ರಾಯಚೂರು ಕೃಷಿ ವಿವಿ ಕ್ಯಾಂಪಸ್‌ನಲ್ಲಿ ಸೈಕಲ್‌ ಸವಾರಿ

Team Udayavani, Nov 9, 2019, 10:45 AM IST

9-November-2

●ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು:
ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿ ರುವ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಈಗ ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ನೀಡುತ್ತಿದೆ. ಕ್ಯಾಂಪಸ್‌ ಒಳಗೆ ವಾಹನಗಳ ಓಡಾಟಕ್ಕೆ ಬ್ರೇಕ್‌ ಹಾಕಿ ಸೈಕಲ್‌ ಬಳಸಲು ಸಜ್ಜಾಗಿದೆ.

ಕೆಲ ದಿನಗಳ ಹಿಂದೆ ಹಸಿರು ಪದವೀಧಾರಣೆ ಕಾರ್ಯಕ್ರಮ ಜಾರಿಗೊಳಿಸಿ ಪ್ರತಿ ವಿದ್ಯಾರ್ಥಿಗೆ ಒಂದು ಗಿಡ ಬೆಳೆಸುವ ಹೊಣೆ ನೀಡಲಾಗಿತ್ತು. ಈಗ ಕ್ಯಾಂಪಸ್‌ ಒಳಗೆ ಪರಿಸರ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕುಲಪತಿ ಡಾ| ಕೆ.ಎನ್‌.ಕಟ್ಟಿಮನಿ ಸೈಕಲ್‌ಗ‌ಳ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಸೈಕಲ್‌ ಪಡೆಯಬಹುದು. ಇದರಿಂದ ಆಡಳಿತ ಭವನ, ಕಾಲೇಜ್‌, ಬ್ಯಾಂಕ್‌, ಪ್ರಯೋಗಾಲಯ, ದೂರದಲ್ಲಿರುವ ವಿವಿಯ ಹೊಲಗಳಿಗೆ ಭೇಟಿಗೆ ತೆರಳಬಹುದು. ಇದರಿಂದ ಮಾಲಿನ್ಯ ನಿಯಂತ್ರಣದ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಎನ್ನುವುದು ಸಿಬ್ಬಂದಿ ವಿವರಣೆ.

ಆರಂಭದಲ್ಲಿ ಪ್ರಯೋಗಾತ್ಮಕವಾಗಿ 10 ಸೈಕಲ್‌ ಖರೀದಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಗ್ಗೆಯಿಂದ ಸಂಜೆವರೆಗೂ ಸೈಕಲ್‌ ಗಳು ಬ್ಯುಸಿಯಾಗುತ್ತಿವೆ. ಅಲ್ಲದೇ, ಒಬ್ಬರಾಗುತ್ತಿದ್ದಂತೆ ಒಬ್ಬರು ಸೈಕಲ್‌ ತೆಗೆದುಕೊಂಡು ಹೋಗಲು ಕಾಯುತ್ತಿದ್ದಾರೆ. ಇದರಿಂದ ಶೀಘ್ರವೇ 30 ಸೈಕಲ್‌ ಖರೀದಿಗೆ ಚಿಂತನೆ ನಡೆಸಲಾಗಿದೆ. ಎಲ್ಲ ವಿಭಾಗಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಪ್ರತ್ಯೇಕ ಸೈಕಲ್‌ ನೀಡುವ ಉದ್ದೇಶ ಇದೆ ಎನ್ನುತ್ತಾರೆ ಕುಲಪತಿ ಡಾ|ಕಟ್ಟಿಮನಿ. ಅಲ್ಲದೇ ನಿತ್ಯ ಬೆಳಗ್ಗೆ ಹಾಗೂ ಸಂಜೆ ವಿವಿ ವಾಯು ವಿಹಾರಕ್ಕೆ ಬರುವ ನೂರಾರು ಜನ ಬೈಕ್‌ ಗಳನ್ನು ತರುತ್ತಿದ್ದು, ಅವರಿಗೂ ಈ ಯೋಜನೆ ಪ್ರೇರಣೆಯಾಗುತ್ತಿದೆ.

ದೊಡ್ಡ ಮೈದಾನ: ಸುಮಾರು 700 ಎಕರೆ ಪ್ರದೇಶದಲ್ಲಿ ರಾಯಚೂರು ಕೃಷಿ ವಿವಿ ಸ್ಥಾಪನೆಗೊಂಡಿದೆ. ಒಂದು ತುದಿಯಿಂದ ಮತ್ತೂಂದು ತುದಿಗೆ ತೆರಳಬೇಕಾದರೆ ವಾಹನಗಳನ್ನೇ ಬಳಸಲಾಗುತ್ತಿದೆ. ಆಡಳಿತಾತ್ಮಕ ಪ್ರದೇಶವೇ ಏನಿಲ್ಲವೆಂದರೂ 250-300 ಎಕರೆ ಪ್ರದೇಶವಿದೆ.

ಇನ್ನು ಉಳಿದೆಲ್ಲ ಪ್ರದೇಶಗಳಲ್ಲಿ ವಿವಿಯಿಂದ ಸಂಶೋಧನಾ ತಳಿಗಳನ್ನು ಬೆಳೆಯಲಾಗುತ್ತಿದೆ. ಹೀಗೆ ನಾನಾ ಕೆಲಸಗಳಿಗೆ ನಿತ್ಯ ಒಂದೆರಡು ಬಾರಿ ಓಡಾಟ ಇದ್ದೇ ಇರುತ್ತದೆ. ಇದನ್ನು ಮನಗಂಡ ಆಡಳಿತ ಮಂಡಳಿ ಇಂಥ ಪ್ರಯೋಗಕ್ಕೆ ಮುಂದಾಗಿದೆ. ಕೃಷಿ ವಿವಿ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.