ದಯಾಮರಣಕ್ಕೆ ಜೋಗಿದೊಡ್ಡಿ ರೈತನ ಮನವಿ

ಜಮೀನಿನ ರಸ್ತೆ ಮುಚ್ಚಿರುವ ನೆರೆ ಹೊರೆಯವರು ರಸ್ತೆ ಬಿಡಿಸಿಕೊಳ್ಳಲು ಇಲಾಖೆಯಿಂದ ಇಲಾಖೆಗೆ ಅಲೆದಾಟ

Team Udayavani, Nov 27, 2019, 4:21 PM IST

27-November-22

ರಾಮನಗರ: ತನ್ನ ಜಮೀನಿ ರಸ್ತೆಯನ್ನು ಕೆಲವರು ಬೇಕಂತಲೇ ಮುಚ್ಚಿರುವುದರಿಂದ ಸಾಲ ಮಾಡಿ ನಿರ್ಮಿಸಿರುವ ಕೋಳಿ ಫಾರಂ ನಡೆಸಲು ಆಗದೆ, ಜಮೀನು ಅಭಿವೃದ್ಧಿ ಮಾಡಲಾಗದೆ, ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದು, ರಸ್ತೆ ಬಿಡಿಸಿ ಕೊಡಿ ಅಥವಾ ದಯಾಮರಣ ಕರುಣಿಸಿ ಎಂದು ಜೋಗಿದೊಡ್ಡಿ ನಿವಾಸಿ ರೈತ ಜಗದೀಶ್‌ ಜಿಲ್ಲಾಡಳಿತಕ್ಕೆ ಪ್ರಾರ್ಥಿಸಿಕೊಂಡಿದ್ದಾರೆ.

ತಾಲೂಕಿನ ಕೂಟಗಲ್‌ ಹೋಬಳಿ, ಇಬ್ಬಳಕಳ್ಳಿ ಗ್ರಾಮದ ಸರ್ವೆ ಸಂಖ್ಯೆ 8ರಲ್ಲಿರುವ 2 ಎಕರೆ ಜಮೀನು ತನಗೆ 1991ರಲ್ಲಿ ಸರ್ಕಾರದಿಂದ ತಮ್ಮ ತಂದೆ ತಿಬ್ಬಯ್ಯ ಅವರಿಗೆ ಮಂಜೂರಾಗಿದೆ. ಅಂದಿನಿಂದಲೂ ನಾವು ವ್ಯವಸಾಯ ಮಾಡಿಕೊಂಡು ಬಂದಿದ್ದು, 2016ನೇ ಸಾಲಿನಲ್ಲಿ ಪಿಎಲ್‌ಡಿ ಬ್ಯಾಂಕಿನಿಂದ 9.5 ಲಕ್ಷ ರೂ. ಸಾಲ ಪಡೆದು ಕೋಳಿ ಫಾರಂ ಸ್ಥಾಪಿಸಲು ಕಟ್ಟಡ ನಿರ್ಮಿಸಿದ್ದು, ನಮ್ಮ ಜಮೀನಿಗೆ ಹೋಗಲು ನಕಾಶೆಯಲ್ಲಿ ರಸ್ತೆಯಿತ್ತು. ಆದರೆ ತಮ್ಮ ಅಕ್ಕಪಕ್ಕದ ಜಮೀನುದಾರರು ತಮಗೆ ತೊಂದರೆ ಕೊಡುವ ಉದ್ದೇಶದಿಂದ ದಾರಿ ಮುಚ್ಚಿದ್ದಾರೆ ಎಂದು ದೂರಿದ್ದಾರೆ.

ದಾರಿ ಮುಚ್ಚಿದ್ದರಿಂದ ತಮ್ಮ ಜಮೀನಿಗೆ ಜಾನುವಾರುಗಳನ್ನು ಕರೆದೊಯ್ಯುವುದಾಗಲಿ, ಟ್ರಾಕ್ಟರ್‌ ಮುಂತಾದ ಮೋಟಾರು ವಾಹನಗಳ ಸಂಚಾರಕ್ಕಾಗಿ ಆಗುತ್ತಿಲ್ಲ. ಹೀಗಾಗಿ ಕೋಳಿ ಫಾರಂ ನಡೆಸಲು ಸಹ ಆಗದೆ ಅಂದಿನಿಂದ ಕಟ್ಟಡ ಪಾಳು ಬಿದ್ದಿವೆ. ಕೃಷಿ ಚಟುವಟಿಕೆಗಾಗಿ ಮಾಡಿದ್ದ ಕೃಷಿ ಹೊಂಡ ಕೂಡ ನೆನೆಗುದಿಗೆ ಬಿದ್ದಿದೆ. ಭೂಮಿ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಇವೆಲ್ಲದರ ನಡುವೆ ಸಾಲ ಮರುಪಾವತಿಗೆ ಪಿಎಲ್‌ಡಿ ಬ್ಯಾಂಕಿನಿಂದ ನೋಟಿಸ್‌ಗಳು ಬರುತ್ತಿವೆ. ಬದುಕು ಹೈರಾಣಾಗಿದೆ ಎಂದು ಅಲವತ್ತು ಕೊಂಡಿದ್ದಾರೆ.

ಮನವಿಗೆ ಸ್ಪಂದನೆ ಇಲ್ಲ: ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ತಾವು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಕಚೇರಿಗಳಿಗೆ ಮನವಿ ಸಲ್ಲಿಸಿರುವೆ. ಆದರೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ ಎಂದು ಡೀಸಿಯವರಿಗೆ ಬರೆದಿರುವ ಮನವಿಯಲ್ಲಿ ಹೇಳಿಕೊಂಡಿದ್ದಾರೆ. ನೊಂದು, ಬೆಂದು ಹೋಗಿರುವ ತಾವು 24.7.2019ರಂದು ಮುಖ್ಯಮಂತ್ರಿಗಳ ಕಚೇರಿಗೂ ಮನವಿ ಮಾಡಿದ್ದು, ಅಲ್ಲಿಂದಲೂ ನ್ಯಾಯ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮೂವರು ಜಿಲ್ಲಾಧಿಕಾರಿಗಳು, ಐವರು ಉಪವಿಭಾಗಾಧಿಕಾರಿಗಳು, ಆರು ಮಂದಿ ತಹಶೀಲ್ದಾರ್‌ಗಳು ಜತೆಗೆ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು ಸಮಸ್ಯೆ ಬಗೆ ಹರಿದಿಲ್ಲ ಎಂದು ತಿಳಿಸಿದ್ದಾರೆ.

ಬಡ್ಡಿ ಅಸಲು ಕಟ್ಟಲಾಗುತ್ತಿಲ್ಲ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್‌ ತಾವು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ. ಅಸಲನ್ನು ತೀರಿಸಲಾಗುತ್ತಿಲ್ಲ. ಕಾರಣ ತಮಗೆ ಆದಾಯ ಮೂಲವಾದ ಕೃಷಿ ಭೂಮಿಯೇ ನಿಷ್ಕ್ರಿಯವಾಗಿದೆ. ಅಸಲನ್ನು ತೀರಿಸದಿದ್ದರಿಂದ ಬ್ಯಾಂಕ್‌ನಿಂದ ಪದೇ ಪದೇ ನೋಟಿಸ್‌ ಜಾರಿಯಾಗಿದೆ. ಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯ ಎಂದು ಬ್ಯಾಂಕ್‌ ನವರು ಎಚ್ಚರಿಸಿದ್ದಾರೆ. ತಮಗೆ ದಾರಿ ಕಾಣದಾಗಿದೆ. ಅಧಿಕಾರಿಗಳು ತಮಗೆ ನ್ಯಾಯ ಕೊಡಿಸಿಕೊಡ ಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Sunita williams

Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?

highcourt

Shame; ಕಾರ್ಮಿಕರ ಮಕ್ಕಳ ಹಣ ಅನ್ಯ ಉದ್ದೇಶಕ್ಕೆ: ಹೈಕೋರ್ಟ್‌ ಕಿಡಿ

Exam

SSLC ಪರೀಕ್ಷೆ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ: ಅವಾಂತರ ಸೃಷ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?

1-www

JDS ನಾಯಕ ಸೆರೆ; ಕೋಟಿ ರೂ. ಪಡೆದು ಸ್ವಾಮೀಜಿಗೆ ವಂಚನೆ!

puttige

Udupi; ಗೀತಾರ್ಥ ಚಿಂತನೆ-49: ಕೊನೆಯಲ್ಲೂ ಧೃತರಾಷ್ಟ್ರನ ಲಾಭದ ದೃಷ್ಟಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Puttur: ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ದೂರು ದಾಖಲು

Puttur: ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ದೂರು ದಾಖಲು

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.