Kanakapura: ಕನಕಪುರ ಸರ್ಕಾರಿ ಬಸ್‌ನಲ್ಲಿ ಖಾಸಗಿ ವ್ಯಕ್ತಿ ಕಂಡಕ್ಟರ್!

Team Udayavani, Jan 16, 2025, 1:46 PM IST

Kanakapura: ಕನಕಪುರ ಸರ್ಕಾರಿ ಬಸ್‌ನಲ್ಲಿ ಖಾಸಗಿ ವ್ಯಕ್ತಿ ಕಂಡಕ್ಟರ್!

ಕನಕಪುರ: ಸಾರಿಗೆ ಬಸ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ವಾಹಕನಂತೆ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಬಸ್‌ ನಿರ್ವಾಹಕನನ್ನು ಸೇವೆಯಿಂದ ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾರಿಗೆ ಬಸ್‌ ನಿರ್ವಾಹಕ ನವೀನ್‌ ಅಮಾನತುಗೊಂಡವರು.

ಆಗಿದ್ದೇನು?: ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಕೋಡಿಹಳ್ಳಿ ಹುಣಸನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ ಕೋಡಿಹಳ್ಳಿಯಿಂದ ಕನಕಪುರಕ್ಕೆ ಸಂಚಾರ ಮಾಡುತ್ತಿತ್ತು. ಈ ವೇಳೆ, ಸಮ ವಸ್ತ್ರವಿಲ್ಲದ ಖಾಸಗಿ ವ್ಯಕ್ತಿಯೊಬ್ಬ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡು ತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಸಂಸ್ಥೆಯ ಅಧಿಕೃತ ಮೆಷಿನ್‌ನಿಂದ ಫ್ರೀ ಟಿಕೆಟ್‌ ಕೊಟ್ಟರು. ಆದರೆ, ಪುರುಷ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ಕೊಡಲು ನಿರಾಕರಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಅಲ್ಲದೇ, ಟಿಕೆಟ್‌ ಕೇಳಿದಾಗ, ಇರಲಿ ಪರವಾಗಿಲ್ಲ ಬಿಡಿ, ಇದೆಲ್ಲಾ ಮಾಮೂಲಿ ಎಂದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಓರ್ವ ಪ್ರಯಾಣಿಕ ಹಣ ಕೊಟ್ಟ ಮೇಲೆ ಟಿಕೆಟ್‌ ಕೊಡಬೇಕು. ಮುಂದೆ ಚೆಕ್ಕಿಂಗ್‌ ಬಂದರೆ ನಾವು ದಂಡ ಕಟ್ಟ ಬೇಕಾಗು ತ್ತದೆ. ನೀವು ಸಂಸ್ಥೆಯ ಸಮವಸ್ತ್ರ ಹಾಕಿಲ್ಲ. ಬಸ್‌ ನಿರ್ವಾಹಕರು ಯಾರು? ಎಂದು ಪ್ರಯಾಣಿಕರು ಖಾಸಗಿ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಖಾಸಗಿ ವ್ಯಕ್ತಿ. ನಿರ್ವಾಹಕ ನವೀನ್‌ ಅಲ್ಲಿ ಕುಳಿತಿದ್ದಾರೆ. ನಾನು ತರಬೇತಿ ಪಡೆಯುತ್ತಿದ್ದೇನೆ. ಇದೆಲ್ಲಾ ಮಾಮೂಲಿ, ಮಾಮೂಲಿ ಕೊಡುತ್ತೇವೆ, ಅದೆನ್ನೆಲ್ಲಾ ಹೇಳಬಾರದು ಎಂದು ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ಕೊಡದೆ ಹೋಗಿದ್ದಾನೆ. ಈ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ರಕರಣ ದಾಖಲು: ಈ ಬೆನ್ನಲ್ಲೇ ಸಾರಿಗೆ ಘಟಕದ ಅಧಿಕಾರಿಗಳು ಕೋಡಿಹಳ್ಳಿ ಪೊಲೀಸರೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ. ಖಾಸಗಿ ವ್ಯಕ್ತಿ ನಿರ್ವಾಹಕನ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಹಾಗೂ ಪುರುಷ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ಕೊಡಲು ನಿರಾಕರಿಸಿರುವ ಸಂಬಂಧ ಸಾರಿಗೆ ಬಸ್‌ ನಿರ್ವಾಹಕ ನವೀನ್‌ನನ್ನು ವಿಭಾಗೀಯ ಅಧಿಕಾರಿಗಳು ಅಮಾ ನತು ಮಾಡಿ ಕ್ರಮ ಕೈಗೊಂಡಿದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ನಿರ್ವಾಹಕ ನವೀನ್‌, ಖಾಸಗಿ ವ್ಯಕ್ತಿ ಎನ್ನಲಾದ ಕೆಬ್ಬಳ್ಳಿ ರೇವಂತ್‌ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾರಿಗೆ ಬಸ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬ ನಿರ್ವಾಹಕ ನಂತೆ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ನೀಡದ ಪ್ರಕರಣ ಸಂಬಂಧ ನಿರ್ವಾಹಕ ನವೀನ್‌ರನ್ನು ಅಮಾನತು ಮಾಡಲಾಗಿದೆ. ಜತೆಗೆ ನಿರ್ವಾಹಕ ನವೀನ್‌, ಖಾಸಗಿ ವ್ಯಕ್ತಿ ರೇವಂತ್‌ ವಿರುದ್ಧ ಕೋಡಿಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. -ನರಸಿಂಹರಾಜು, ಪ್ರಭಾರ ವ್ಯವಸ್ಥಾಪಕರು, ಸಾರಿಗೆ ಘಟಕ ಕನಕಪುರ

ಟಾಪ್ ನ್ಯೂಸ್

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Team India: BCCI moves to appoint new coach

Team India: ಹೊಸ ಕೋಚ್‌ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್‌ ನಲ್ಲಿ ಪೀಟರ್ಸನ್

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

6-Udupi-Bidar

Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ

Hubli: Vice President Dhankar inaugurated Mount Sumeru at the Varuri Navagraha Theertha site

ವರೂರಿ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸುಮೇರು ಪರ್ವತ ಉದ್ಘಾಟಿಸಿದ ಉಪರಾಷ್ಟ್ರಪತಿ ಧನಕರ್

Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-ramanagara

Ramanagara: ಬಸ್ ಪ್ರಯಾಣ ದರ ಹೆಚ್ಚಳ‌ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್‌ ಪ್ರತಿಭಟನೆ

Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್‌ ಪ್ರತಿಭಟನೆ

DK-Ramanagra

Ramanagara: ಡ್ರೋನ್‌ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

1-qeqew

ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ವಾಟರ್ ಬೋಟಿಂಗ್ ನಡೆಸಿದ ಯೋಗೇಶ್ವರ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Team India: BCCI moves to appoint new coach

Team India: ಹೊಸ ಕೋಚ್‌ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್‌ ನಲ್ಲಿ ಪೀಟರ್ಸನ್

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.