ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕು
Team Udayavani, Aug 18, 2021, 3:15 PM IST
ಕನಕಪುರ: ಸೋಮವಾರ ಕಾರು ಸ್ಫೋಟಗೊಂಡ ಪ್ರಕರಣ ಸಂಬಂಧತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ನಿಯಮ ಉಲ್ಲಂ ಸಿಕಾರಿನಲ್ಲಿ ನ್ಪೋಟಕಗಳ ಸಾಗಾಟ ಎಲ್ಲಿಗೆ? ಪೂರೈಕೆ ಮಾಡಿದ್ದು ಯಾರು? ಎಂಬಿತ್ಯಾದಿ ವಿಚಾರಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಲೂಕಿನ ಮರಳೆ ಗವಿ ಮಠದ ಬಳಿ ಕಾರೊಂದು ಇದ್ದಕ್ಕಿದಂತೆಸ್ಫೋಟಗೊಂಡು ದೊಡ್ಡಾಲಹಳ್ಳಿ ಗ್ರಾಮದ ಮಹೇಶ್ ಎಂಬ ಚಾಲಕನ ದೇಹಛಿದ್ರಗೊಂಡಿತ್ತು. ಸ್ಫೋಟಕ್ಕೆ ಕಾರು ಸಂಪೂರ್ಣ ಭಸ್ಮವಾಗಿತು. ಸೋಮವಾರಸಂಜೆ ವೇಳೆ ಪೊಲೀಸ್ ಇಲಾಖೆ ಅಧಿಕಾರಿಗಳು, ತನಿಖಾ ತಂಡಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ತನಿಖೆ ಇನ್ನಷ್ಟು ವೇಗ ಪಡೆದುಕೊಂಡಿದೆ.
ಸಲಕರಣೆ ಮಾರುವವನ ಕಾರಿನಲ್ಲಿ ಸ್ಫೋಟಕ ಹೇಗೆ?: ಪೊಲೀಸರ ಮಾಹಿತಿಪ್ರಕಾರ ಮರಳೆ ಗವಿ ಮಠದ ಶಿವರುದ್ರಸ್ವಾಮಿಗಳ ಮಾಲೀಕತ್ವದ ಕ್ವಾರಿಗೆಮರಳೆ ಗವಿ ಮಠದ ಶಿವರುದ್ರ ಸ್ವಾಮಿಗಳು ಮೈಲ್ವಾನ್ ಮತ್ತು ಶಿವಶಂಕರ್‌ರೆಡ್ಡಿ ಎಂಬುವವರಿಗೆ ಗಣಿಗಾರಿಕೆ ಮಾಡಲು ಗುತ್ತಿಗೆಗೆ ನೀಡಿದ್ದರು.
ಇದೇಕ್ವಾರಿಗೆ ಮೃತ ವ್ಯಕ್ತಿ ಮಹೇಶ್ ಸೋಮವಾರ ಮಧ್ಯಹ್ನ ಸುಮಾರು 1ಗಂಟೆಯಲ್ಲಿ ಕಲ್ಲು ಗಣಿಗಾರಿಕೆಗೆ ಕೆಲವು ಸಲಕರಣಿಗಳನ್ನು ಕೊಟ್ಟು ಬಳಿಕಹಿಂದಿರುಗಿ ಬರುವಾಗ ದೂರವಾಣಿ ಕರೆ ಬಂದ ಹಿನ್ನೆಯಲ್ಲಿ ಮರಳೆ ಗವಿಮಠದ ಬಳಿ ಕಾರನ್ನು ನಿಲ್ಲಿಸಿ, ಸುಮಾರು2ಗಂಟೆಗಳ ಕಾಲ ಸಮಯಕಳೆದಿದ್ದಾನೆ. ಆ ನಂತರ ಕಾರು ಇ¨ಕ್ಕಿದ್ದ ಂತೆ ಸ್ಫೋಟಗೊಂಡಿದೆ. ಆದರೆ,ಮಹೇಶ ಗಣಿಗಾರಿಕೆಗೆ ಬೇಕಾದ ಸಲಕರಣಗೆಗಳನ್ನು ಮಾರಾಟ ಮಾಡುವ ವ್ಯಕ್ತಿಎಂಬುದು ಪ್ರಾಥಮಿಕ ತನಿಖೆಯ ಅಂಶ. ಆದರೆ, ಮಹೇಶ್ ಮತ್ಯಾವಕ್ವಾರಿಗೆಸ್ಫೋಟಗಳನ್ನು ಕೊಡಲುಕಾರಿನಲ್ಲಿ ಇಟ್ಟಿದ್ದ ಎಂಬುದು ಯಕ್ಷ ಪ್ರಶ್ನೆ?ಮೃತ ವ್ಯಕ್ತಿ ಮಹೇಶ್ ಕಳೆದ 10 ವರ್ಷದಿಂದ ಗಣಿಗಾರಿಕೆಗೆ ರಾಡ್ ಮತ್ತುಬಿಟ್ಸ್ ನಂತಹ ಸ್ಫೋಟಕವಲ್ಲದ ಸಲಕರಣಿಗಳನ್ನು ಪೂರೈಸುವ ಕೆಲಸಮಾಡುತ್ತಿದ್ದ. ಗಣಿಗಾರಿಕೆ ಸ್ಫೋಟಕಗಳನ್ನು ಪೂರೈಸಲು ತಾಲೂಕಿನಲ್ಲಿಯಾವುದೇ ವ್ಯಕ್ತಿ ಅನುಮತಿಪಡೆದಿಲ್ಲ. ಹಾಗಾದರೆ ಮೃತ ವ್ಯಕ್ತಿ ಮಹೇಶ್‌ನಿಗೆಸ್ಫೋಟಕಗಳನ್ನು ಕೊಟ್ಟವರು ಯಾರು ಎಂಬ ಪ್ರಶ್ನೆಗೆ ಉತ್ತರ ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಾಗಿದೆ.
ತಂದೆ-ಮಗನಿಗಾಗಿ ಶೋಧ: ನಿಯಮ ಉಲ್ಲಂ ಸಿ ಗಣಿಗಾರಿಕೆಸ್ಫೋಟಕಗಳನ್ನು ಪೂರೈಕೆಯಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆತಾಲೂಕಿನ ತುಂಗಣಿ ಗೇಟ್ ಬಳಿ ಇರುವ ರಾಮಣ್ಣ ಮತ್ತು ಆತನ ಮಗನಿಗೆಪೊಲೀಸರು ಹುvುಕ ಾಟ ಆರಂಭಿಸಿದ್ದಾರೆ. ಇವರಿಬ್ಬರು ಗಣಿಗಾರಿಕೆಗಳಿಗೆಸ್ಫೋಟಕಗಳನ್ನು ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ತುಂಗಣಿ ಗೇಟ್ ಬಳಿ ಇರುವ ರಾಮಣ್ಣ ಅವರಮನೆಯನ್ನು ಶೋಧ ಮಾಡಿದ್ದಾರೆ. ಆದರೆ, ಆರೋಪಿಗಳುತಲೆಮರೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಇವರಿಬ್ಬರು ಸ್ಫೋಟಕದಾಸ್ತಾನನ್ನು ಪಡುವಣಗೆರೆ ರಸ್ತೆಯಲ್ಲಿರುವ ಅವರ ತೋಟದ ಮನೆಯಲ್ಲಿಸಂಗ್ರಹ ಮಾಡುತ್ತಿದ್ದರು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.ಸೋÊುವಾ ರ ನಡೆದಿರುವ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧ ಇವರೆಸ್ಫೋಟಕಗಳನ್ನು ಪೂರೈಕೆ ಮಾಡಿರಬಹುದು ಎಂದು ಅನುಮಾನಗೊಂಡಿರುವಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲು: ಘಟನೆಯಲ್ಲಿ ಮೃತಪಟ್ಟಿರುವಮಹೇಶ್‌ನನ್ನೇ ಪ್ರಕರಣದ ಮುಖ್ಯ ಆರೋಪಿಯನ್ನಾಗಿ ಮಾಡಿ ಸಾತನೂÃುಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇಸ್ಥಳಿಯ ಗಣೀಗಾರಿಕೆಯ ಮ್ಯಾನೇಜರ್ ಮತ್ತು ಮರಳೆ ಗವಿ ಮಠದಶಿವರುದ್ರಸ್ವಾಮಿಗಳನ್ನು ವಿಚಾರಣೆ ನಡೆಸಿದ್ದಾರೆ. ಕಾರು ಸ್ಫೋಟಗೊಂಡ ಸ್ಥÙಕೆ Rಸೋಮವಾರವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮೂಲಪತ್ತೆಹಚ್ಚಲು ಸ್ಫೋಟದಿಂದ ಛಿದ್ರವಾಗಿದ್ದ ಕೆಲವು ಕಾರಿನ ಬಿಡಿಭಾಗಗಳನ್ನುಸಂಗ್ರಹ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಒಳಪಡಿಸಲು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರವರದಿ ಹಾಗೂ ಪೂರೆಸ್ಸಿಕ್ ಲ್ಯಾಬ್ ವÃದಿ ಬ ಂದ ನಂತರ ಪ್ರಕರಣಕRೆನಿಖರವಾದಕಾರಣತಿಳಿದು ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.