ಕಾರ್ಗಿಲ್ ವೀರಯೋಧರಿಗೆ ಸಲಾಂ
ಎಲ್ಲೆಡೆ ಕಾರ್ಗಿಲ್ ವಿಜಯೋತ್ಸವ ಸಂಭ್ರಮ •ಕಾರ್ಗಿಲ್ ಓಟ-ನಿವೃತ್ತ ಸೈನಿಕರಿಗೆ ಸನ್ಮಾನ
Team Udayavani, Jul 27, 2019, 10:51 AM IST
ರಾಯಚೂರು: ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆಯಲ್ಲಿ ಬಸವಶ್ರೀ ಶಾಲೆಯಿಂದ ಹಮ್ಮಿಕೊಂಡ ಕಾರ್ಗಿಲ್ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಚಾಲನೆ ನೀಡಿದರು.
ರಾಯಚೂರು: ಕಾರ್ಗಿಲ್ 20ನೇ ವಿಜಯೋತ್ಸವ ನಿಮಿತ್ತ ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ವೀರಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಎಲ್ಲೆಡೆ ವಿಜಯೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆದರೆ, ಕೆಲವೆಡೆ ನಿವೃತ್ತ ಸೈನಿಕರಿಗೆ ಸನ್ಮಾನ, ಮಕ್ಕಳಿಂದ ಕಾರ್ಗಿಲ್ ಓಟ ಸ್ಪರ್ಧೆಗಳು ನಡೆದವು.
ನಗರದಲ್ಲೂ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಹಾಗೂ ವಿಜಯೋತ್ಸವ ಹಿನ್ನೆಲೆಯಲ್ಲಿ ಬಸವ ಶ್ರೀ ಶಾಲೆಯಿಂದ ಕಾರ್ಗಿಲ್ ಓಟ ನಡೆಸಲಾಯಿತು.
ಓಟಕ್ಕೆ ಚಾಲನೆ ನೀಡಿ ಮಾತನಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಟಿ. ವೇದಮೂರ್ತಿ, ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಮಹಾ ಸಂಘರ್ಷ ಎಂದೇ ಬಣ್ಣಿಸಲಾಗುತ್ತದೆ. ಕಾಶ್ಮೀರದ ಕಾರ್ಗಿಲ್ ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರಲ್ಲಿ ಮೇ ತಿಂಗಳಿಂದ ಜುಲೈವರೆಗೆ ಈ ಯುದ್ಧ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಆಗ ದೇಶದ ಅನೇಕ ಸೈನಿಕರು ವೀರಮರಣವನ್ನಪ್ಪಿದರೆ, ಶತ್ರು ದೇಶಗಳ ಸೈನಿಕರ ಅನೇಕ ತಲೆಗಳನ್ನು ಉರುಳಿಸಿದ್ದರು. ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಉಗ್ರರ ವೇಷದಲ್ಲಿ ನುಸುಳಿದ್ದೇ ಯುದ್ಧಕ್ಕೆ ಕಾರಣವಾಯಿತು ಎಂದು ಹೇಳಿದರು.
ನಮ್ಮ ದೇಶದ ಸೈನಿಕರು ಮೈ ಕೊರೆಯುವ ಚಳಿಯಲ್ಲಿ ಅತ್ಯಂತ ಎತ್ತರದ ಬೆಟ್ಟಗಳ ಮೇಲೆ ಪಾಕಿಸ್ತಾನದ ವಿರುದ್ಧ ಹೋರಾಡಿ ಕೊನೆಗೂ ಜಯಮಾಲೆ ಧರಿಸಿದರು. ಕಾರ್ಗಿಲ್ ಮೇಲೆ ತಿರಂಗ ಧ್ವಜ ಹಾರಿಸುವ ಮೂಲಕ ಅದನ್ನು ನಮ್ಮ ಸ್ವತ್ತಾಗಿಸಿಕೊಳ್ಳಲಾಯಿತು. ಆ ದಿನದ ಸ್ಮರಣಾರ್ಥವಾಗಿ ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಆ ಆಪರೇಷನ್ ವಿಜಯಕ್ಕೆ ಇಂದಿಗೆ 20 ವರ್ಷ ತುಂಬಿದೆ. ನಮ್ಮೆಲ್ಲರ ರಕ್ಷಣೆಗಾಗಿ ಪ್ರಾಣ ತೆತ್ತ ಆ ಯೋಧರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಯುವ ಸಮಾಜಕ್ಕೆ ನಮ್ಮ ಸೈನ್ಯದ ಶೌರ್ಯ, ಇತಿಹಾಸದ ಬಗ್ಗೆ ತಿಳಿಸಲು ನೆರವಾಗಲಿದೆ ಎಂದು ಹೇಳಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಂದರ ಸಿಂಗ್ ಮಾತಾನಾಡಿ, ಮಾಜಿ ಸೈನಿಕರನ್ನು ಕರೆದು ಮಕ್ಕಳಿಗೆ ಪರಿಚಯಿಸಿ ಅವರೊಂದಿಗೆ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ನೀಡಿ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಡಾ|ಎಂ.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಂಸ್ಥೆಯಿಂದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಬಳಿಕ ನಗರದ ಗಾಂಧಿ ವೃತ್ತದಿಂದ ಕಾರ್ಗಿಲ್ ಓಟ ಪ್ರಾರಂಭಿಸಲಾಯಿತು. ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಖುದ್ದು ಎಸ್‌ಪಿ ಡಾ|ವೇದಮೂರ್ತಿ ಕೂಡ ಓಟದಲ್ಲಿ ಪಾಲ್ಗೊಂಡರು. ಜಿಲ್ಲಾ ಕ್ರಿಡಾಂಗಣದವರೆಗೆ ಓಟ ನಡೆಸಲಾಯಿತು.
ಮಾಜಿ ಸೈನಿಕರಾದ ತೇಲಂಗಿ ಶೇಖರಪ್ಪ, ಮನೋಹರ ಸಿಂಗ್, ಕಿಶನ್ ಪ್ರಸಾದ, ಕೆ.ಎಸ್.ರಾವ್, ಶೇಖರಯ್ಯಸ್ವಾಮಿ ಕೃಷ್ಣಕುಮಾರ ಪಾಲ್ಗೊಂಡಿದ್ದರು. ಶಾಲಾ ಸಂಸ್ಥಾಪಕಿ ಲಲಿತಾ ಎಂ., ಶಿಕ್ಷಕರಾದ ರಾವುತ ರಾವು ಬರೂರ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.