ನು ಪ್ರಸ್ತುತ ಪಡಿಸಿದೆ ಎಂದರು.
ಸಾಹಿತಿ ಪವನಕುಮಾರ್ ಗುಂಡೂರಾವ್ ಕೃತಿ ಪರಿಚಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಕೆ.ಗಿರಿಜಾ ರಾಜಶೇಖರ, ಸಾಹಿತಿ ದಸ್ತಗೀರಸಾಬ್ ದಿನ್ನಿ, ಭೀಮಣ್ಣ ಇಟಗಿ, ಉರುಕುಂದಪ್ಪ ನಾಯಕ ಇತರರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಜೆ.ಎಲ್. ಈರಣ್ಣ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.