ಸಮಾಜಕ್ಕೆ ಬೆಳಕು ನೀಡಿದವರೇ ಸಾಧಕರು
ಕಷ್ಟದಲ್ಲೇ ಸುಖ ಕಂಡ ಪಂಡಿತ ತಾರಾನಾಥರು: ಡಾ| ಕರ್ಜಗಿ •ತಾರಾನಾಥ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಸಮಾರಂಭ
Team Udayavani, Jun 13, 2019, 11:05 AM IST
ರಾಯಚೂರು: ನಗರದ ಹಮ್‌ದದ್‌ರ್ ಶಾಲಾ ಆವರಣದಲ್ಲಿ ನಡೆದ ತಾರಾನಾಥ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಸಮಾರಂಭದಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಮಾತನಾಡಿದರು.
ರಾಯಚೂರು: ತಾವು ಬಡತನ ಎದುರಿಸತ್ತಾ ಕಷ್ಟದಲ್ಲಿದ್ದರೂ ಸಮಾಜಕ್ಕೆ ಬೆಳಕು ನೀಡಬಲ್ಲವರೇ ಸಾಧಕರಾಗುತ್ತಾರೆ. ಅಂಥ ಕಷ್ಟಗಳಲ್ಲೇ ಅವರು ತಮ್ಮ ಸುಖ ಕಾಣುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಪಂಡಿತ ತಾರಾನಾಥರು ಎಂದು ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ ಡಾ| ಗುರುರಾಜ ಕರ್ಜಗಿ ಹೇಳಿದರು.
ನಗರದ ಹಮ್‌ದದ್‌ರ್ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಹಮ್‌ದದ್‌ರ್ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಧಕರಿಗೆ ಬಡತನ, ಕಷ್ಟಗಳು ಮುಖ್ಯವಾಗುವುದೇ ಇಲ್ಲ. ತಾರಾನಾಥ ಕೂಡ ತಮ್ಮ ಕಷ್ಟದ ಬದುಕಿನಲ್ಲೂ ಅಂದು ನೆಟ್ಟ ಸಸಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕಷ್ಟ-ಸುಖ ಯಾವಾಗಲೂ ಕ್ಷಣಿಕ. ಆದರೆ, ವ್ಯಕ್ತಿತ್ವ ಸಂಪಾದಿಸಿದರೆ ಅದು ಯಾವಾಗಲೂ ಪ್ರಖರವಾಗಿ ಬೆಳೆಯುತ್ತಲೇ ಸಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆಯೇ ತಾರಾನಾಥರು ಎಂದರು.
ನಿಜಾಮರ ಕಾಲದಲ್ಲಿ ಸ್ವತಂತ್ರವಾಗಿ ಬಾಳುವುದೇ ಕಷ್ಟವಾಗಿತ್ತು. ಅಂಥ ಕಾಲದಲ್ಲಿ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ ತಾರಾನಾಥರು ನಿಜಕ್ಕೂ ಮೇರುಚಿಂತಕ. ಯಾವುದೇ ಅಪೇಕ್ಷೆಗಳಿಲ್ಲದೇ ಇಂಥ ಶಿಕ್ಷಣ ಸಂಸ್ಥೆಯನ್ನು ಒಂದು ನೂರು ವರ್ಷಗಳ ಹಿಂದೆ ಸ್ಥಾಪಿಸಿರುವ ಅವರ ದೂರದೃಷ್ಟಿ ಅಮೋಘವಾದದ್ದು ಎಂದರು.
ವಿಜಯಪುರ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ನಿರ್ಭಯಾನಂದ ಸರಸ್ವತಿ ಮಾತನಾಡಿ, ಇತಿಹಾಸದಲ್ಲಿ ತಾರಾನಾಥರಂಥ ಸಕಲ ಕಲೆಗಳನ್ನು ಹೊಂದಿದ ವ್ಯಕ್ತಿಗಳು ಸಿಗುವುದು ಅಪರೂಪ. ಅವರು ಮನಸು ಮಾಡಿದ್ದರೆ ಈ ಭಾಗದಲ್ಲಿ ಆಸ್ಪತ್ರೆ, ಅನ್ನಛತ್ರ ತೆರೆಯಬಹುದಿತ್ತು. ಆದರೆ, ಅನ್ನದಾನ ಒಂದೊತ್ತಿನ ನೆಮ್ಮದಿ ನೀಡಿದರೆ ವಿದ್ಯಾದಾನ ಜೀವನಕ್ಕೊಂದು ದಾರಿ ನೀಡುತ್ತದೆ. ಇದನ್ನು ಅವರು ಅಂದೇ ಅರಿತು ಈ ಸಂಸ್ಥೆ ಹುಟ್ಟು ಹಾಕಿದ್ದಾರೆ ಎಂದರು.
ಕೊಠಡಿಯೊಳಗೆ ಕಲಿಯುವ ಶಿಕ್ಷಣಕ್ಕಿಂತ ಹೊರಗೆ ಕಲಿಯುವುದು ಮುಖ್ಯ. ವಿದ್ಯಾರ್ಥಿಗಳಿಗೆ ಗುರಿಯೂ ಮುಖ್ಯ. ಈ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಮಕ್ಕಳು ಕೇವಲ ಪಠ್ಯವನ್ನಷ್ಟೇ ಅಲ್ಲದೇ ಜೀವನದ ಮೌಲ್ಯಗಳನ್ನು ಕಲಿಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಇಂದು ಶಿಕ್ಷಣ ಸುಖದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಆದರೆ, ಯಾವ ಶಿಕ್ಷಣ ಕಠಿಣವಾಗಿರುವುದೋ ಅದಕ್ಕೆ ಮೌಲ್ಯ ಹೆಚ್ಚು. ಇಂದು ಎಸಿ ತರಗತಿಗಳಲ್ಲಿ ಅತ್ಯುತ್ತಮ ಪೀಠೊಪಕರಗಣಗಳ ಮಧ್ಯೆ ಶಿಕ್ಷಣ ಕಲಿಸುವ ಪದ್ಧತಿ ಹೆಚ್ಚು. ಸಮಾಜದ ಕೆಳ ಹಂತದವರಿಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂಬ ಉದ್ದೇಶದಿಂದ ತಾರಾನಾಥರು ಶುರು ಮಾಡಿದ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ಇದು ಹೀಗೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಸ್ಕಿ ನಾಗರಾಜ, ಆಡಳಿತ ಮಂಡಳಿ ಸದಸ್ಯ ಅಂಬಾಪತಿ ಪಾಟೀಲ ಇದ್ದರು.
ಸಮಾರಂಭಕ್ಕೂ ಮುನ್ನ ಬೆಳಗ್ಗೆ ಪುರುಷ ಹಾಗೂ ಮಹಿಳೆಯರ ಮ್ಯಾರಾಥಾನ್ ಸ್ಪರ್ಧೆ ನಡೆಯಿತು. ಬಳಿಕ ಶಾಲಾ ಆವರಣದಲ್ಲಿ ಸ್ಥಾಪಿಸಿದ ಪಂ| ತಾರಾನಾಥರ ಪುತ್ಥಳಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು.
ಮಾಜಿ ಸಿಎಂ ಸಿದ್ದು ಬಗ್ಗೆ ಸುಖಾಣಿ ಬೇಸರ: ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡುವಾಗ, ನಮ್ಮ ಸಂಸ್ಥೆ ಸಾಕಷ್ಟು ಹಳೆಯದಾಗಿದ್ದು, ಕಡಿಮೆ ದರದಲ್ಲಿ ಶಿಕ್ಷಣ ನೀಡುತ್ತಿದೆ. ಹಿಂದೆ ಸಿಎಂ ಆಗಿದ್ದ ಸಿದ್ಧರಾಮಯ್ಯ ಅವರ ಬಳಿ ಸಂಸ್ಥೆ ಅಭಿವೃದ್ಧಿಗಾಗಿ ಒಂದೆರಡು ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ಅವರು ಕೊನೆಗೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿಗೂ ಮನವಿ ಮಾಡಿದ್ದಾಗಿ ತಿಳಿಸಿದರು.
ಗೈರಾದ ಕೊಪ್ಪಳ ಗವಿಶ್ರೀ: ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರನ್ನಾಗಿ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳನ್ನು ಆಹ್ವಾನಿಸಲಾಗಿತ್ತು. ಅವರು ಬರುತ್ತಾರೆ ಎಂದೇ ಸಾಕಷ್ಟು ಜನ ನಿರೀಕ್ಷೆ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಶ್ರೀಗಳು ಗೈರಾಗಿದ್ದು ಜನರಿಗೆ ಬೇಸರ ಮೂಡಿಸಿತು.
ಸಮಯ ತಿಂದ ಸನ್ಮಾನ: ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಸನ್ಮಾನ ಸಮಾರಂಭವೇ ನಡೆದಿದ್ದರಿಂದ ನೆರೆದ ಜನರ ತಾಳ್ಮೆ ಪರೀಕ್ಷಿಸುವಂತಾಗಿತ್ತು. ಹಳೇ ವಿದ್ಯಾರ್ಥಿಗಳು, ಬೋಧಕರು, ನಿವೃತ್ತ ನೌಕರರು, ಅವರ ಸಂಬಂಧಿಗಳು, ದೇಣಿಗೆದಾರರು ಹೀಗೆ ಸನ್ಮಾನಿತರ ಪಟ್ಟಿ ದೊಡ್ಡದಾಗಿತ್ತು. ಮಧ್ಯಾಹ್ನ ಒಂದೂವರೆಯಾದರೂ ಸನ್ಮಾನ ಮುಗಿಯದ ಕಾರಣ ಜನ ಊಟಕ್ಕೆ ಎದ್ದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಖ್ಯ ಗಣ್ಯರ ಭಾಷಣಕ್ಕೆ ಜನರ ಕೊರತೆ ಕಂಡು ಬಂತು. ಇನ್ನು ಊಟಕ್ಕೂ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾಯುವಂತಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಗೇಟ್ ಮುಂದೆ ಕಾದು ನಿಂತಿದ್ದರೆ, ಹಂತ ಹಂತವಾಗಿ ಒಳಗೆ ಬಿಡಲಾಗುತ್ತಿತ್ತು. ಇದರಿಂದ ಅಲ್ಲಿಯೂ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.