Ramnagar: ಸಂರಕ್ಷಿತ ಸ್ಮಾರಕಗಳ ಅಭಿವೃದ್ಧಿಗೆ ದತ್ತು ಯೋಜನೆ


Team Udayavani, Nov 21, 2023, 1:17 PM IST

Ramnagar: ಸಂರಕ್ಷಿತ ಸ್ಮಾರಕಗಳ ಅಭಿವೃದ್ಧಿಗೆ ದತ್ತು ಯೋಜನೆ

ರಾಮನಗರ: ನಾಡಿನ ಪಾರಂಪರಿಕ ಸ್ಮಾರಕಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ರಾಜ್ಯ ಪುರಾತತ್ವ ಇಲಾಖೆ ಮತ್ತು ಸ್ಮಾರಕ ದತ್ತು ಯೋಜನೆಯನ್ನು ಜಾರಿಗೆ ತಂದಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ ಎರಡು ದೇವಾಲಯಗಳ ದತ್ತುಗೆ ಮೊದಲ ಹಂತದಲ್ಲಿ ಆಸಕ್ತರಿಂದ ಎಕ್ಸ್‌ಪ್ರೆಸ್‌ ಆನ್‌ ಇನೆóಸ್ಟ್‌ (ಇಓಐ) ಮೇರೆಗೆ ದತ್ತು ಸರ್ಕಾರ ಮುಂದಾಗಿದೆ.

ಸೆ.24ರಂದು ರಾಜ್ಯ ಸರ್ಕಾರ ಸ್ಮಾರಕಗಳನ್ನು ದತ್ತು ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಹೊಂದಿರುವ ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಸ್ಮಾರಕಗಳಿಗೆ ಮೂಲ ಸೌಕರ್ಯ ಹಾಗೂ ಅವುಗಳನ್ನು ಉತ್ತಮ ಪ್ರವಾಸಿತಾಣವಾಗಿಸುವ ಉದ್ದೇಶದೊಂದಿಗೆ ಸ್ಮಾರಕಗಳ ದತ್ತು ಯೋಜನೆಯನ್ನು ಪರಿಚಯಿಸಿದೆ.

ಜಿಲ್ಲೆಯ ಸಂರಕ್ಷಿಯ ಸ್ಮಾರಕಗಳು: ರಾಮನಗರ ಜಿಲ್ಲೆಯ 6 ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳು ಎಂದು ಗುರು ತಿಸಲಾಗಿದೆ. ಚನ್ನಪಟ್ಟಣ ತಾಲೂಕಿನ ಅಬ್ಬೂರು ಗ್ರಾಮ ದ ಲ್ಲಿರುವ ಕುಂದಾಪುರ ವ್ಯಾಸರಾಜಮಠ, ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಸೀತಾ-ರಾಮದೇವರ ದೇವಾಲಯ, ದೊಡ್ಡಮಳೂರಿನ ಅಪ್ರಮೇಯಸ್ವಾಮಿ ದೇವಾಲಯ, ಮಾಗಡಿ ತಾಲೂ ಕಿನ ಹಿರಿಯ ಕೆಂಪೇಗೌಡರ ವೀರಸಮಾಧಿ, ಮಾಗಡಿ ಕೋಟೆ, ರಾಮನಗರ ಮಿಸ್ಟರ್‌ ಕ್ಲೋಸ್‌ ನೆನಪಿನ ಶಾಸನವನ್ನು ಜಿಲ್ಲೆಯ ಸಂರಕ್ಷಿತ ಸ್ಮಾರಗಳು ಎಂದು ಗುರುತಿಸಲಾಗಿದೆ.

2 ಸ್ಮಾರಕಗಳ ದತ್ತುಗೆ ಕ್ರಮ: ಜಿಲ್ಲೆಯ 6 ಸ್ಮಾರಕಗಳ ಪೈಕಿ ಎರಡು ಸ್ಮಾರಕಗಳನ್ನು ಮೊದಲ ಹಂತದಲ್ಲಿ ದತ್ತು ನೀಡುವುದಕ್ಕೆ ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ಮುಂದಾಗಿದೆ. ಈ ಎರಡು ಸ್ಮಾರಕಗಳಿಗೆ ಸಂಬಂಧಿಸಿದಂತೆ 3ಡಿ ನಕ್ಷೆ, ಈ ದೇವಾಲಯಗಳ ಚಿತ್ರ, ಮಾಹಿತಿ, ಜಿಯೋ ಇಂಡೆಕ್ಸ್‌ ಮ್ಯಾಪ್‌ ಸೇರಿದಂತೆ ದತ್ತು ಸ್ವೀಕರಿಸುವವರು ಸುಲಭ ವಾಗಿ ಇವುಗಳನ್ನು ಗುರುತಿಸಲು ಹಾಗೂ ಈ ಸ್ಮಾರಕಗಳ ದತ್ತುಬಗ್ಗೆ ಮಾಹಿತಿ ಸರಳವಾಗಿ ಸಿಗುವಂತೆ https://nammasmaraka.in  ಪೇಜ್‌ನಲ್ಲಿ ಸ್ಮಾರಕಗಳ ವಿವರವನ್ನು ಅಪ್‌ಲೋಡ್‌ ಮಾಡಲಾಗಿದೆ.

ಅಭಿವೃದ್ಧಿಗಷ್ಟೇ ದತ್ತು; ಮಾಲಿಕತ್ವ ಸರ್ಕಾರದ್ದೇ: ಸ್ಮಾರಕಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದ ಜೊತೆ ಸಾರ್ವಜನಿಕ ಸಹ ಭಾಗಿತ್ವವೂ ಅಗತ್ಯ ಎಂಬ ಉದ್ದೇಶದಿಂದ ಸ್ಮಾರಕಗಳ ದತ್ತು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಆಸಕ್ತ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ಕಂಪೆನಿಗಳು, ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಕಾರ್ಯಕ್ರಮದಲ್ಲಿ ಸ್ಮಾರಕಗಳನ್ನು ದತ್ತು ಪಡೆಯಲು ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಸ್ಮಾರಕಗಳನ್ನು ದತ್ತು ಪಡೆಯುವ ಸಂಘ- ಸಂಸ್ಥೆಯನ್ನು “ಸ್ಮಾರಕ ಮಿತ್ರ’ ಎಂದು ಕರೆಯಲಾಗುತ್ತದೆ. ಹಾಗೆಯೇ ಮೂಲಭೂತ ಪ್ರವಾಸಿ ಸೌಕ ರ್ಯಗಳು, ಸುಧಾರಿತ ಪ್ರವಾಸಿ ಸೌಕರ್ಯಗಳು, ಸಂರಕ್ಷಣಾ ಕಾರ್ಯಗಳನ್ನು ಗುರುತಿಸಿದೆ.

ಆ ದಿಸೆಯಲ್ಲಿ ಸ್ಮಾರಕ ಮಿತ್ರವು ನೋಡಲ್‌ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಲಿದೆ. ಸ್ಮಾರಕ ಸಂರಕ್ಷಣೆಗೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ಪ್ರಮುಖವಾಗಿದೆ. ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್‌ ನಿರ್ಮಾ ಣ, ಉದ್ಯಾನ ನಿರ್ವ ಹಣೆ, ಅಂತರ್ಜಾಲ ಸಂಪರ್ಕ, ಸಿಸಿಟೀವಿ ಅಳವಡಿ ಸುವುದು, ಅಗತ್ಯ ಪೀಠೊಪಕರಣ ಗಳನ್ನು ಇಡುವುದು, ಧ್ವನಿ ಬೆಳಕು ಕಾರ್ಯಕ್ರಮದ ಅನುಷ್ಠಾನಕ್ಕೆ ಕ್ರಮ ವಹಿಸಬಹುದಾಗಿದೆ.

ಅಧ್ಯಯನ ಕೇಂದ್ರವನ್ನೂ ಮಾಡಬಹುದು. ದತ್ತು ಪಡೆಯಲು ಮುಂದಾಗುವ ಸಂಘ-ಸಂಸ್ಥೆಗಳು ದಾಸ್ತಾ ವೇಜನ್ನು ಪರಿಶೀಲಿಸಿ ಅನುಮೋದನೆ ನೀಡಲು ಪ್ರವಾಸೊ àದ್ಯಮ ಇಲಾ ಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಮಾರಕ ದತ್ತುಗಾಗಿ ಅಧಿಕಾರ ಸಮಿತಿ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಲಿದೆ. ಇನ್ನು ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡುವುದು ಮಾತ್ರ ದತ್ತು ಪಡೆದವರ ಜವಾಬ್ದಾರಿಯಾಗಿದ್ದು ಸ್ಮಾರಕಗಳ ಮಾಲಿಕತ್ವ ಸರ್ಕಾರವೇ ಹೊಂದಿರುತ್ತದೆ. ಈ ದತ್ತು ಸೀಮಿತ ಅವಧಿಗೆ ಮಾತ್ರ ನಿಗದಿಯಾಗಿರುತ್ತದೆ.

ಜಿಲ್ಲೆಯಲ್ಲಿ 6 ಸ್ಮಾರಕಗಳು : ಜಿಲ್ಲೆಯ 6 ಸ್ಮಾರಕಗಳ ಪೈಕಿ ಎರಡು ಸ್ಮಾರಕಗಳನ್ನು ಮೊದಲ ಹಂತದಲ್ಲಿ ದತ್ತು ನೀಡುವುದಕ್ಕೆ ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ಮುಂದಾಗಿದೆ. ಚನ್ನಪಟ್ಟಣ ತಾಲೂಕಿನ ದೊಡ್ಡ ಮ ಳೂರು ಗ್ರಾಮದ ಅಪ್ರಮೇಯಸ್ವಾಮಿ ದೇವಾ ಲಯ ಮತ್ತು ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ರಾಮದೇವರು ಮತ್ತು ಸೀತಾದೇವಿ ದೇವಾ ಲಯದ ದತ್ತುಗೆ ಇಓಪಿ ಸಿದ್ದಪಡಿಸಿದ್ದು, ಜಾಗತಿಕವಾಗಿ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆಯುವುದಕ್ಕೆ ಟೆಂಡರ್‌ ಕರೆಯಲಾಗಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ: ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಅನುಷ್ಠಾನ ಮತ್ತು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರಕ ಸಮಿತಿ ರಚಿಸಲಾಗುತ್ತದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ, ಸ್ಮಾರಕಗಳ ಬಳಿ ಪ್ರವಾಸೋದ್ಯಮ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಿಎಸ್‌ಆರ್‌ ನಿಧಿಯಡಿ ರಾಜ್ಯದ ಕಲೆ, ಸಂಸ್ಥೆ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.