ಜಿಲ್ಲೆಯಲ್ಲಿ 2 ಲಕ್ಷ ವಾಹನ ನೋಂದಣಿ
Team Udayavani, Sep 14, 2019, 2:02 PM IST
ರಾಮನಗರ ಜಿಲ್ಲೆಯ ಆರ್.ಟಿ.ಒ ಕಚೇರಿ.
ರಾಮನಗರ: ಜಿಲ್ಲೆಯಲ್ಲಿ 2 ಲಕ್ಷ 9 ಸಾವಿರದ 338 ನೋಂದಣಿಯಾದ ವಾಹನಗಳಿಗೆ (ಸಾರಿಗೆ ಮತ್ತು ಸಾರಿಗೇಯತರ) ಇರೋದು ಕೇವಲ 5 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು. ಪರಿಷ್ಕೃತ ವಾಹನ ಸಂಚಾರ ನಿಯಮಗಳು ಜಾರಿಯಾದ ನಂತರ ಹೆಲ್ಮೆಟ್ ಖರೀದಿ, ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಹಿವಾಟು ಹೆಚ್ಚಳವಾಗಿದೆ.
1.57 ಲಕ್ಷ ದ್ವಿಚಕ್ರ ವಾಹನಗಳ ನೋಂದಣಿ: ಸಾರಿಗೆ ಇಲಾಖೆ ವಾಹನಗಳನ್ನು ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳು ಎಂದು ವರ್ಗೀಕರಿಸಿಕೊಂಡಿದೆ. ಬೈಕ್, ಸ್ಕೂಟರ್, ಕಾರು, ಜೀಪು, ಟ್ರ್ಯಾಕ್ಟರ್, ಓಮ್ನಿ ಬಸ್ಸುಗಳು ಸಾರಿಗೆಯೇತರ ವರ್ಗದಲ್ಲಿವೆ. ಬಸ್, ಲಾರಿ, ಮಲ್ಟಿ ಆಕ್ಷಲ್ ವಾಹನಗಳು, ಸರಕು ಸಾಗಾಣೆ ವಾಹನಗಳು, ಶಾಲಾ ಬಸ್‌ಗಳು, ಟ್ಯಾಕ್ನಿಸ, ಆಟೋ ರಿಕ್ಷಾಗಳು ಹೀಗೆ ಜನ ಮತ್ತು ಸರಕು ಸಾಗಿಸುವ ವಾಹನಗಳನ್ನು ಸಾರಿಗೆ ವಾಹನಗಳು ಎಂದು ವರ್ಗೀಕರಿಸಿಕೊಂಡಿದೆ.
ಜಿಲ್ಲೆಯ ಸಾರಿಗೆಯೇತರ ವಾಹನಗಳ ಸಂಖ್ಯೆಯೇ ಹೆಚ್ಚು. 1 ಲಕ್ಷ 83 ಸಾವಿರದ 818 ಸಾರಿಗೆಯೇತರ ವಾಹನಗಳ ನೋಂದಣಿ ಆಗಿವೆ. 25520 ಸಾರಿಗೆ ವಾಹನಗಳು ನೋಂದಾವಣೆ ಆಗಿವೆ. 2019ರ ಆಗಸ್ಟ್ ಅಂತ್ಯಕ್ಕೆ 1,57,900 ದ್ವಿಚಕ್ರ ವಾಹನಗಳು, 14,691 ಕಾರುಗಳು, 40 ಜೀಪುಗಳು, 183 ಓಮ್ನಿ ಬಸ್ಸುಗಳು, 5775 ಟ್ರ್ಯಾಕ್ಟರ್‌ಗಳು, 4825 ಟ್ರಯಲರ್‌ಗಳು, ಜೆಸಿಬಿ ಮುಂತಾದ 404 ವಾಹನಗಳು ಒಟ್ಟು 1,83,818 ಸಾರಿಗೆಯೇತರ ವಾಹನಗಳು ನೋಂದಾಯಿಸಿ ಕೊಂಡಿವೆ.
375 ಶಾಲಾ ವಾಹನ, 7721 ಆಟೋ ನೋಂದಣಿ: 1173 ಮಲ್ಟಿ ಆಕ್ಷಲ್ ವಾಹನಗಳು, 3897 ಟ್ರಕ್ಕುಗಳು, ಸರಕು ಸಾಗಾಣೆ ಮಾಡುವ ನಾಲ್ಕು ಚಕ್ರಗಳುಳ್ಳ 2494 ವಾಹನಗಳು, ಸರಕು ಸಾಗಿಸುವ ಮೂರು ಚಕ್ರಗಳುಳ್ಳ 2042 ವಾಹನಗಳು ನೋಂದಣಿಯಾಗಿವೆ. ಬಸ್‌ಗಳ ವಿಭಾಗದಲ್ಲಿ 213 ಸ್ಟೇಜ್ ಕ್ಯಾರಿಯರ್‌ಗಳು, 84 ಕಾಂಟ್ರಾಕ್ಟ್ ಕ್ಯಾರಿಯೇಜ್‌ಗಳು, 835 ಖಾಸಗಿ ಸೇವಾ ವಾಹನಗಳು, 375 ಶಾಲಾ ವಾಹನಗಳು, ಟ್ಯಾಕ್ಸಿ ವಿಭಾಗದಲ್ಲಿ 2901 ಮೋಟಾರ್ ಕ್ಯಾಬ್‌ಗಳು, 666 ಮ್ಯಾಕ್ಷಿ ಕ್ಯಾಬ್‌ಗಳು ನೋಂದಣಿಯಾಗಿವೆ. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಜಿಲ್ಲೆಯಲ್ಲಿ 7721 ಆಟೋ ರಿಕ್ಷಾಗಳು (ತ್ರಿಚಕ್ರ ವಾಹನ) ನೋಂದಣಿಯಾಗಿವೆ. ಆದರೆ, ನಾಲ್ಕರಿಂದ ಆರು ಪ್ರಯಾಣಿಕರನ್ನು ಸಾಗಿಸುವ ವಾಹನಗಳು ನೋಂದಣಿಯೇ ಆಗಿಲ್ಲ. ಈ ವಿಭಾಗಗಳಿಗೆ ಸೇರದ 1248 ಇತರ ವಾಹನಗಳು ನೋಂದಣಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 25,520 ಸಾರಿಗೆ ವಾಹನಗಳು ನೋಂದಣಿಯಾಗಿವೆ.
ಒಟ್ಟು 8 ವಾಯು ಮಾಲಿನ್ಯ ತಪಾಸಣಾ ಕೇಂದ್ರ: ಜಿಲ್ಲೆಯಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳ ಸಂಖ್ಯೆ ಎಂಟು. ಈ ಪೈಕಿ 3 ಕೇಂದ್ರಗಳು (ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ) ಕಲ್ಯಾಣಿ ಮೋಟಾರ್ಗೆ ಸೇರಿದ್ದಾಗಿದೆ. ಅವು ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸುವ ಬಗ್ಗೆ ಖಾತರಿಯಾಗಿಲ್ಲ. ಹೀಗಾಗಿ ಕೇವಲ 5 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು (ಬಿಡದಿಯಲ್ಲಿ 1, ರಾಮನಗರದಲ್ಲಿ 3, ಕನಕಪುರದಲ್ಲಿ 1) ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಕೆಎಸ್‌ಆರ್‌ಟಿಸಿಗೆ ತನ್ನದೇ ಆದ ತಪಾಸಣಾ ಕೇಂದ್ರವಿದೆ.
ವಾಹನಗಳ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಗಣಕೀಕೃತವಾಗಿವೆ. ಕಾರ್ಬನ್ ಮೋನಾಕ್ಸೈಡ್ ಮುಂತಾದ ವಾಯು ಮಾಲಿನ್ಯಗೊಳಿಸುವ ಅಂಶಗಳನ್ನು ಗಣಕ ಯಂತ್ರಗಳು ದಾಖಲಿಸುತ್ತವೆ.
ಅಧಿಕಾರಿಗಳಿಂದ ಸಮಗ್ರ ತನಿಖೆ: ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ ವಾಯು ಮಾಲಿನ್ಯ ಕೇಂದ್ರಗಳ ಸಮಗ್ರ ತನಿಖೆ ಆಗಾಗ್ಗೆ ನಡೆಯುತ್ತಿದೆ. ಇಲಾಖೆ ನಿಗದಿಪಡಿಸಿರುವ ನಿಯಮಗಳ ಅನುಸಾರ ವಾಯು ಮಾಲಿನ್ಯ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ನಿಯಮಾನುಸಾರ ಅನುಜ್ಞಾ ಪತ್ರವನ್ನು ನವೀಕರಿಸಿಕೊಳ್ಳಬೇಕಾಗಿದೆ. ಗ್ಯಾಸ್ ಅನಿಲೇಸರ್ ಮತ್ತು ಸ್ಟೋಕ್ ಮೀಟರ್‌ಗಳನ್ನು ತಪಾಸಣೆಗೆ ಒಳಪಡಿಸುವುದಾಗಿ, ಕ್ಯಾಂಬ್ರೆಷನ್ ದೃಢೀಕರಣ ಪತ್ರದ ಅವಧಿ, ಸಿ.ಎ.ಎಂ.ಸಿ ಅವಧಿಯ ದೃಢೀಕರಣ ಪತ್ರ ಮುಂತಾದ ವಿಚಾರಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಪ್ರತಿ ವಾಹನ ತಪಾಸಿಸಿರುವ ಪರೀಕ್ಷಾ ಪತ್ರಗಳನ್ನು ಕೇಂದ್ರಗಳು ದಾಖಲೆ ಇಡಬೇಕಾಗಿದೆ. ವಾಹನಗಳ ಮಾಲಿನ್ಯ ತಪಾಸಣೆ ನಡೆಸುವ ಕಂಪ್ಯೂಟರ್‌ನ ಸಾಫ್ಟ್ವೇರ್ ಮುಂತಾದ ಸೂಕ್ಷ್ಮ ವಿಚಾರಗಳ ಬಗ್ಗೆಯೂ ತಪಾಸಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಮಾಲೀಕರು ಕಾನೂನು ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.
● ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.