3 DCM ಕುರಿತು ಸಚಿವ ಕೆ.ರಾಜಣ್ಣ ಅವರೇ ಉತ್ತರ ನೀಡಬೇಕು : ಡಿ.ಕೆ. ಸುರೇಶ್
ಹೆಬ್ಬಾಳ - ಚಾಮರಾಜನಗರ ರೈಲು ; ಭೂ ಸ್ವಾಧೀನ ಮಾಡಲು ಒತ್ತಾಯ ಮಾಡುತ್ತೇನೆ
Team Udayavani, Sep 15, 2023, 3:31 PM IST
ಚನ್ನಪಟ್ಟಣ: ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಮಾಡಬೇಕು ಎಂದು ಸಚಿವ ಕೆ.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ”ಈ ಬಗ್ಗೆ ಸಚಿವ ಕೆ. ರಾಜಣ್ಣ ಅವರೇ ಉತ್ತರ ನೀಡಬೇಕು.ಇದು ಅವರ ಹೇಳಿಕೆ. ನಾನು ಲೋಕಸಭಾ ಸದಸ್ಯ ಅಷ್ಟೇ. ಸರ್ಕಾರ ನಡೆಸುತ್ತಿರುವವರು ರಾಜಣ್ಣ.ಈಗಾಗಿ ಅವರೇ ಉತ್ತರ ಹೇಳಬೇಕು” ಎಂದು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಹೆಬ್ಬಾಳ – ಚಾಮರಾಜನಗರ ರೈಲು ಹಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಮಂತ್ರಿಗಳ ಬಳಿ ಮಾತನಾಡಿದ್ದೇನೆ.ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕು. ಭೂ ಸ್ವಾಧೀನ ವೆಚ್ಚ ಹೆಚ್ಚಾಗಿದೆ. 2ಸಾವಿರ ಕೋಟಿ ಹಣ ಭೂ ಸ್ವಾಧೀನಕ್ಕೆ (land acquisition) ಬೇಕಾಗಬಹುದು.ಇದರ ಅರ್ಧ ಹಣವನ್ನ ರಾಜ್ಯಸರ್ಕಾರ ಕಟ್ಟಬೇಕಾಗುತ್ತದೆ.ಮೊದಲು ಕೇಂದ್ರ ಸರ್ಕಾರ ರೈಲ್ವೆ ಯೋಜನೆ ಕೈಬಿಟ್ಟಿತ್ತು.ಕೇಂದ್ರಕ್ಕೆ ಒತ್ತಾಯ ಮಾಡಿ ಯೋಜನೆ ಅನುಷ್ಠಾನಕ್ಕೆ ಬಂದಿದೆ.ಭೂ ಸ್ವಾಧೀನ ಮಾಡಲು ನಾನು ಒತ್ತಾಯ ಮಾಡುತ್ತೇನೆ” ಎಂದರು.
”ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕೆಲ ಮುಖಂಡರು ಕಾಂಗ್ರೆಸ್ ಸೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸದಾಕಾಲವೂ ಹೆಚ್ಚು ಗಮನಹರಿಸುತ್ತದೆ.ನಮ್ಮ ಪಕ್ಷದ ಸಿದ್ದಾಂತ ನಂಬಿ ಬಂದವರಿಗೆ ಸ್ವಾಗತ ಮಾಡುತ್ತೇವೆ.ಚುನಾವಣೆ ಬರುತ್ತವೆ, ಹೋಗುತ್ತವೆ.ಆದರೆ ಬೂತ್ ಮಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಸಂಘಟನೆಗೆ ಹೊತ್ತು ನೀಡುತ್ತಾರೆ.ಈಗಾಗಿ ಪಕ್ಷ ಸಂಘಟನೆಗೆ ಜಾಸ್ತಿ ಮಾಡುತ್ತೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.