ಕೋವಿಡ್ ಚಿಕಿತ್ಸೆಗೆ 5.5 ಕೋಟಿ ಅನುದಾನ
Team Udayavani, May 23, 2021, 5:22 PM IST
ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಗಣಿ ಮತ್ತು ಭೂ ವಿಜ್ಞಾನಇಲಾಖೆಯಿಂದ 5.5 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನಖಾತೆ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದರು.ನಗರಕ್ಕೆ ಭೇಟಿ ನೀಡಿದ್ದ ಅವರು ಜಿಲ್ಲಾಧಿಕಾರಿ ಮತ್ತುಇತರ ಅಧಿಕಾರಿಗಳ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇಲಾಖೆ ಕೊಟ್ಟಿರುವ ಅನುದಾನದಲ್ಲಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿಮತ್ತು ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ ಬಳಕೆಯಾಗಬೇಕಾಗಿದೆ ಎಂದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದವಿಭಾಗ ಮಟ್ಟಕ್ಕೆ 2 ರಂತೆ 10 ಆಕ್ಸಿಜನ್ ಟಾ Õಂಕರ್‌ಗಳು, 10 ಆಕ್ಸಿಜನ್ ಜನರೇಟರ್‌ಗಳನ್ನು ಖರೀದಿಸಲುಕ್ರಮ ವಹಿಸಲಾಗಿದೆ. 1000 ಆಮ್ಲಜನಕ ಸಾಂದ್ರಕ ಖರೀದಿಸಲು ಯೋಚಿಸಲಾಗಿದ್ದು, ಈ ಪೈಕಿ ಈಗಾಗಲೆ 100 ಆಮ್ಲಜನಕ ಸಾಂದ್ರಕ ಖರೀದಿಸಲಾಗಿದೆ.
ಈ ಸಾಂದ್ರಕ ಗಳ ಕಾರ್ಯ, ಗುಣಮಟ್ಟ ಅರಿತುಉಳಿದ ಸಂಖ್ಯೆಯ ಸಾಂದ್ರಕಗಳನ್ನು ಖರೀದಿಸಲಾಗುವುದು. ಹೊಸದಾಗಿ ಆಕ್ಸಿಜನ್ ಜ® ರೇಟರ್ ಘಟಕಕ್ಕೆ ಬದಲು ಮೊಬೈಲ್ ಆಕ್ಸಿಜನ್ ಜನರೇಟರ್ ಖರೀದಿಗೆ ಚಿಂತನೆ ನಡೆಯುತ್ತಿದೆ. ಈ ಜ® ರೇಟರ್‌ಗಳಿಂದ 300ರಿಂದ 500 ಸಿಲಿಂಡರ್‌ಗಳನ್ನು ತುಂಬಿಸಬಹುದುಎಂದು ಮಾಹಿತಿ ನೀಡಿದರು.
ಕ್ರಷರ್‌ಗಳಿಗೆ ಡಿಜಿಎಂಎಸ್ ಪರವಾನಿಗೆ ಕಡ್ಡಾಯ:ರಾಮನಗರ ಜಿಲ್ಲೆಯಲ್ಲಿ 110ಬಿಲ್ಡಿಂಗ್ ಸ್ಟೋನ್‌ಕ್ರಷರ್‌ಗಳಿವೆ.53 ಜಲ್ಲಿ ಕ್ರಷರ್‌ಗಳಿವೆ.ಈಪೈಕಿ13ಕಷರ್‌ಗಳಿಗೆಡೈರಕ್ಟರ್ ಜನರಲ್ ಆಫ್ ಮೈನ್ ಸೇಫ್ಟಿಯವರಿಂದ(ಡಿಜಿಎಂಎಸ್) ಪರವಾನಗಿ ಹೊಂದಿದೆ. ಶಿವಮೊಗ್ಗಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯಿಂದ ಡಿಜಿಎಂಎಸ್ ಪರವಾನಗಿ ಕಡ್ಡಾಯಗೊಳಿಸಲಾಗಿದೆ ಎಂದರು. ಆದರೆ ರಾಜ್ಯದಲ್ಲಿ ಸದ್ಯ ಶೇ.5 ಗಣಿಗಾರಿಕೆ ನಡೆಸುವವರ ಬಳಿ ಮಾತ್ರ ಡಿಜಿಎಂಎಸ್ ಪರವಾನಗಿ ಇದೆ.ಉಳಿದ ಗಣಿಗಾರಿಕೆ ನಡೆಸುವವರು ಡಿಜಿಎಂಎಸ್ ಪರವಾನಗಿ ಪಡೆದುಕೊಳ್ಳಲು 90 ದಿನ ಕಲಾವಕಾಶ ನೀಡಿಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಬಹಳಷ್ಟು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಗಣಿಕಾರಿಕೆ ಸಂಬಂಧಿಸಿದಂತೆ ಯಾವುದೇ ಅನಾಹುತ ಸಂಭವಿಸಿದಂತೆಗಣಿ ಮಾಲೀಕರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದರು.
ನೂತನ ಮೈನಿಂಗ್ ಪಾಲಿಸಿ ಜಾರಿಗೆ ಚಿಂತನೆ: ರಾಜ್ಯದಲ್ಲಿ ನ್ಯೂ ಮೈನಿಂಗ್ ಪಾಲಿಸಿ ಜಾರಿಗೆ ತರಲುಚಿಂತಿಸಲಾಗುತ್ತಿದೆ. ಲಾಕ್‌ಡೌನ್ ತೆರವಾದ ನಂತರವಿಭಾಗೀಯವಾರು ಮೈನಿಂಗ್ ಅದಾಲತ್‌ಗಳನ್ನು ನಡೆಸಲಾಗುವುದು. ಈ ಅದಾಲತ್‌ಗಳಲ್ಲಿ ಗಣಿಗಾರಿಕೆಗೆಸಂಬಂಧಿಸಿದ ತೊಂದರೆ ಇದ್ದಲ್ಲಿ ಸ್ಥಳೀಯವಾಗಿನಿವಾರಿಸಬಹುದು. ಸಿಂಗಲ್ ವಿಂಡೋ ಸಿಸ್ಟಂ ಜಾರಿಗೆತಂದು ಗಣಿಗಾರಿಕೆಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆಇಲಾಖೆಗೆ ಹೋಗಿ ಎನ್‌ಒಸಿ ತರುವುದನ್ನು ತಪ್ಪಿಸಿಸಮಯ ಉಳಿತಾಯ ಮಾಡಬಹುದು ಎಂದು ಗಣಿಗಾರಿಕೆಗೆ ತಾವು ಉದ್ದೇಶಿಸಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.