ಮಹಿಳಾ ಒಕ್ಕೂಟದಿಂದ 25 ಸಾವಿರ ದೇಣಿಗೆ
Team Udayavani, May 11, 2020, 6:47 PM IST
ಸಾಂದರ್ಭಿಕ ಚಿತ್ರ
ಕನಕಪುರ: ಕೋವಿಡ್ ಸೋಂಕು ಪರಿಹಾರ ನಿಧಿಗೆ ತಾಲೂಕಿನ ಕನಕಾಂಬರಿ ಮಹಿಳಾ ಒಕ್ಕೂಟ 25 ಸಾವಿರ ರೂ. ಕೊಡುಗೆ ನೀಡಿದೆ. ಒಕ್ಕೂಟದ ಗೌರವ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ಎಚ್. ಕೆ.ಶ್ರೀಕಂಠ ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಅದರೊಟ್ಟಿಗೆ 10 ಸಾವಿರ ಮಾಸ್ಕ್ ಕೊಡುಗೆ ನೀಡಿದರು.
ಸುದ್ದಿಗಾರರೊಂದಿಗೆ ಎಚ್.ಕೆ. ಶ್ರೀಕಂಠು ಮಾತನಾಡಿ, ಮಹಿಳಾ ಒಕ್ಕೂ ಟದ ಕಾರ್ಯಕರ್ತರು ಮಾಸ್ಕ್ ತಯಾರಿಸುತ್ತಿದ್ಧಾರೆ. ಸಂಸ್ಥೆಯಲ್ಲಿಯೇ ಹೊಲಿಗೆ ತರಬೇತಿ ಪಡೆದಿದ್ದ ಸುಮಾರು 200 ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಮನೆಗಳಲ್ಲೇ ಮಾಸ್ಕ್ಗಳನ್ನು ಹೊಲಿಯುತ್ತಿದ್ದು, ಈವರೆಗೂ ಒಂದೂ ವರೆ ಲಕ್ಷ ಮಾಸ್ಕ್ ತಯಾರು ಮಾಡಿ ಕೊಟ್ಟಿದ್ದಾರೆ. ಕೋವಿಡ್ ಸೋಂಕು ಸಂದರ್ಭದಲ್ಲಿ ಗುಡಿ ಕೈಗಾರಿಕೆ ಪೋ›ತ್ಸಾಹಿಸುತ್ತಿರುವುದಾಗಿ ಅವರು ತಿಳಿಸಿದರು.
ಕೊರೊನಾ ಸೋಂಕು ತಡೆಗಟ್ಟಲು ಆರೋಗ್ಯ ನಾನಿಯಾಗಿ ಕೆಲಸ ಮಾಡುವವರು, ಪಂಚಾಯ್ತಿ ಸಿಬ್ಬಂದಿ, ಟಿಎಪಿಸಿ ಎಂಎಸ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮದುವೆ ಮಾಡುವವರು ಮುಂತಾದವರಿಗೆ ಇಲ್ಲಿವರೆಗೆ 50 ಸಾವಿರ ಮಾಸ್ಕ್ ಉಚಿತವಾಗಿ ವಿತರಿಸಲಾಗಿದೆ. 1 ಲಕ್ಷ ಮಾಸ್ಕ್ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ, ಅದರಿಂದ ಬಂದ ಹಣ ಮಾಸ್ಕ್ ತಯಾರು ಮಾಡಲು ಶ್ರಮಿಸಿದ ಸ್ವಯಂ ಉದ್ಯೋಗಿನಿಯರಿಗೆ ಕೊಟ್ಟಿರುವುದಾಗಿ ತಿಳಿಸಿದರು.
ಮಾಸ್ಕ್ ಅವಶ್ಯಕತೆ ಇದ್ದವರು ತಮಗೆ ಆರ್ಡ್‌ರ್ ಕೊಟ್ಟರು ಶೀಘ್ರದಲ್ಲಿ ಮಾಸ್ಕ್ ಹೊಲಿದು ರಿಯಾಯಿತಿ ದರದಲ್ಲಿ ಕೊಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.