Ramnagar: ಇಯರ್ ಫೋನ್ ಹಾಕಿದ್ದ ಯುವಕನಿಗೆ ರೈಲು ಡಿಕ್ಕಿ; ಸಾವು
Team Udayavani, Jun 29, 2024, 11:53 AM IST
ಸಾಂದರ್ಭಿಕ ಚಿತ್ರ
ರಾಮನಗರ: ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲು ಹಳಿಗೆ ಹೊಂದಿಕೊಂಡಂತೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ರೈಲು ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿಯ ಎ.ಎಸ್.ಶ್ರೀನಿವಾಸ್ (26) ಮೃತ ಯುವಕ.
ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಬೆಳಗ್ಗೆ ಬಿಡದಿ ನಿಲ್ದಾಣಕ್ಕೆ ರೈಲೊಂದರಲ್ಲಿ ಬಂದಿಳಿದಿದ್ದನು. ನಂತರ, ಕಿವಿಗೆ ಇಯರ್ ಫೋನ್ ಹಾಕಿಕೊಂಡು ನಿಲ್ದಾಣದಿಂದ ಅನತಿ ದೂರದಲ್ಲಿ ಹಳಿಗೆ ಹೊಂದಿಕೊಂಡಂತೆ ನಡೆದುಕೊಂಡು ಹೋಗುತ್ತಿದ್ದ. ಆಗ ಅದೇ ಮಾರ್ಗದಲ್ಲಿ ಬಂದಿರುವ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಇಯರ್ ಫೋನ್ ಹಾಕಿದ್ದರಿಂದಾಗಿ ಶ್ರೀನಿವಾಸ್ ಅವರಿಗೆ ರೈಲು ಬರುವುದು ಗೊತ್ತಾಗಿಲ್ಲ. ಡಿಕ್ಕಿಯ ರಭಸಕ್ಕೆ ಅವರು ಹಳಿ ಪಕ್ಕಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಶವ ಗಮನಿಸಿ ನಿಲ್ದಾಣದ ಅಧಿಕಾರಿಗೆ ಮಾಹಿತಿ ನೀಡಿದರು. ಬಳಿಕ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಕುಟುಂಬದವರಿಗೆ ವಿಷಯ ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.