Lok Sabha Elections: ನಗರಸಭೆ ವಿರುದ್ಧ ಮತದಾನ ಬಹಿಷ್ಕಾರದ ಅಸ್ತ್ರ
Team Udayavani, Mar 20, 2024, 2:17 PM IST
ರಾಮನಗರ: ನಗರದ ತ್ಯಾಜ್ಯವನ್ನು ಸುರಿದು ನಮ್ಮ ಗ್ರಾಮವನ್ನು ಮಲಿನ ಮಾಡುತ್ತಿರುವ ರಾಮನಗರ ನಗರಸಭೆಯ ಕ್ರಮವನ್ನು ಖಂಡಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡು ವುದಾಗಿ ಅಚ್ಚಲು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಅಚ್ಚಲು ಗ್ರಾಮಸ್ಥರು ಮತದಾನ ಬಹಿಷ್ಕರಿ ಸುವು ದಾಗಿ ಹೇಳಿರುವ ಪೊàಸ್ಟ್ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ನಗರದ ತ್ಯಾಜ್ಯವನ್ನು ನಮ್ಮ ಗ್ರಾಮದ ಬಳಿ ತಂದು ಸುರಿದು ಬೆಂಕಿ ಹಾಕುತ್ತಿದ್ದು ಇದ ರಿಂದಾಗಿ ಆರೋಗ್ಯಕ್ಕೆ ಅಪಾಯ ಎದು ರಾ ಗಿದೆ. ಗ್ರಾಮಸ್ಥರ ಜೀವನವನ್ನು ನರಕ ಸದೃಶ್ಯ ಮಾಡಿ ರುವ ನಗರಸಭೆಯ ಕ್ರಮದ ವಿರುದ್ಧ ಮತದಾನ ಬಹಿ ಷ್ಕರಿಸಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿ ದ್ದಾರೆ.
ಉಸಿರು ಕಟ್ಟಿಸುತ್ತಿದೆ ಕಸ: ರಾಮನಗರ ನಗರದ 31ವಾರ್ಡ್‌ಗಳಲ್ಲಿ ಸಂಗ್ರಹಣೆಯಾಗುವ ಕಸವನ್ನು ಅಚ್ಚಲು ಗ್ರಾಮದ ಸಮೀಪ ಅರ್ಕಾವತಿ ನದಿಗೆ ಸುರಿದು ಪ್ರತಿದಿನ ಕಸದ ರಾಶಿಗೆ ಬೆಂಕಿ ಹಾಕಲಾ ಗುತ್ತಿದೆ. ಹೀಗೆ ಕಸದ ರಾಶಿಗೆ ನಗರಸಭೆ ಸಿಬ್ಬಂದಿ ಬೆಂಕಿ ಹಚ್ಚು ವುದರಿಂದ ದಟ್ಟ ಹೊಗೆ ಗ್ರಾಮದ ಸುತ್ತಾ ಸುತ್ತು ವರೆಯುತ್ತಿದೆ. ಸುಮಾರು ಒಂದು ಕಿಮೀ ದೂರ ಹೊಗೆ ಕವಿದು ಗ್ರಾಮಸ್ಥರು ಉಸಿರಾಡಲೂ ಪರ ದಾಡುವಂತಾಗಿದೆ.ಕೆಲ ತಿಂಗಳಿಂದ ಕಸಕ್ಕೆ ಬೆಂಕಿ ಹಾಕು ವುದರಿಂದ ಗ್ರಾಮದಲ್ಲಿ ದಟ್ಟ ಹೊಗೆ ಕವಿ ಯುತ್ತಿದ್ದು, ಜನತೆ ಹುಸಿ ರಾಡುವುದಕ್ಕೂ ಸಮಸ್ಯೆ ಯಾಗಿದೆ. ಪ್ಲಾಸ್ಟಿ ಹಾಗೂ ಇನ್ನಿ ತರ ಹಾನಿಕಾರಕ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಹೊಗೆ ಆವರಿಸಿ ಉಸಿರಾಡುವುದಕ್ಕೆ ಸಮಸ್ಯೆಯಾಗಿದೆ. ಜನ ತೆಗೆ ಮಾತ್ರವಲ್ಲ ಗ್ರಾಮದಲ್ಲಿನ ಜಾನುವಾರುಗಳ ಆರೋ ಗ್ಯಕ್ಕೂ ಹಾನಿಯಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಜನತೆ ಗ್ರಾಮದಲ್ಲಿ ವಾಸಿ ಸುವುದೇ ದುಸ್ಥರವಾಗುತ್ತದೆ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.
ಮತ ಹಾಕೋಲ್ಲ: ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಜೀವವಿದ್ದರೆ ರಾಜಕೀಯ ನಮಗೆ ಮತದಾನದ ಹಕ್ಕಿಗಿಂತ ಮೊದಲು ಬದುಕುವ ಹಕ್ಕು ಬೇಕು. ನಮಗೆ ಅವಕಾಶ ನೀಡದೆ ಹೋದಲ್ಲಿ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ. ನಮ್ಮ ಗ್ರಾಮ ಸ್ಥರು ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿ ಕಾರಿಗಳು ಇತ್ತ ಗಮನಹರಿಸಿ ನಮ್ಮ ಜನ ನೆಮ್ಮದಿ ಯಿಂದ ಬದುಕು ವಾತಾವರಣ ನಿರ್ಮಾಣವಾಗದ ಹೊರತು ಮತದಾನ ಬಹಿಷ್ಕರಿಸುವುದಾಗಿ ಗ್ರಾಮ ಸ್ಥರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ನಾವು ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಅಪರ ಜಿಲ್ಲಾಧಿ ಕಾರಿ ಶಿವಾನಂದ ಮೂರ್ತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ ಆದರೂ, ಸಮಸ್ಯೆ ಬಗೆಹರಿದಿಲ್ಲ ಈ ಕಾರಣದಿಂದಾಗಿ ಮತದಾನ ಬಹಿಷ್ಕಾರ ಅನಿವಾರ್ಯ ಎಂದು ತಿಳಿಸಿದ್ದಾರೆ.
ಅಚ್ಚಲು ಗ್ರಾಮದ ಸಮೀಪ ಇರುವ ಅರ್ಕಾವತಿ ನದಿಗೆ ರಾಮನಗರ ಪಟ್ಟ ಣದ ತ್ಯಾಜ್ಯವನ್ನು ತಂದು ಸುರಿಯುತ್ತಿ ದ್ದಾರೆ. ಬೆಳಗ್ಗಿನ ಜಾವ ಅಥವಾ ಸಂಜೆಯ ವೇಳೆ ಈ ತ್ಯಾಜ್ಯಕ್ಕೆ ಬೆಂಕಿಹಾಕಿ ಹೋಗು ತ್ತಾರೆ. ಇದರಿಂದಾಗಿ ಇಡೀ ಗ್ರಾಮದ ಜನ, ಜಾನು ವಾರುಗಳು ಆರೋಗ್ಯ ತಪ್ಪುತ್ತಿವೆ. ಉಸಿರಾಟಕ್ಕೂ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಗ್ರಾಮ ಸ್ಥರು ಹೋರಾಟಕ್ಕೆ ಸಜ್ಜಾಗುತ್ತಾರೆ. -ಗೋಪಾಲ್, ಗ್ರಾಪಂ ಸದಸ್ಯ, ಹುಣಸನಹಳ್ಳಿ, ರಾಮನಗರ.
ಕೂಡಲೇ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ ನೀಡಿ ಸಮಸ್ಯೆ ಪರಿಹರಿಸು ವಂತೆ ಸೂಚಿಸಲಾಗಿದೆ. ಮತದಾನ ಬಹಿ ಷ್ಕಾರ ಮಾಡದಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗುವುದು. ಸಮಸ್ಯೆ ಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. -ಶಿವಾನಂದ ಮೂರ್ತಿ, ಅಪರ ಜಿಲ್ಲಾಧಿಕಾರಿ, ರಾಮನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.