ಟ್ಯಾಕ್ಸಿ ಚಾಲಕನ ಮಗಳಿಗೆ ಚಿನ್ನದ ಮಾಲೆ

•ಶ್ರೀಪ್ರಿಯಾಂಕಾ-ಚನ್ನಬಸವ-ಚಂದ್ರಕುಮಾರಗೆ 4 ಚಿನ್ನದ ಪದಕ •ಕೃಷಿ ವಿವಿ 9ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Team Udayavani, Jun 29, 2019, 11:37 AM IST

29-June-10

ರಾಯಚೂರು: ಬಿಟೆಕ್‌ನಲ್ಲಿ ನಾಲ್ಕು ಚಿನ್ನದ ಪದಕ, ಎರಡು ನಗದು ಬಹುಮಾನ ಪಡೆದ ವಿದ್ಯಾರ್ಥಿನಿ ಶ್ರೀಪ್ರಿಯಾಂಕಾ ಎಸ್‌.ನಲ್ಲ ಹೆತ್ತವರೊಂದಿಗೆ.

ರಾಯಚೂರು: ಸಾಧಿಸುವ ಛಲವಿದ್ದರೇ ಏನನ್ನಾದರೂ ಸಾಧಿಸಿ ತೋರಬಹುದು ಎನ್ನಲಿಕ್ಕೆ ಉತ್ತಮ ನಿದರ್ಶನ ಈ ವಿದ್ಯಾರ್ಥಿನಿ. ಬಡತನದ ಹಿನ್ನೆಲೆಯಿಂದ ಬಂದರೂ ನಾಲ್ಕು ಚಿನ್ನದ ಪಡೆಯುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಈಚೆಗೆ ನಡೆದ 9ನೇ ಘಟಿಕೋತ್ಸವದಲ್ಲಿ ಅಗ್ರಿಕಲ್ಚರ್‌ ಇಂಜಿನಿಯರಿಂಗ್‌ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶ್ರೀಪ್ರಿಯಾಂಕಾ ಎಸ್‌. ನಲ್ಲ ಗಮನ ಸೆಳೆದರು. ಬಿಟೆಕ್‌ ಅಗ್ರಿ ಇಂಜಿನಿಯರಿಂಗ್‌ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಕ್ಕೆ ಈ ಪದಕಗಳು ಲಭಿಸಿದರೆ, ಹೆಚ್ಚು ಗರಿಷ್ಠ ಅಂಕ ಪಡೆದಿದ್ದಕ್ಕೆ ಎರಡು ನಗದು ಬಹುಮಾನ ಕೂಡ ಪಡೆದರು. ಘಟಿಕೋತ್ಸವದಲ್ಲಿ ಕೃಷಿ ವಿವಿ ಕುಲಾಧಿಪತಿ ಹಾಗೂ ಕೃಷಿ ಖಾತೆ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಪದವಿ ಪ್ರದಾನ ಮಾಡಿದರು.

ತಂದೆ ಶ್ರೀನಿವಾಸ ಗಂಗಾವತಿ ಶ್ರೀರಾಮನಗರದಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದು, ತಾಯಿ ಜಾನ್ಸಿ ಗೃಹಿಣಿಯಾಗಿದ್ದಾರೆ. ತನ್ನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಶ್ರೀಪ್ರಿಯಾಂಕಾ, ಸತತ ಅಧ್ಯಯನ, ಕಠಿಣ ಪರಿಶ್ರಮವೇ ನನ್ನ ಈ ಸಾಧನೆಗೆ ಕಾರಣ. ಮುಂದೆ ಕೃಷಿಯಲ್ಲಿ ನೈಸರ್ಗಿಕ ಮತ್ತು ರೈತಸ್ನೇಹಿ ತಳಿಗಳ ಆವಿಷ್ಕಾರ ಕುರಿತು ಸಂಶೋಧನೆ ನಡೆಸಿ, ಕೃಷಿ ಸಂಶೋಧನಾ ವಿಜ್ಞಾನಿ ಆಗುವ ಹೆಬ್ಬಯಕೆ ಹೊಂದಿದ್ದೇನೆ. ನನ್ನ ಈ ಸಾಧನೆಗೆ ಪೋಷಕರ ಶ್ರಮ ಮತ್ತು ಸಹಕಾರವೇ ಕಾರಣವಾಗಿದ್ದು, ಅವರಿಗೆ ನಾನು ಆಭಾರಿ ಎನ್ನುವುದನ್ನು ಅವರು ಮರೆಯಲಿಲ್ಲ. ಪಾಲಕರು ಕೂಡ ಮಗಳ ಸಾಧನೆ, ಅಧ್ಯಯನದಲ್ಲಿನ ಬದ್ಧತೆ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸಿದರು.

ಇನ್ನೂ ರಾಯಚೂರು ಅಗ್ರಿಕಲ್ಚರಲ್ ಕಾಲೇಜಿನ ಬಿಎಸ್‌ಸಿ ಅಗ್ರಿ ಪದವಿ ವಿದ್ಯಾರ್ಥಿ ಚನ್ನಬಸವ ಕೂಡ ನಾಲ್ಕು ಚಿನ್ನದ ಪದಕ ಪಡೆದು ಗಮನ ಸೆಳೆದರು. ಕೊಪ್ಪಳ ಜಿಲ್ಲೆ ಕೊಡದಾಳ ಮೂಲದ ಅವರ ತಂದೆ ಸಂಗಪ್ಪ ವಟಪರ್ವಿ ಶಿಕ್ಷಕರಾಗಿದ್ದಾರೆ. ತಾಯಿ ಉಮಾಮಹೇಶ್ವರಿ ಗೃಹಿಣಿಯಾಗಿದ್ದಾರೆ. ಹೆತ್ತವರ ಸೂಚನೆಯಂತೆ ಕಷ್ಟಪಟ್ಟು ಓದಿದ್ದಕ್ಕೆ ಚಿನ್ನದ ಪದಕ ಲಭಿಸಿದೆ. ಇದು ಸಾಕಷ್ಟು ಖುಷಿ ಕೊಟ್ಟಿದೆ. ಆಹಾರ ಉತ್ಪಾದನೆ ಮತ್ತು ಕೃಷಿಯಲ್ಲಿ ಉತ್ತಮ ತಳಿಗಳ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಇಂಗಿತ ವ್ಯಕ್ತಪಡಿಸುತ್ತಾರೆ ಚನ್ನಬಸವ. ದೇಶದ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ಉತ್ಪಾದನೆ ಹೆಚ್ಚಾಗಬೇಕಿದೆ. ಆ ದಿಸೆಯಲ್ಲಿ ಸಂಶೋಧನೆ ನಡೆಸುವವಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

10

Puttur: ರಸ್ತೆಯಲ್ಲಿ ಕಾರ್ಮಿಕನ ಮೃತದೇಹ; ಮೂವರ ಮೇಲೆ ಪ್ರಕರಣ ದಾಖಲು; ಓರ್ವ ವಶಕ್ಕೆ

SUBHODH

Bantwala: ಕೆದಿಲ: ಸಿಡಿಲಿಗೆ ಮೃತಪಟ್ಟ ಬಾಲಕನಿಗೆ ಕಣ್ಣೀರ ವಿದಾಯ

1-karkala

Karkala: ನಕ್ಸಲ್ ನಾಯಕ ವಿಕ್ರಂ ಗೌಡ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.