ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ
Team Udayavani, Jun 29, 2019, 4:10 PM IST
ಬೆಂಗಳೂರು-ಮೈಸೂರು ಹೆದ್ದಾರಿ.
ಚನ್ನಪಟ್ಟಣ: ಬೆಂಗಳೂರು- ಮೈಸೂರು ಹೆದ್ದಾರಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮಪುರಿಯ ರಹದಾರಿಯಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಘಟಿಸುವುದು ಸಾಮಾನ್ಯ ಸಂಗತಿ ಎಂಬಂತಾಗಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆ ಪಾಲಾದರೆ, ಗಂಭೀರ ಗಾಯಗೊಂಡ ಅಮಾಯಕರು ಯಮನ ಪಾದ ಸೇರುತ್ತಿದ್ದಾರೆ.
ಹೌದು, ಹೆದ್ದಾರಿಯಲ್ಲಿ ದಿನನಿತ್ಯ ಬೈಕ್, ಕಾರು ಅಪಘಾತ, ಪಾದಚಾರಿಗಳಿಗೆ ಡಿಕ್ಕಿಯಂತಹ ಪ್ರಕರಣಗಳು ಸಂಭವಿಸುತ್ತಲೇ ಇದೆ. ಚಾಲಕರ ನಿರ್ಲಕ್ಷ್ಯ, ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತ ಪ್ರಮಾಣ ಮಿತಿ ಮೀರುತ್ತಿದೆ. ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮಿತಿಮೀರಿದ ವೇಗ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ವೇಗಮಿತಿ ನಿಗದಿಗೊಳಿಸಿದ್ದರೂ ವಾಹನ ಚಾಲಕರ ಹಾಗೂ ನಿಯಂತ್ರಣ ಹೇರಬೇಕಾದವರ ಡೋಂಟ್ಕೇರ್ ಪ್ರವೃತ್ತಿಯಿಂದ ವೇಗಕ್ಕೆ ಮಿತಿಯೇ ಇಲ್ಲವಾಗಿದೆ.
ವೇಗ ನಿಯಂತ್ರಿಸದ ರಸ್ತೆ ಉಬ್ಬುಗಳು: ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ. ಆದರೂ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆಲವೆಡೆ ರಸ್ತೆ ಉಬ್ಬುಗಳು ಹೆಸರಿಗೆ ಮಾತ್ರ ಎಂಬಂತಾಗಿದ್ದು, ಭಾರೀ ವಾಹನ ಚಾಲಕರುಗಳ ಕಣ್ಣಿಗೆ ಇವು ಕಾಣಿಸುತ್ತಲೇ ಇಲ್ಲ.
ಇನ್ನು ಈ ಹಿಂದೆ ಆಯ್ದ ಸ್ಥಳಗಳಲ್ಲಿ ನಿಧಾನವಾಗಿ ಚಲಿಸಲೆಂದು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ, ಅವುಗಳನ್ನು ಲೆಕ್ಕಿಸದೆ ಭಾರೀ ವಾಹನಗಳ ಚಾಲಕರು ಅವುಗಳಿಗೇ ಗುದ್ದಿಕೊಂಡು ಹೋಗಿದ್ದರಿಂದ ಬ್ಯಾರಿಕೇಡ್‌ಗಳು ಅಸ್ತಿತ್ವವನ್ನೇ ಕಳೆದುಕೊಂಡವು. ಹಾಗಾಗಿ ಆ ಸಹವಾಸಕ್ಕೆ ಮತ್ತೆ ಪೊಲೀಸರು ಹೋಗಿಲ್ಲ.
ಚಾಲಕರ ಆಟ ಪಾದಚಾರಿಗಳಿಗೆ ಪ್ರಾಣ ಸಂಕಟ: ಇನ್ನು ಹೆದ್ದಾರಿಯಲ್ಲಿ ಸಾಗುವ ಕಾರುಗಳ ಚಾಲಕರುಗಳ ಕಣ್ಣು ರಸ್ತೆಯ ಮೇಲಿಲ್ಲ ಎಂಬುದಕ್ಕೆ ಅಪಘಾತಗಳ ಸಂಖ್ಯೆಯೇ ಸಾಕ್ಷಿಯಾಗಿದೆ. ಬಹುತೇಕ ಪಾದಚಾರಿಗಳಿಗೆ ಈ ಕಾರುಗಳೇ ಯಮಪುರಿಯ ಹಾದಿ ತೋರಿಸಿದ್ದು, ಇನ್ನೂ ಕೆಲವೆಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೇ ಪೆಟ್ಟಾಗಿದೆ.
ಮಿತಿಮೀರಿದ ವೇಗದಿಂದ ಚಲಿಸುವ ಈ ಕಾರುಗಳ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ತಮ್ಮಿಷ್ಟ ಬಂದಂತೆ ಚಾಲನೆ ಮಾಡುತ್ತಿದ್ದಾರೆ. ತಿರುವು ಪಡೆದುಕೊಳ್ಳುವ ಕಡೆಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಹೆದ್ದಾರಿ ದಾಟುವ ನಾಗರಿಕರ ರೋಧನೆ ಹೇಳತೀರದಾಗಿದೆ.
ಹೆದ್ದಾರಿ ದಾಟಲು ಹರಸಾಹಸ: ಗ್ರಾಮಾಂತರ ಭಾಗದಲ್ಲಿ ಹೆದ್ದಾರಿ ದಾಟಲು ನಾಗರಿಕರು ಹರಸಾಹಸಪಡುವಂತಾಗಿದೆ. ಸಾಲುಗಟ್ಟಿ ವೇಗವಾಗಿ ಬರುವ ವಾಹನಗಳಿಂದಾಗಿ ರಸ್ತೆ ದಾಟಲು ಪ್ರಾಯಾಸಪಡುವಂತಾಗಿದೆ. ರಜಾ ದಿನಗಳಲ್ಲಂತೂ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಫುಟ್ಪಾತ್ ಇಲ್ಲ: ಹೆದ್ದಾರಿಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಅಥವಾ ಸರ್ವೀಸ್ ರಸ್ತೆ ಇಲ್ಲದಿರುವುದು ಪಾದಚಾರಿಗಳ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಹೆದ್ದಾರಿಯ ಬದಿಗಳಲ್ಲಿ ಮಣ್ಣಿನ ರಸ್ತೆ ಇದೆ. ಆದರೂ ಪಟ್ಟಣ ವ್ಯಾಪ್ತಿಯಲ್ಲಿ ಇದ್ದರೂ ಅದೂ ಬಳಸಲಾಗದ ಸ್ಥಿತಿಯಲ್ಲಿದೆ. ಪಾದಚಾರಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್ ಮಾಡುತ್ತಿರುವುದರಿಂದ ಪಾದಚಾರಿಗಳು ಫುಟ್ಪಾತ್ ಬಿಟ್ಟು ಹೆದ್ದಾರಿಯಲ್ಲಿ ಚಲಿಸುತ್ತಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದು ಬದುಕಿಗೆ ಫುಲ್ಸ್ಟಾಪ್ ಹಾಕುತ್ತಿವೆ.
ವೇಗಮಿತಿ ಫಲಕ ಅಳವಡಿಸಿ: ಹೆದ್ದಾರಿಯಲ್ಲಿ ವೇಗಮಿತಿ ಫಲಕಗಳನ್ನು ಅಲ್ಲಲ್ಲಿ ಸ್ಥಾಪಿಸಿದರೆ ವಾಹನ ಚಾಲಕರಿಗೂ ಇದರ ಬಗ್ಗೆ ತಿಳಿಯುತ್ತದೆ. ಆದ್ದರಿಂದ ವೇಗ ನಿಯಂತ್ರಣವಾಗಬಹುದು ಎಂಬುದು ಹೆದ್ದಾರಿ ಬದಿಯ ಗ್ರಾಮವಾಸಿಗಳ ಅಭಿಪ್ರಾಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಹೆದ್ದಾರಿ ಸಾಗಿರುವ ಗ್ರಾಮೀಣ ಭಾಗದಲ್ಲಿ ಇಂಥಹ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.
● ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.