ಸಂಪುಟದಿಂದ ನಾಡಗೌಡ ಕೈಬಿಡಿ
ಜಿಲ್ಲಾದ್ಯಂತ ಸಿಪಿಐ (ಎಂಎಲ್) ಕಾರ್ಯಕರ್ತರ ಪ್ರತಿಭಟನೆ •ಸಚಿವರ ಕಾರ್ಮಿಕ-ಜನವಿರೋಧಿ ಧೋರಣೆಗೆ ಖಂಡನೆ
Team Udayavani, Jul 3, 2019, 2:49 PM IST
ರಾಯಚೂರು: ಸಿಪಿಐ (ಎಂ.ಎಲ್) ತಾಲೂಕು ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಯಚೂರು: ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಹಾಗೂ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಬಹುದಿನಗಳ ಹೋರಾಟವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಸಿಪಿಐ(ಎಂಎಲ್) ಪಕ್ಷದ ಕಾರ್ಯಕರ್ತರು ಮಂಗಳವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ತಾಲೂಕು ಘಟಕದ ಸದಸ್ಯರು, ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಜನರ ಪರ ಕಾರ್ಯ ನಿರ್ವಹಿಸಬೇಕಿರುವ ಸಚಿವರು ಜನವಿರೋಧಿ ಧೋರಣೆ ತಾಳಿದ್ದಾರೆ. ಕಳೆದ 14 ತಿಂಗಳಿಂದ ವೇತನವಿಲ್ಲದೇ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಜೀವನ ದೂಡುವುದೇ ಕಷ್ಟವಾಗುತ್ತಿದೆ. ಸುಮಾರು 410 ವೈಟಿಪಿಎಸ್‌ನ ಹೊರಗುತ್ತಿಗೆ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದ್ದು, ಆ ಕುಟುಂಬಗಳು ಅತಂತ್ರಕ್ಕೆ ಸಿಲುಕಿವೆ. ತಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂಗೆ ಮನವಿ ಮಾಡಲು ಹೋದರೆ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.
ಇದು ಇಂದು ನಿನ್ನೆಯ ಹೋರಾಟವಲ್ಲ. ಅನೇಕ ತಿಂಗಳುಗಳಿಂದ ನಿರಂತವಾಗಿ ನಡೆದುಕೊಂಡು ಬಂದಿದೆ. ನಮ್ಮ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಆದರೆ, ಸರ್ಕಾರದ ಪ್ರತಿನಿಧಿಯಾಗಿ ನಮ್ಮ ಪರ ಮಾತನಾಡಬೇಕಿದ್ದ ಅವರೇ ಈ ರೀತಿ ಕಾರ್ಮಿಕರ ಧ್ವನಿ ಅಡಗಿಸಲು ಪ್ರೇರಣೆ ನೀಡಿರುವುದು ಅಕ್ಷಮ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಖುದ್ದು ಮುಖ್ಯಮಂತ್ರಿಗಳೇ ಜಿಲ್ಲೆಗೆ ಭೇಟಿ ನೀಡಿದಾಗ ನಮ್ಮ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಅವಕಾಶವಿತ್ತು. ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಲ್ಲಿ ಸಮಸ್ಯೆಯೇ ಉಲ್ಬಣವಾಗುತ್ತಿರಲಿಲ್ಲ. ಆದರೆ. ಸಚಿವರು ಆ ವೇಳೆ ನಮ್ಮನ್ನು ದೂರವಿಡುವ ಮೂಲಕ ಕಾರ್ಮಿಕರ ಹೋರಾಟಕ್ಕೆ ಪ್ರಚೋದನೆ ನೀಡಿದಂತಾಯಿತು. ಕೂಡಲೇ ಸಚಿವ ನಾಡಗೌಡರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಕಾರ್ಮಿಕರ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಪ್ರಕರಣವನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಕಾರ್ಯದರ್ಶಿ ರವಿ ದಾದಾಸ್, ಸದಸ್ಯರಾದ ಜಿ.ಅಡವಿರಾವ್, ನೂರ್ ಪಾಷಾ, ಬಸವರಾಜ ಯಾದವ್, ಕರಿಮುಲ್ಲಾ, ನಲ್ಲಾರೆಡ್ಡಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.