ಜಿಲ್ಲೆಯಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮ
660 ಮಕ್ಕಳಿಗೆ ಪ್ರತಿ ಶನಿವಾರ ಪೊಲೀಸ್ ಇಲಾಖೆಯಿಂದ ತರಬೇತಿ | ಇದೇ ತಿಂಗಳಿಂದ ಆರಂಭ
Team Udayavani, Jul 4, 2019, 4:26 PM IST
ರಾಮನಗರದಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋಡ್, ತರಬೇತಿ ವಿಭಾಗದ ಪೊಲೀಸ್ ಕಮಾಂಡೆಂಟ್ ಕುಲದೀಪ್ ಜೈನ್ ಹಾಜರಿದ್ದರು.
ರಾಮನಗರ: ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಗರಿಕ ಜವಾಬ್ದಾರಿ, ಕಾನೂನು ಪಾಲನೆ ಹಾಗೂ ನಾಯಕತ್ವದ ಗುಣವನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮ ಇದೇ ತಿಂಗಳಿಂದ ಜಿಲ್ಲೆಯಲ್ಲಿ ನಡೆಯಲಿದೆ.
ಜಿಲ್ಲೆಯ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ 15 ಶಾಲೆಗಳ 8ನೇ ತರಗತಿಯ ಒಟ್ಟು 660 ಮಕ್ಕಳನ್ನು ಗುರುತಿಸಿ ಪ್ರತಿ ಶನಿವಾರದಂದು ಪೊಲೀಸ್ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು.
ಈ ಸಂಬಂಧ ನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋಡ್, ತರಬೇತಿ ವಿಭಾಗದ ಪೊಲೀಸ್ ಕಮಾಂಡೆಂಟ್ ಕುಲದೀಪ್ ಜೈನ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ವಿದ್ಯಾರ್ಥಿ ಪೊಲೀಸ್ ಕೆಡೆಟ್ ಅಂದರೇನು?: ಪೊಲೀಸ್ ಕೆಡೆಟ್ ಕಾರ್ಯಕ್ರಮವು ವಿದ್ಯಾರ್ಥಿಗಳ ಭಾವನಾತ್ಮಕ, ದೈಹಿಕ, ಸಾಮಾಜಿಕ ಕೌಶಲ್ಯ ಮತ್ತು ಪರಿಸರದ ಅಂಶಗಳನ್ನು ಬಲಪಡಿಸುವುದು ಹಾಗೂ ಅವರಲ್ಲಿ ಉತ್ಸಾಹ, ವಿಶ್ವಾಸ, ಸ್ವಯಂ ಶಿಸ್ತು ಮತ್ತು ಹೊಣೆಗಾರಿಕೆ ಬೇರೂರುವಂತೆ ಮಾಡುವ ತರಬೇತಿಯಾಗಿದೆ.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರೇರೇಪಣೆ ಹಾಗೂ ಶಿಸ್ತನ್ನು ಹೆಚ್ಚಿಸುವುದು. ಶಾಲೆಯ ಆವರಣದಲ್ಲಿ ಮಾದಕ ದ್ರವ್ಯಗಳ ಬಳಕೆ ನಿರ್ಮೂಲನೆ ಮಾಡುವುದು. ಯುವ ಪೀಳಿಗೆಯನ್ನು ಮನಃಪೂರ್ವಕವಾಗಿ ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವುದು, ಕಾನೂನು ಅನುಸರಿಸುವುದು ಮತ್ತು ತನ್ಮೂಲಕ ಇತರರಿಗೂ ದಾರಿ ತೋರುವ ಗುಣ ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ಆವರಲ್ಲಿ ನಾಗರಿಕ ಅರಿವು, ಸಮಾಜದತ್ತ, ಪ್ರಜಾಪ್ರಭುತ್ವದತ್ತ ನಡವಳಿಕೆ ಮತ್ತು ನಿಸ್ವಾರ್ಥ ಸೇವೆಯ ಮನೋಭಾವನೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಅಪರಾಧಗಳ ತಡೆಗೆ ಸಹಕಾರಿ: ಒಳ್ಳೆಯ ಆರೋಗ್ಯ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಭಿವೃದ್ಧಿಗೆ ಅನುಕೂಲವಾಗುವಂತೆ ಕಠಿಣ ಕೆಲಸ ಮತ್ತು ವೈಯಕ್ತಿಕ ಸಾಧನೆಗಾಗಿ ಅವರ ಸಾಮರ್ಥ್ಯ ನಿರ್ಮಿಸುವುದು, ಪೊಲೀಸ್ ಮತ್ತು ಇತರ ಕಾನೂನು ಜಾರಿ ಪ್ರಾಧಿಕಾರಿಗಳಾದ ಅರಣ್ಯ, ಸಾರಿಗೆ ಮತ್ತು ಅಬಕಾರಿ ಇಲಾಖೆಗಳು ಅಪರಾಧವನ್ನು ತಡೆಗಟ್ಟುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು, ರಸ್ತೆಯ ಸುರಕ್ಷತೆಯನ್ನು ಉತ್ತೇಜಿಸುವುದು ಮತ್ತು ಅಂತರಿಕ ಭದ್ರತೆ ಮತ್ತು ಕೋಪ ನಿರ್ವಹಣೆಯನ್ನು ಸುಧಾರಿಸಲು ಈ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಂಡದ ಕೆಲಸ, ನವೀನ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಯಶಸ್ಸನ್ನು ಸಾಧಿಸಲು ಪ್ರೇರಣೆ ನೀಡುವುದು. ಯುವಜನರಲ್ಲಿನ ಶಕ್ತಿಯನ್ನು ಹೊರತರುವ ಕಾರ್ಯ ಈ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಮಾಡಲಿದೆ.
ಜಾತ್ಯಾತೀತ ದೃಷ್ಠಿಕೋನವನ್ನು ಅಭಿವೃದ್ಧಿಪಡಿಸಲು ಯುವಕರನ್ನು ಪ್ರೇರೇಪಿಸುವಂತೆ ಮಾಡುವುದು, ಇತರ ಮೂಲಭೂತ ಹಕ್ಕುಗಳ ಗೌರವ ಮತ್ತು ಭಾರತದ ಸಂವಿಧಾನದಲ್ಲಿ ಮತ್ತು ಮೂಲಭೂತ ಕರ್ತವ್ಯಗಳನ್ನು ಕೈಗೊಳ್ಳುವ ಇಚ್ಚೆ, ದೇಶ ಭಕ್ತಿಯ ಗುಣಗಳನ್ನು, ಮುಕ್ತ ಮನಸ್ಸು, ಉದಾರತೆ, ಸಾಮಾಜಿಕ ಅಂತರ್ಗತತೆ ಬೆಳೆಸುವ ಕಾರ್ಯವಾಗಲಿದೆ.
ವಿದ್ಯಾರ್ಥಿಗಳ ಆಯ್ಕೆಗೆ ಡೀಸಿ ಸೂಚನೆ: ವಿದ್ಯಾರ್ಥಿ ಪೊಲೀಸ್ ಕೆಡೆಟ್ ಬಗ್ಗೆ ತರಬೇತಿ ವಿಭಾಗದ ಪೊಲೀಸ್ ಕಮಾಂಡೆಂಟ್ ಕುಲದೀಪ್ ಜೈನ್ ವಿವರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ವಿದ್ಯಾರ್ಥಿಗಳಿಗೆ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಉದ್ದೇಶಗಳು ಭಾರತದ ರಾಷ್ಟ್ರೀಯ ಯುವ ನೀತಿಯ ಗುರಿಗಳೊಂದಿಗೆ ಸಮನ್ವಯವಾಗಿದೆ. ಇದು ರಾಷ್ಟ್ರ ನಿರ್ಮಾಣದ ಶ್ರೇಷ್ಟ ಕೆಲಸದಲ್ಲಿ ತೊಡಗಿಕೊಳ್ಳುವ ಯುವಕರನ್ನು ಅನುಸರಿಸುತ್ತದೆ ಎಂದರು.
ಆಯ್ದ 15 ಶಾಲೆಗಳಲ್ಲಿ 44 ಬಾಲಕ, ಬಾಲಕಿಯರನ್ನು ಅಯ್ಕೆ ಮಾಡುವಂತೆ ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟರು. ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಿದೆ ಎಂದರು. ಕರ್ನಾಟಕ ಸೇರಿದಂತೆ ಕೇರಳ, ಗುಜರಾತ್, ಹರಿಯಾಣ ಹಾಗೂ ರಾಜಸ್ಥಾನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.