ರಾಮನಗರದಲ್ಲಿ 16 ಹಾಸಿಗೆ ಐಸಿಯು
Team Udayavani, May 12, 2020, 11:03 AM IST
ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ಹಾಗೂ ಇತರೆ ರೋಗಗಳ ಚಿಕಿತ್ಸೆಗೆ ಜಿಲ್ಲಾ ಕೇಂದ್ರದಲ್ಲಿ 16 ಹಾಸಿಗೆ ಐಸಿಯು ಘಟಕದ ವ್ಯವಸ್ಥೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಾಗಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿ, ಐಸಿಯುಗಳನ್ನು ಎಲ್ಲ ತಾಲೂಕು ಗಳಿಗೂ ವಿಸ್ತರಿಸುವ ಉದ್ದೇಶ ಪ್ರಕಟಿಸಿದರು.
ಕೋವಿಡ್-19 ವೈರಸ್ ಸೋಂಕು ಹಿನ್ನೆಲೆ ಯಲ್ಲಿ ಜಿಲ್ಲಾ ಮಟ್ಟದ ಕೋವಿಡ್ ವಾರ್ ರೂಂಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಗಳ ಬಗ್ಗೆ ಮಾಹಿತಿ ಪಡೆದು ಡಿಜಿಟಲೈಸ್ ಮಾಡಿ, ವಾರ್ ರೂಂ ಸಿದಟಛಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲೇ ರಾಮನಗರ ಜಿಲ್ಲೆ ಮೊದಲು: ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮೂರು ಲಕ್ಷಕ್ಕೂ ಹೆಚ್ಚಿನ ಕುಟುಂಬ ಗಳನ್ನು ಭೇಟಿಯಾಗಿ, ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿಯ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. 60 ವರ್ಷ ಮೇಲ್ಪಟ್ಟವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಶ್ವಾಸಕೋಶ ಹೃದ್ರೋಗ ಇರುವವರ ಮಾಹಿತಿ ಪಡೆದು ಡಿಜಿಟಲೈಸ್ ಮಾಡಲಾ ಗಿದೆ. ಡಿಜಿಟಲೈಸ್ ಮಾಡಿರುವುದಲ್ಲಿ ಇಡೀ ದೇಶದಲ್ಲೇ ರಾಮನಗರ ಮೊದಲ ಜಿಲ್ಲೆಯಾಗಿದೆ ಎಂದು ಅಧಿಕಾರಿಗಳ ಶ್ರಮ ಪ್ರಶಂಸಿದರು.
ಸೂಪರ್ ಹೀರೊ ಆ್ಯಪ್‌ನಲ್ಲಿ ಕಮ್ಯಾಂಡ್ ಸೆಂಟರ್ ಮೂಲಕ ಮಾಹಿತಿ ನೀಡಿದ ತಕ್ಷಣ ಆಂಬ್ಯುಲೆನ್ಸ್‌ಗಳನ್ನು ಅವಶ್ಯಕತೆ ಇರುವ ಕಡೆ ಬಳಸಲಾಗುವುದು ಎಂದರು. ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ, ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಡೀಸಿ ಎಂ.ಎಸ್. ಅರ್ಚನಾ, ಜಿಪಂ ಸಿಇಒ ಇಕ್ರಂ, ಎಸ್‌ಪಿ ಅನೂಪ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.