ಮುಂಗಾರು ಉತ್ಸವಕ್ಕೆ ಸರ್ಕಾರದಿಂದ ನೆರವು
ಸಚಿವ ವೆಂಕಟರಾವ್ ನಾಡಗೌಡ ಭರವಸೆ • 2.5 ಟನ್ ಭಾರದ ಕಲ್ಲು ಎಳೆದು ಗಮನ ಸೆಳೆದ ಎತ್ತುಗಳು • ಮುಂಗಾರು ಹಬ್ಬಕ್ಕೆ ತೆರೆ
Team Udayavani, Jun 19, 2019, 10:46 AM IST
ರಾಯಚೂರು: ನಗರದ ಎಪಿಎಂಸಿಯಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೂರನೇ ದಿನದ ಭಾರ ಎಳೆಯುವ ಸ್ಪರ್ಧೆಗೆ ಸಚಿವ ವೆಂಕಟರಾವ್ ನಾಡಗೌಡ ಮಂಗಳವಾರ ಚಾಲನೆ ನೀಡಿದರು.
ರಾಯಚೂರು: ಈ ಭಾಗದಲ್ಲೇ ಪ್ರಸಿದ್ಧಿ ಪಡೆಯುವ ಮೂಲಕ ವಿಶೇಷ ಆಚರಣೆಯಾಗಿ ಗುರುತಿಸಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸರ್ಕಾರದಿಂದ ಅನುದಾನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.
ನಗರದ ಎಪಿಎಂಸಿಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮುನ್ನೂರು ಕಾಪು ಸಮಾಜದಿಂದ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ಹಬ್ಬದ ಮೂರನೇ ದಿನ 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದಿಂದ ಇಂತಿಷ್ಟು ಅನುದಾನ ಮೀಸಲಿಡುವಂತೆ ಸಿಎಂಗೆ ಮನವಿ ಮಾಡಿ ಮುಂದಿನ ವರ್ಷದಿಂದ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು. ಇದೊಂದು ಉತ್ತಮ ಆಚರಣೆಯಾಗಿದ್ದು, ಮುನ್ನೂರು ಕಾಪು ಸಮಾಜದ ಸತತ 19 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಇಂಥ ಕಾರ್ಯಕ್ರಮಗಳಿಗೆ ಹಿಂದಿನ ಸರ್ಕಾರಗಳು ಆರ್ಥಿಕ ಸಹಾಯ ಮಾಡಬೇಕಿತ್ತು. ಇದೇ ಜೂ.26ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆಂದು ಜಿಲ್ಲೆಗೆ ಬರುತ್ತಿದ್ದಾರೆ. ಆಗ ಕಾಪು ಸಮಾಜದ ಮುಖಂಡರ ನಿಯೋಗ ಬಂದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಒತ್ತಾಯ ಮಾಡಲಾಗುವುದು ಎಂದರು.
ಈ ಹಬ್ಬ ಒಂದು ಸಮುದಾಯ, ಜಾತಿ ಧರ್ಮಕ್ಕೆ ಸೀಮಿತಗೊಂಡಿಲ್ಲ. ಎಲ್ಲರನ್ನು ಒಳಗೊಂಡ ವಿಶೇಷ ಆಚರಣೆಯಾಗಿದೆ. ನೆರೆ ಹೊರೆಯ ರಾಜ್ಯದ ರೈತರು ಕೂಡ ತಮ್ಮ ಎತ್ತುಗಳನ್ನು ಕರೆತಂದು ಪಾಲ್ಗೊಳ್ಳುತ್ತಿರುವುದು ವಿಶೇಷ. ಆ ನಿಟ್ಟಿನಲ್ಲಿ ಇದು ಎಲ್ಲರನ್ನು ಬೆಸೆಯುವ ಹಬ್ಬ ಎಂದರೆ ತಪ್ಪಲ್ಲ ಎಂದರು.
ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಷ್ಟೇ ಕಷ್ಟಗಳಿದ್ದರೂ ರೈತರ ಹಬ್ಬಗಳನ್ನು ನಿಲ್ಲಿಸಬಾರದು. ಇದು ದೇಶಿ ಸಂಸ್ಕೃತಿ ಬಿಂಬಿಸುವ ಆಚರಣೆಯಾಗಿದ್ದು, ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಚಿಕ್ಕಸುಗೂರು ಚೌಕಿಮಠದ ಡಾ| ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಕೈವಾರ ಮಠದ ಧರ್ಮಾಧಿಕಾರಿ ಡಾ| ಎಂ.ಆರ್.ಜಯರಾಂ, ನಾರಾಯಣಪೇಟೆ ಶಾಸಕ ಎಸ್.ಆರ್.ರೆಡ್ಡಿ ಮಾತನಾಡಿದರು.
ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಸಮಾಜದ ಜಿಲ್ಲಾಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ಎಂ.ವಿರೂಪಾಕ್ಷಿ, ಮಹಾಂತೇಶ ಪಾಟೀಲ, ಕೇಶವರೆಡ್ಡಿ, ಈ. ಆಂಜನೇಯ, ಚಾಮರಸ ಮಾಲಿಪಾಟೀಲ, ಶಿವಶಂಕರ, ಲಕ್ಷ ್ಮಣಗೌಡ ಕಡಗಂದೊಡ್ಡಿ, ಯು.ದೊಡ್ಡಮಲ್ಲೇಶ, ಶ್ರೀನಿವಾಸ ರೆಡ್ಡಿ ಸೇರಿ ಸಮಾಜದ ಮುಖಂಡರು, ಹಿರಿಯರು, ನಾನಾ ಪ್ರದೇಶಗಳಿಂದ ಆಗಮಿಸಿದ್ದ ಸಾವಿರಾರು ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.